ಸುಧಾಮೂರ್ತಿ ಅವರ ಮನದ ಮಾತು
Team Udayavani, Nov 7, 2020, 11:51 PM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಕನ್ನಡದ ಒಂದು ಕೃತಿಯ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಕೊರೊನಾ ಕಾರಣದಿಂದ ಸಿಕ್ಕಿರುವ ಹೆಚ್ಚಿನ ಸಮಯವನ್ನು ನಾನು ಓದಿನ ಕಡೆಗೆ ಬಳಸಿಕೊಂಡೆ. ಹಲವು ಸಾಹಿತಿಗಳ ಉತ್ತಮ ಕೃತಿಗಳನ್ನು ಈ ಅವಧಿಯಲ್ಲಿ ಓದಿದ ನನ್ನನ್ನು ಹೆಚ್ಚು ಸೆಳೆದದ್ದು ಸುಧಾಮೂರ್ತಿ ಅವರ “ಮನದ ಮಾತು’ ಲೇಖನ ಸಂಕಲನ. ಓದಿ ಮುಗಿಸಿದ ಮೇಲೆ ಮತ್ತೂಮ್ಮೆ ಓದಬೇಕು ಎನ್ನುವಂಥ ಭಾವವನ್ನು ಈ ಕೃತಿ ಮೂಡಿಸಿದ್ದು ಇದರ ಶ್ರೇಷ್ಠತೆಗೆ ಸಾಕ್ಷಿ.
ಕೃತಿಯಲ್ಲಿ ನನಗೆ ಹೆಚ್ಚು ಪ್ರಿಯವಾದದ್ದು “ಕಪ್ಪು ಕಾನನದ ವಿಸ್ಮಯ’ ಬರಹ. ಆಫ್ರಿಕಾದ ಕಾಡುಗಳನ್ನು ಪರಿಚಯಿಸುವುದರ ಜತೆಗೆ ವೈವಿಧ್ಯಮಯ ಪ್ರಾಣಿಗಳ ಬಗ್ಗೆಯೂ ಇದರಲ್ಲಿ ಯಥೇತ್ಛ ಮಾಹಿತಿಗಳು ಸಿಕ್ಕಿವೆ. ಓದುತ್ತಾ ಓದುತ್ತಾ ಕಾಡಿನಲ್ಲಿ ಅಲೆದಾಡಿದ ಅನುಭವವಾಗಿದೆ.
“ಒಂದು ಮೊಳ ಮಲ್ಲಿಗೆ ಹೂ’ ನಮ್ಮ ಚಿಂತನೆಯ ಬಾಗಿಲನ್ನು ತೆರೆಯುತ್ತದೆ. ನಾವು ಸಹಾಯ ಮಾಡುವಾಗ ಮತ್ತೂಬ್ಬರನ್ನು ಮೆಚ್ಚಿಸುವ ಉದ್ದೇಶ ಇರಬಾರದು. ಸಹಾಯ ವನ್ನು ಆತ್ಮತೃಪ್ತಿಗಾಗಿ ಮಾಡಬೇಕು ಎನ್ನುವ ಮಾತುಗಳು ಮನಸ್ಪರ್ಶಿಯಾಗಿವೆ ಮತ್ತು ಹಲವರ ಮನಸ್ಸಿಗೆ ಕವಿದಿರುವ ಮೋಡವನ್ನು ಸರಿಸಲು ಸಹಾಯಕವಾಗುತ್ತವೆೆ.
