Malaysia: ಶರಿಯತ್ ಕಾನೂನು ಜಾರಿಗೆ ಮಲೇಷ್ಯಾ ಸುಪ್ರೀಂ ತಿರಸ್ಕಾರ
ಪ್ರಾಂತೀಯ ಸರಕಾರ ನಿಯಮಕ್ಕೆ ತಡೆ
Team Udayavani, Feb 10, 2024, 12:02 AM IST
ಕೌಲಾಲಂಪುರ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಲೇಷ್ಯಾದ ಕೆಲತಾನ್ ಪ್ರಾಂತೀಯ ಸರಕಾರ ಇಸ್ಲಾಮಿಕ್ ಧಾರ್ಮಿಕ ನಿಯಮಗಳ ಆಧಾರದಲ್ಲಿ ರಚಿಸಿದ 16 ಕಾನೂನುಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಈ ಕಾನೂನುಗಳು ಸರ್ಕಾ ರದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ ಎಂದು ಅಲ್ಲಿನ ಸುಪ್ರೀಂಕೋರ್ಟ್ 8-1ರ ಅನುಪಾತದಲ್ಲಿ ತೀರ್ಪು ನೀಡಿದೆ.
“ಮಲೇಷ್ಯಾದಾದ್ಯಂತ ಇಸ್ಲಾಂ ಧರ್ಮದ ಆಧಾರದಲ್ಲಿ ಕಾನೂನುಗಳು ಇವೆ ಎಂದ ಮಾತ್ರಕ್ಕೆ ಪ್ರಾಂತೀಯ ಸರಕಾರದಲ್ಲಿಯೂ ಅದೇನ ನಿಯಮಮಗಳು ಜಾರಿ ಆಗಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇಸ್ಲಾಮಿಕ್ ಧಾರ್ಮಿಕ ನಿಯಮಗಳ ಆಧಾರದಲ್ಲಿ ಪ್ರಾಂತೀಯ ಸರಕಾರ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ಶಿಕ್ಷೆ ವಿಧಿಸುತ್ತಿತ್ತು. ಆ ಪ್ರಾಂತ್ಯದಲ್ಲಿ ಪಾನ್ ಮಲೇಷ್ಯನ್ ಇಸ್ಲಾಮಿಕ್ ಪಕ್ಷ 1990ರಲ್ಲಿ ಅಧಿಕಾರದಲ್ಲಿದೆ. ಮುಸ್ಲಿಂ ಸಮುದಾಯದ ಇಬ್ಬರು ಮಹಿಳೆಯರು 2020ರಲ್ಲಿ ಪ್ರಾಂತೀಯ ಸರಕಾರ ಕೈಗೊಂಡ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ನೀಡಿದ ತೀರ್ಪಿನ ಬಗ್ಗೆ ಇಸ್ಲಾಂನ ಧಾರ್ಮಿಕ ವಿದ್ವಾಂಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.