ಉಪಕರಣಗಳ ದೀರ್ಘ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್: ಸೀಲಿಂಗ್ ಫ್ಯಾನ್
Team Udayavani, May 11, 2020, 11:11 AM IST
ಸಾಂದರ್ಭಿಕ ಚಿತ್ರ
1. ತಿಂಗಳಿಗೊಮ್ಮೆಯಾದರೂ ಫ್ಯಾನ್ ಅನ್ನು ಸ್ವಚ್ಚಗೊಳಿಸಿ. ಮೊದಲಿಗೆ ಬ್ರಶ್ ನಿಂದ ಧೂಳನ್ನು ಕೊಡವಿರಿ. ನಂತರ, ಸೋಪು ನೀರಿನ ಒದ್ದೆ ಬಟ್ಟೆಯಿಂದ ಬ್ಲೇಡನ್ನು ಒರೆಸಿರಿ. ಇದರಿಂದ ಬ್ಲೇಡಿನಲ್ಲಿ ಅಂಟಿದ ಗಟ್ಟಿ ಕಲೆಗಳು ಹೋಗುತ್ತವೆ. ನಂತರ ಫ್ಯಾನನ್ನು ಬಳಸುವ ಮುನ್ನ ಆರಲು ಬಿಡಿ. ವ್ಯಾಕ್ಯೂಮ್ ಕ್ಲೀನರ್ ಇದ್ದರೆ, ಫ್ಯಾನಿನ ಮೋಟಾರ್ ಇರುವ ಭಾಗವನ್ನು ಸ್ವಚ್ಛಗೊಳಿಸಬಹುದು.
2. ಫ್ಯಾನಿನಲ್ಲಿ ಚಿಕ್ಕ ಚಿಕ್ಕ ಸ್ಕ್ರೂಗಳಿರುತ್ತವೆ. ಫ್ಯಾನ್ ಚಾಲೂ ಮಾಡುವಾಗ, ಚಿಕ್ಕದಾಗಿಯಾದರೂ ಅಲುಗಾಟ, ವೈಬ್ರೇಷನ್ಗಳು ಇರುತ್ತವೆ. ಫ್ಯಾನ್ ನಿರಂತರವಾಗಿ ತಿರುಗುವುದರಿಂದ, ವೈಬ್ರೇಷನ್ ಕಾರಣಕ್ಕೆ, ಸ್ಕ್ರೂಗಳು ಲೂಸ್ ಆಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅದನ್ನು ಟೈಟ್ ಮಾಡುತ್ತಿರಬೇಕಾಗುತ್ತದೆ.
3. ಕೆಲ ಫ್ಯಾನುಗಳು ಸದ್ದಿಲ್ಲದಂತೆ ಕಾರ್ಯಾಚರಿಸಲು, ಲುಬ್ರಿಕೇಟ್ ಮಾಡಬೇಕಾಗುತ್ತದೆ. ಹೊಲಿಗೆ ಯಂತ್ರಕ್ಕೆ ಹಾಕುವ ಎಣ್ಣೆಯಂಥದೇ ಮಾದರಿಯ ಲ್ಯೂಬ್ರಿಕ್ಯಾಂಟ್ ಆಯಿಲ್ ಬಳಸಬಹುದು. ಫ್ಯಾನ್ ಮೋಟಾರ್ನ ಮೇಲ್ಗಡೆ, ಆಯಿಲ್ ಹೋಲ್ ಇರುತ್ತದೆ. ಅದರೊಳಗೆ ಎಣ್ಣೆಯನ್ನು ಹಾಕಬೇಕು.
4. ಫ್ಯಾನು ತಿರುಗುವಾಗ, ಹೆಚ್ಚು ಅಲುಗಾಟ ನಡೆಸಬಾರದು. ಕೆಲ ಫ್ಯಾನುಗಳು ಕೆಲವೊಮ್ಮೆ ಯರ್ರಾಬಿರ್ರಿ ಅಲುಗಾಡುವುದಿದೆ. ಇದು, ಫ್ಯಾನಿನ ಫಿಟ್ಟಿಂಗಿಗೆ ಕುತ್ತು ತರಬಹುದು. ಬ್ಲೇಡುಗಳು ಬೆಂಡ್ ಆಗಿದ್ದರೆ ಹೀಗಾಗುವುದಿದೆ. ಮೂರು ಬ್ಲೇಡುಗಳನ್ನು ಬಿಚ್ಚಿ, ಒಂದರ ಮೇಲಿನ್ನೊಂದರಂತೆ ಇರಿಸಿದಾಗ ಮೂರೂ ಸರಿಯಾಗಿ ಕೂತುಕೊಳ್ಳಬೇಕು. ಯಾವುದಾದರೂ ಒಂದು ಸರಿಯಾಗಿ ಕೂತುಕೊಳ್ಳುತ್ತಿಲ್ಲ ಎಂದರೆ, ಆ ಬ್ಲೇಡಿನಲ್ಲಿ ಸಮಸ್ಯೆಯಿದೆ ಎಂದು ತಿಳಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.