ಸ್ತ್ರೀಯರು ಪೂಜಿಸಲ್ಪಡುವ ದೇಶ ಉನ್ನತ ಮಟ್ಟದಲ್ಲಿರುತ್ತದೆ ಎಂದು ಗಾಂಧೀಜಿ ಅವರು ಹೇಳಿದ್ದರು. ಈ ಕೃತಿಯಲ್ಲೂ ಸ್ತ್ರೀಯರ ಬಗೆಗೆ ಒಂದು ಲೇಖನವಿದೆ. “ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೋ’ ಎಂಬ ಬರಹದಲ್ಲಿ ಹೆಣ್ಣು-ಗಂಡು ಭೇದದ ಬಗ್ಗೆ, ಗಂಡು ಮಗುವಿಗಾಗಿ ಹಂಬಲಿಸುವ ಈ ಪ್ರಪಂಚದಲ್ಲಿ ಹೆಣ್ಣಿನ ಮನದ ಭಾವನೆ, ತೊಳಲಾಟವನ್ನು ಯಾರೂ ಅರ್ಥೈಸಿ ಕೊಳ್ಳಲಾರರು ಮತ್ತು ಹೆಣ್ಣಿನ ಮಹತ್ವ ವನ್ನು ತಿಳಿದೂ ತಿಳಿಯದಂತೆ ಇರುತ್ತಾರೆ ಎನ್ನುವ ಮೂಲಕ ಹೆಣ್ಣಿನ ಮಹತ್ವವನ್ನು ತೆರೆದಿಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವುದು ವರ್ಣಭೇದ ನೀತಿ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲ. ಅವರ ಬದುಕಿನ ಪ್ರತೀ ಅಂಶವನ್ನು ವಿವರಿ ಸುವ “ಮಂಡೇಲರ ನಾಡಿನಲ್ಲಿ’ ಎನ್ನುವ ಲೇಖನದಲ್ಲಿ ಕಪ್ಪು ಮತ್ತು ಬಿಳಿಯರ ನಡುವಿನ ತಾರತಮ್ಯ, ಕಪ್ಪು ವರ್ಣೀಯರ ಬಗೆಗೆ ಕೆಲವರಿಗಿದ್ದ ತುತ್ಛ ಭಾವನೆಗಳೆಲ್ಲವನ್ನೂ ವಿವರಿಸಿದ್ದಾರೆ. ಮೈಬಣ್ಣ ನೋಡಿ ಗೌರವ ಕೊಡುವುದು, ನಿರ್ಲಕ್ಷಿಸುವುದು ಹಾಗೂ ಅವಮಾನಿಸುವುದು ಸಲ್ಲದು ಎನ್ನುವ ಮೂಲಕ ಲೇಖಕಿಯು ಮಂಡೇಲರ ಬದುಕಿನ ಹೋರಾಟವನ್ನು ನಮ್ಮ ಮುಂದಿಡುತ್ತಾರೆ. . ಕರಿಯರ ಬದುಕಿನ ಬಗ್ಗೆ ಓದುತ್ತಾ ಕಣ್ಣು ಮಂಜಾ ಗುತ್ತದೆ. ಆದರೂ ಸೋತ ವನು ಜಗತ್ತನ್ನೇ ಗೆಲ್ಲಬಲ್ಲ ಎನ್ನುವ ಸಂದೇಶ ಈ ಬರಹದಿಂದ ಸಿಗುತ್ತದೆ.
ಸ್ವದೇಶ ಹಾಗೂ ವಿದೇಶಗಳ ನಡುವಿನ ಅಂತರದ ಬಗ್ಗೆಯೂ ಒಂದು ಲೇಖನವಿದೆ. “ಭಿಕ್ಷುಕ ನಿಂದ ಕಲಿತ ಪಾಠ’ ಎಂಬ ಬರಹದಲ್ಲಿ ನಮ್ಮ ಆಚಾರ – ವಿಚಾರಗಳು, ವೈಚಾರಿಕ ಭಿನ್ನತೆ ಮುಂತಾದವುಗಳ ಬಗ್ಗೆ ವಿವರಿಸಿ¨ªಾರೆ. ಕಲಿಯಲು ಮತ್ತು ಕಲಿಸಲು ಯಾರಾದ ರೇನು? ಕಲಿಕೆಗೆ ವಯಸ್ಸಿನ ನಿರ್ಬಂಧವೂ ಇಲ್ಲ ಎನ್ನುವುದನ್ನು ಈ ಬರಹದಲ್ಲಿ ತುಂಬಾ ಸುಂದರವಾಗಿ ನಿರೂಪಿಸಿದ್ದಾರೆ.
ವಿದೇಶಿಗರೊಬ್ಬರು ಲೇಖಕರ ಸಂಗಡ ದಿಂದ ಕನ್ನಡ ಕಲಿತು ಸೊಗಸಾಗಿ ಮಾತಾ ಡಿದ ಬಗ್ಗೆಯೂ ಈ ಕೃತಿಯಲ್ಲಿ ತಿಳಿಸುವ ಮೂಲಕ ನಮ್ಮ ಭಾಷೆಯನ್ನು ಕಲಿಯಲು ಸುಲಭ ಹಾಗೂ ವಿದೇಶಿಗರು ಇದರ ಬಗ್ಗೆ ಆಸಕ್ತಿ ಹೊಂದಿರುವ ಬಗ್ಗೆ ತಿಳಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.
ಅಂತೂ ಈ ಕೃತಿಯು ನಮಗೆ ಹೊಸ ವಿಚಾರಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನಮ್ಮ ಚಿಂತನೆಯನ್ನು ಮತ್ತಷ್ಟು ಹರಿತಗೊಳಿಸಲು ಪೂರಕವಾಗಿದೆ.
– ವಿದ್ಯಾಶ್ರೀ ಬಿ., ಬಳ್ಳಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.