ಹಿರಿಯ ಸಾಹಿತಿ ಮಳಿಯಪ್ಪ ಪತ್ತಾರ ನಿಲೋಗಲ್ ಹೃದಯಾಘಾತದಿಂದ ನಿಧನ
Team Udayavani, Dec 15, 2021, 8:18 PM IST
ಕುಷ್ಟಗಿ: ಶಿಕ್ಷಣ ಸಾಹಿತ್ಯ, ಜಾನಪದ ವೈದ್ಯಕೀಯ ತ್ರಿವಿಧ ಸೇವೆಯಿಂದ ಗುರುತಿಸಿಕೊಂಡಿದ್ದ ಕುಷ್ಟಗಿ ತಾಲೂಕಿನ ಹಿರಿಯ ಸಾಹಿತಿ ಮಳಿಯಪ್ಪ ಎಂ ಪತ್ತಾರ ನಿಲೋಗಲ್ ತಮ್ಮ ಕಂದಕೂರು ನಿವಾಸದಲ್ಲಿ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗ 86 ವಯಸ್ಸಾಗಿತ್ತು.
ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಮಳಿಯಪ್ಪ ಪತ್ತಾರ, 8ನೇ ಮೇ 1937ರಲ್ಲಿ ಬಸಪ್ಪ, ಮಾನಪ್ಪ ಪತ್ತಾರ ಮಗನಾಗಿ ಜನಿಸಿದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಗೀಳು ಹಚ್ಚಿಕೊಂಡಿದ್ದ ಗೆಳೆತನದ ಫಲ ನಾಟಕ ಬರೆದು ಸೈ ಎನಿಸಿಕೊಂಡಿದ್ದರು. 30-10-1961ರಲ್ಲಿ ಕಂದಕೂರು ಗ್ರಾಮದ ಶಿಕ್ಷಕರಾಗಿ ನೇಮಕಗೊಂಡಿದ್ದ ಅವರು ನಂತರ ಲಿಂಗಸುಗೂರು ತಾಲೂಕಿನಲ್ಲಿ ಮಲ್ಲಾಪೂರದಲ್ಲಿ 1968ರಿಂದ 1972ರವರೆಗೆ ಸೇವೆ ಸಲ್ಲಿಸಿ ಮತ್ತೆ ಕಂದಕೂರು ಗ್ರಾಮದಲ್ಲಿ ಶಿಕ್ಷಣ ಸೇವೆ ಮುಂದುವರಿಸಿದರು. ನಂತರ ಗಂಗಾವತಿ ತಾಲೂಕಿನ ಕುಂಟೋಜಿ, ಕುಷ್ಟಗಿ ತಾಲೂಕಿನ ಪರಸಾಪೂರ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಕುರಬನಾಳ ಗ್ರಾಮದಲ್ಲಿ ನಿವೃತ್ತರಾಗಿದ್ದರು. ಅವರು ಶಿಕ್ಷಕ ಸೇವೆಯ ಜೊತೆಗೆ, ಸಾಹಿತ್ಯ ಸೇವೆ ಹಾಗೂ ಜಾನಪದ ವೈದ್ಯರಾಗಿ ತ್ರಿವಿಧ ಸೇವೆ ಸಲ್ಲಿಸಿದ್ದ ಅವರು, ಇವರು ನೀಡುವ ಮೂಲವ್ಯಾದಿಗೆ ಉಚಿತ ಔಷಧಕ್ಕೆ ಮನೆ ಮಾತಾಗಿದ್ದರು. 1972ರಲ್ಲಿ ಗ್ರಾಮಸ್ಥರೊಬ್ಬರಿಗೆ ಮೂಲವ್ಯಾದಿ ಗುಣಪಡಿಸಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನು ನೀಡಿದ್ದರು. ಗುಣಮುಖರಾಗಿದ್ದ ತಹಶೀಲ್ದಾರ ಕೊಳವೆಬಾವಿ ಹಾಕಿಸಿ ಧನ್ಯತೆ ಮೆರೆದಿದ್ದರು.
ಸಾಹಿತ್ಯ ಕೃಷಿ:
ಗೆಳೆತನ ಫಲ (ನಾಟಕ), ಅಂತರ್ಜ್ಯೋತಿ, ಆದ್ಯಾತ್ಮ ವಿದ್ಯಾಲಯಮ ಶ್ರೀ ಸಿದ್ದರೂಢ ಸ್ವಾಮಿಗಳ ಕವನ, ವೇದಾಂತ ವಚನಸಾರ, ಮಹಾಭೋಧಾಲಯ, ಶ್ರೀ ರಾಘವಾನಂದ ಅವಧೂತ ಪುರಾಣ, ದಿಡ್ಡಿ ಬಾಗಿಲು, ಪಣ ತೊಟ್ಟ ಪ್ರಕಾಶ, ಭಾರತಿ ಸುತ ನಾಟಕಗಳನ್ನು ರಚಿಸಿದ್ದರು. 2016ರಲ್ಲಿ ತಳವಗೇರಾದಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ ಗೌರವಿಸಿತ್ತು.
ಮಳಿಯಪ್ಪ ಪತ್ತಾರ ಅವರು ಪತ್ನಿ ಸೇರಿದಂತೆ ಪುತ್ರ ರವೀಂದ್ರ ಪತ್ತಾರ ಸೇರಿದಂತೆ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಕಂದಕೂರು ಗ್ರಾಮದಲ್ಲಿ ಗುರುವಾರ ಮದ್ಯಾಹ್ನ 11ಕ್ಕೆ ನೆರವೇರಲಿದೆ.
ಸಂತಾಪ:
ಅವರ ಅಗಲಿಕೆಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಹಸನಸಾಬ್ ದೋಟಿಹಾಳ, ಶೇಖರಗೌಡ ಮಾಲಿಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸದಸ್ಯರ ಅಮಾನತು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ; ಡಿಕೆಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.