![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 4, 2021, 3:00 PM IST
ಮುಂಬಯಿ: ಸುಮಾರು 1000 ಸಾಲು ಮರಗಳು, ಸುಂದರ ಶಿಲ್ಪಗಳು, ಪರಿಸರ ಸ್ನೇಹಿ ಮರದ ಜಿಮ್ನಾಶಿಯಂ, ವೀಕ್ಷಣ ಗೋಪುರ, ಬಿದಿರಿನ ಬೇಲಿ ಹೊಂದಿರುವ ಮಾಹಿಮ್ ರೇತಿ ಬಂದರ್ ಚೌಪಟ್ಟಿ ಈಗ ಪ್ರವಾಸಿಗರಿಗೆ ಹೊಸ ಆಕರ್ಷಣೆಯ ತಾಣವಾಗಿದೆ.
ಮುಂಬಯಿಯ ಸಮುದ್ರ ತೀರಗಳು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಆದರೆ ಮುಂಬಯಿಯ ರೇತಿ ಬಂದರಿನ ಸ್ಥಿತಿ ಕಳಪೆಯಾಗಿತ್ತು. ಇದಕ್ಕಾಗಿ ಮುಂಬಯಿ ಮಹಾನಗರ ಪಾಲಿಕೆಯು ಸುಮಾರು 4 ಕೋಟಿ ರೂ. ವೆಚ್ಚ ಮಾಡಿ ಚಿತ್ರಣವನ್ನೇ ಬದಲಿಸಿದೆ. ಇಲ್ಲಿ ವಿವಿಧ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಮುಂಬಯಿ ಮಹಾನಗರ ಪಾಲಿಕೆಯು ರೇತಿ ಬಂದರಿಗೆ ಹೊಸತನ ನೀಡಲು ವಿವಿಧ ಕ್ರಮಗಳನ್ನು ಯೋಜಿಸಿದೆ. ಚಂಡಮಾರುತವನ್ನು ಎದುರಿಸಲು ಸೈಪ್ರಸ್ ಮರಗಳನ್ನು ಇಲ್ಲಿ ಬಳಕೆ ಮಾಡ ಲಾಗಿದೆ. ಅಲ್ಲದೆ ಮುಂಬಯಿಯಲ್ಲಿ ಪ್ರಥಮ ಬಾರಿಗೆ ಮರದ ವಸ್ತುಗಳಿರುವ ಜಿಮ್ನಾಶಿಯಂ ಅನ್ನು ನಿರ್ಮಿಸಲಾಗಿದೆ. ಕರಾವಳಿಯನ್ನು ತುಂಬಲು ಐದು ಅಡಿಗಳಷ್ಟು ಮರಳನ್ನು ಬಳಸಲಾಗಿದೆ.
ಇದನ್ನೂ ಓದಿ:‘ಇಡಾ’ ಚಂಡಮಾರುತಕ್ಕೆ ಮುಳುಗಿದ ನ್ಯೂಯಾರ್ಕ್
ಬೀಚ್ ರಕ್ಷಣ ಗೋಡೆಯಲ್ಲಿ ಮಾಹಿಮ್ ಪ್ರದೇಶ ಸಹಿತ ಮುಂಬ ಯಿಯ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಸುಂದರ ವರ್ಣಚಿತ್ರಗಳನ್ನು ಚಿತ್ರಿಸಲಾಗಿದೆ. ನಾಗರಿಕರು ಸುಲಭವಾಗಿ ನಡೆ ದಾಡಲು ಕಡಲತೀರದಲ್ಲಿ ಕಲ್ಲಿನ ಕಾಲುದಾರಿ ನಿರ್ಮಿಸಲಾಗಿದೆ.
30 ಮೀ. ಎತ್ತರದ ವೀಕ್ಷಣ ಗೋಪುರ
ಮಾಹಿಮ್ ತೀರವನ್ನು ವೀಕ್ಷಿಸಲು ಸುಮಾರು 30 ಮೀ. ಎತ್ತರದ ವೀಕ್ಷಣ ಗೋಪುರವನ್ನು ನಿರ್ಮಿಸ ಲಾಗಿದೆ. ಗೋಪುರವು ವಂಡಾ – ವರ್ಲಿ ಸಮುದ್ರ ಸಂಪರ್ಕದೊಂದಿಗೆ ಅರೇಬಿಯನ್ ಸಮುದ್ರವನ್ನು ನೋಡಬಹುದು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.