Malaprabha ಮತ್ತೆ ಪ್ರವಾಹದ ಭೀತಿ; ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ
Team Udayavani, Aug 27, 2024, 9:08 PM IST
ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ): ನವಿಲುತೀರ್ಥ ಜಲಾಶಯದಿಂದ ಮತ್ತೆ ಮಲಪ್ರಭಾ ನದಿಗೆ ನೀರನ್ನು ಬಿಡಲಾಗಿದೆ. ಎರಡು ದಿನಗಳ ಹಿಂದೆ 2ರಿಂದ 8ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗಿತ್ತು. ಸದ್ಯ 10ರಿಂದ 15 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದ್ದು ಪ್ರವಾಹದ ನೀರು ನದಿ ಪಾತ್ರದ ಗ್ರಾಮಗಳಿಗೆ ತಟ್ಟಲಿದೆ.
ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು ಸತತ ಮಳೆಗೆ ನವಿಲುತಿರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಆಣೆಕಟ್ಟಿನ ಪೂರ್ಣಮಟ್ಟ 2079.50 ಅಡಿಗಳಿಗೆ ವಿರುದ್ದವಾಗಿ 2078.10 ಅಡಿಗಳಿಗೆ ತಲುಪಿದೆ. ಪ್ರಸ್ತುತ ಒಳಹರಿವು 10,000 ಸಾವಿರ ಕ್ಯೂಸೆಕ್ ಇದ್ದು ಮುಂಜಾಗೃತಾ ಕ್ರಮವಾಗಿ 15,000 ಸಾವಿರ ಕ್ಯೂಸೆಕ್ ನದಿ ಮೂಲಕ ಹೊರ ಬಿಡಲಾಗಿದೆ. ಮಲಪ್ರಭಾ ಅಣೆಕಟ್ಟಿನ ಕೆಳಭಾಗದಲ್ಲಿನ ಗ್ರಾಮಗಳಿಗೆ ಜಲಾಶಯದ ಅಭಿಯಂತರ ವಿವೇಕ ಮುದಿಗೌಡ್ರ ಎಚ್ಚರಿಕೆ ನೀಡಿದ್ದು ಮುಂಜಾಗೃತ ವಹಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರಿಗೆ ವಿನಂತಿಸಿದ್ದಾರೆ.
ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಬೀತಿ ಶುರುವಾಗಿದೆ. ಕಳೆದ ತಿಂಗಳಿಂದ ಪ್ರವಾಹದ ನೀರು ಬಂದು ರೈತರ ಬೆಳೆಗಳು ನಾಶವಾಗಿದ್ದವು. ಸದ್ಯ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದ ರೈತರು ಮತ್ತೆ ಪ್ರವಾಹದ ಬೀತಿ ಎದುರಿಸುವಂತಾಗಿದೆ. ಚೇತರಿಸಿಕೊಂಡ ಪೇರಲ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತೆ ಜಲಾವೃತಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೇತುವೆ ಜಲಾವೃತ: ಹುಬ್ಬಳ್ಳಿ-ಸೊಲ್ಲಾಪೂರ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.