ಮಲ್ಪೆ : 140 ಕುಟುಂಬಕ್ಕೆ ಅಕ್ಕಿ ಹಂಚಿದ ಶಾರದಕ್ಕನ ಗುಡಿಸಲಿಗೆ ಡಿಸಿ ಭೇಟಿ

Team Udayavani, Apr 24, 2020, 5:40 AM IST

ಮಲ್ಪೆ : 140 ಕುಟುಂಬಕ್ಕೆ ಅಕ್ಕಿ ಹಂಚಿದ ಶಾರದಕ್ಕನ ಗುಡಿಸಲಿಗೆ ಡಿಸಿ ಭೇಟಿ

ಮಲ್ಪೆ: ಮನೆ ದುರಸ್ತಿಗೆಂದು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ವಿತರಿಸಿ ಸುದ್ದಿಯಾಗಿದ್ದ ಶಾರದಕ್ಕನ ಗುಡಿಸಲಿಗೆ ಗುರುವಾರ ಜಿಲ್ಲಾಧಿಕಾರಿ ಜಗದೀಶ್‌ ಭೇಟಿ ನೀಡಿದರು.

ಮೀನಿನ ಕೆಲಸ ಮಾಡಿ ಹರಕು ಗುಡಿಸಲಿನಲ್ಲಿ ಜೀವನ ಸಾಗಿಸುವ ಶಾರದಕ್ಕನ ಸೇವಾ ಮನೋಭಾವಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತವಾದ ಕೆಲಸವನ್ನು ಮಾಡಿದ ಶಾರದಕ್ಕನಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಡಬೇಕೆಂಬ ನಿಟ್ಟಿನಲ್ಲಿ ಆವರ ಮನೆಗೆ ಬಂದಿದ್ದೇವೆ. ಈ ಬಗ್ಗೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೊಳಿಕರ್‌ ಅವರಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.

ಕುಂದಾಪುರ ಸಹಾಯಕ ಆಯುಕ್ತ ರಾಜು, ಉಡುಪಿ ತಹಶೀಲ್ದಾರ್‌ಪ್ರದೀಪ್‌ ಕುಡೇìಕರ್‌ ಜತೆಯಲ್ಲಿದ್ದರು.ಮೀನುಗಾರಿಕೆ ಬಂದರಿಗೆ ತಾಗಿಕೊಂಡು ಬಾಪುತೋಟದ ಸಮೀಪದಲ್ಲಿ ಆರು ಮಂದಿ ಮಕ್ಕಳೊಂದಿಗೆ ಗುಡಿಸಲಲ್ಲಿ ಜೀವನ ಸಾಗಿಸುವ ದಲಿತ ಮೀನುಗಾರ ಮಹಿಳೆಗೆ ಸರಿಯಾದ ಮನೆಯೇ ಇಲ್ಲ. ಅದರೂ ತನ್ನ ಮನೆ ದುರಸ್ತಿಗೆಂದು ಕೂಡಿಟ್ಟ 30ಸಾವಿರ ರೂಪಾಯಿಯಲ್ಲಿ 700 ಕೆ.ಜಿ. ಅಕ್ಕಿ ಖರೀದಿಸಿ 140 ಮನೆಗೆ ಹಂಚಿದ್ದಾರೆ. ಜತೆಗೆ ಒಂದಷ್ಟು ತರಕಾರಿಯನ್ನು ತಂದು ಎಲ್ಲ ಮನೆಗೆ ವಿತರಿಸಿದ್ದರು. ತಾನು ಅಕ್ಕಿ ಹಂಚಿದ ವಿಷಯವನ್ನು ಯಾರಲ್ಲೂ ತಿಳಿಸಿಲ್ಲ. ಅವರಿಂದ ನೆರವು ಪಡೆದವರೆ ಹೇಳಿದ್ದರಿಂದ ವಿಷಯ ಬೆಳಕಿಗೆ ಬಂದು ಸಾಮಾಜಿಕ ಜಾಲ ತಾಣದಲ್ಲೂ ವೈರಲ್‌ ಆಗಿತ್ತು.

ಇದು ನನ್ನ ಭಾಗ್ಯ
ತ‌ನ್ನಂತೆ ಇತರರೂ ಕಷ್ಟದಲ್ಲಿ ಇರುವುದನ್ನು ಕಂಡು ನಾನು ಕೂಡಿಟ್ಟ ಹಣದಿಂದ ಅಕ್ಕಿಯನ್ನು ಹಂಚಿದ್ದೇನೆ. ಆದರೆ ನನ್ನ ಈ ಕಾರ್ಯಕ್ಕೆ ಈ ರೀತಿ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತದೆ ಎಂದು ನಾನು ಕನಸಲ್ಲೂ ಎಂದೂ ಎಣಿಸಿರಲಿಲ್ಲ. ನನ್ನ ಹರಕು ಮನೆಗೆ ಜಿಲ್ಲಾಧಿಕಾರಿ ಬರುವ ಹಾಗೆೆ ಆಯಿತ್ತಲ್ಲ. ಇದು ನನ್ನ ಭಾಗ್ಯ.
-ಶಾರದಾ, ಮೀನು ಮಾರುವ ಮಹಿಳೆ

ಟಾಪ್ ನ್ಯೂಸ್

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

Kaup: ಸಿಡಿಲಿಗೆ ತುಂಡಾಗಿ ಬಿದ್ದ ತೆಂಗಿನ ಮರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.