ಮಮತಾ ಬ್ಯಾನರ್ಜಿ ವೆಡ್ಸ್ ಸೋಶಿಯಲಿಸಂ!
Team Udayavani, Jun 12, 2021, 7:40 AM IST
ಚೆನ್ನೈ: ಕಮ್ಯೂನಿಸ್ಟರು ಮತ್ತು ಮಮತಾ ಬ್ಯಾನರ್ಜಿ ಎಂದರೆ ಪಶ್ಚಿಮ ಬಂಗಾಲದಲ್ಲಿ ಹಾವು-ಮುಂಗುಸಿಯಿದ್ದಂತೆ ಇರಬಹುದು… ಆದರೆ, ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಇವರಿಬ್ಬರದ್ದೂ ಹಾಲು-ಜೇನಿನ ಸಂಬಂಧ!
ಹೌದು. ಜೂ.13ರಂದು ಸೇಲಂನಲ್ಲಿ “ಸೋಶಯಲಿಸಂ’ ಎಂಬ ಯುವಕ “ಮಮತಾ ಬ್ಯಾನರ್ಜಿ’ ಎಂಬ ಯುವತಿಯನ್ನು ವರಿಸಲಿದ್ದಾನೆ. ಈ ವಿವಾಹವು ವರನ ಸಹೋದರರಾದ “ಕಮ್ಯೂನಿಸಂ’ ಮತ್ತು “ಲೆನಿನಿಸಂ’ನ ಸಮ್ಮುಖದಲ್ಲೇ ನಡೆಯಲಿದೆ.
ಅಂದ ಹಾಗೆ, ಈ ಕುಟುಂಬದ ಮೊಮ್ಮಗ “ಮಾರ್ಕ್ಸಿಸಂ’ ಕೂಡ ಈ ಮದುವೆಗೆ ಸಾಕ್ಷಿಯಾಗಲಿದ್ದಾನೆ… ಈ ಎಲ್ಲ “ಇಸಂ’ಗಳ ನಡುವೆಯೇ ನಡೆಯುತ್ತಿರುವ ವಿವಾಹದ ಆಮಂತ್ರಣ ಪತ್ರವು ದೇಶಾದ್ಯಂತ ವೈರಲ್ ಆಗಿದೆ.
ಮದುಮಗ ಸೋಶಿಯಲಿಸಂನ ತಂದೆ ಮೋಹನ್ (52) ಪ್ರಸ್ತುತ ಸೇಲಂನ ಸಿಪಿಐ ಜಿಲ್ಲಾ ಕಾರ್ಯದರ್ಶಿ. ಕಮ್ಯೂನಿಸ್ಟ್ ಸಿದ್ಧಾಂತ ನಂಬಿಕೊಂಡು ಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಮೂವರು ಗಂಡು ಮಕ್ಕಳಿಗೂ ಕಮ್ಯೂನಿಸಂ, ಲೆನಿನಿಸಂ ಮತ್ತು ಸೋಶಿಯಲಿಸಂ ಎಂದು ಹೆಸರಿಟ್ಟಿದ್ದರು. ವಧುವಿನ ಕುಟುಂಬವು ಹಿಂದಿನಿಂದಲೂ ಕಾಂಗ್ರೆಸ್ ಅನ್ನೇ ಬೆಂಬಲಿಸುತ್ತಾ ಬಂದಿದ್ದು, ತಮ್ಮ ಪುತ್ರಿಗೆ ಮಮತಾ ಬ್ಯಾನರ್ಜಿ (ಅವರು ಕಾಂಗ್ರೆಸ್ನಿಂದಲೇ ರಾಜಕೀಯ ಪ್ರಯಾಣ ಆರಂಭಿಸಿದ್ದು) ಎಂದು ಹೆಸರಿಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.