ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ
Team Udayavani, Sep 24, 2020, 2:19 PM IST
ಶಿಗ್ಗಾವಿ: ಪ್ರಪಂಚಕ್ಕೆ ಶಿಲ್ಪಕಲಾ ವೈಭವವನ್ನು ಕೊಡುಗೆಯಾಗಿ ನೀಡಿದ ಜಕಣಾಚಾರ್ಯರ ಶಿಲ್ಪಕಲೆ ಕುರುಹುಗಳು ನಾಡಿನಾದ್ಯಂತ ಭಾರತೀಯ ಸಂಸ್ಕೃತಿಯನ್ನು ಸಾರುತ್ತವೆ. ಇಂತಹ ಕಲ್ಲು-ಮರ-ಲೋಹದ ವಸ್ತುಗಳಿಗೆ ಜೀವ ತುಂಬುವ ತಾಲೂಕಿನ ಬೆಳಗಲಿಯ ಬಹುಮುಖ ಪ್ರತಿಭೆಯ ಮಾನಪ್ಪ ಬಡಿಗೇರ ಅವರ ಕೈಚಳಕ ಅನನ್ಯವಾದುದು.
ತಾಲೂಕಿನ ಬೆಳಗಲಿ ಗ್ರಾಮದ ಪಂಚ ಕಸುಬುಗಳ ಕುಟುಂಬದ ಕಾಷ್ಠಶಿಲ್ಪಿ ಮಾನಪ್ಪ ಷಣ್ಮುಖಪ್ಪ ಬಡಿಗೇರ, ಮೊದ ಮೊದಲು ಕೃಷಿಕರ ರಂಟೆ, ಕುಂಟೆ, ಕೂರಿಗೆ ಮುಂತಾದ ಪರಿಕರಗಳನ್ನು ತಯಾರು ಮಾಡುತ್ತಿದ್ದರು. ನಂತರ ಅವರು ಮರ, ಕಲ್ಲು, ಸಿಮೆಂಟ್ ವಸ್ತುಗಳ ಮೂರ್ತಿ ತಯಾರಿಕೆ ಮತ್ತು ವಿವಿಧ ಬಣ್ಣಗಳಿಂದ ಕುಸೂರಿ ಕಲೆಯ ಅಲಂಕಾರ ಮಾಡುವ ಕಾರ್ಯದಲ್ಲಿ ಪರಿಪೂರ್ಣತೆ ಕಾರ್ಯಕ್ಕೆ ಮುಂದಾಗಿ, ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮರ, ಕಲ್ಲುಗಳಿಗೆ ನಿರ್ದಿಷ್ಟ ಆಕಾರ ಕೊಟ್ಟಾಗ ಮುಂದೆ ಅವು ದೈವೀ ಸ್ವರೂಪ ಪಡೆದು ಪೂಜಿಸುವಂತಾಗಿವೆ.
ಇದನ್ನೂ ಓದಿ :ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ, ಕಳ್ಳನಂತೆ ಅಲ್ಲ, ಸಿಂಹದಂತೆ!: ಬಿಹಾರ ಮಾಜಿ DGP ಪಾಂಡೆ
ಮಾನಪ್ಪ ಬಡಿಗೇರ ತಯಾರಿಸಿದ ಮೂರ್ತಿಗಳು ಜಿಲ್ಲೆಯಲ್ಲಷ್ಟೇ ಅಲ್ಲ, ನಾಲ್ಕೈದು ಜಿಲ್ಲಾ ವ್ಯಾಪ್ತಿಯಲ್ಲೂ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸುವಂತಾಗಿವೆ. ಪ್ರತಿವರ್ಷ 15ರಿಂದ 20 ಮೂರ್ತಿಗಳನ್ನು ನಿಗದಿತ ಸಮಯಕ್ಕೆ ತಯಾರಿಸಿಕೊಡುವ ಮಾನಪ್ಪ ಅವರು, ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಶಿಲ್ಪ ಕೆತ್ತನೆಯ ಸುಸಜ್ಜಿತ ಕುಟೀರ ಹೊಂದಿದ್ದಾರೆ. ಅವರು ವರ್ಷ ಪೂರ್ತಿ ಬಿಡುವಿಲ್ಲದೇ ಕೆತ್ತನೆಯಲ್ಲಿಯೇ ಕಾಲ ಕಳೆಯುತ್ತಾರೆ. ಜಿಲ್ಲೆಯಲ್ಲಿಯೇ ಪ್ರಚಲಿತ ಶಿಲ್ಪಿಗಳಾಗಿದ್ದಾರೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಪ್ರೊ| ವೀರಣ್ಣ ಅರ್ಕಸಾಲಿ ಅವರು ಮಾನಪ್ಪನವರ ಶಿಲ್ಪಕಲಾ ಕುಟೀರಕ್ಕೆ ಭೇಟಿ ನೀಡಿ ವಿವಿಧ ಬಗೆಯ ಶಿಲ್ಪಗಳ ವಿಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಈ ಕಾರ್ಯದಲ್ಲಿ ಕುಟುಂಬ ಮುಂದುವರೆಯಲಿ ಎಂಬ ಆಶಯದ ನುಡಿಗಳನ್ನಾಡಿದ್ದಾರೆ.
ಎಲೆಮರೆ ಕಾಯಿ: ಯಾವುದೇ ವಶೀಲಿ, ಲಾಬಿ ಗೊತ್ತಿಲ್ಲದ ಮಾನಪ್ಪನವರ ಕಲೆಗೆ ಮೆಚ್ಚಿ ನಾಡಿನ ಹೆಸರಾಂತ ಮಠ-ಮಾನ್ಯಗಳ ಪೂಜ್ಯರು ಹಾಗೂ ದೈವ ಸಮಿತಿಯವರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅವರನ್ನು ಗೌರವಿಸಿದ್ದಾರೆ. ಶಿಲ್ಪಕಲೆಯಲ್ಲಿ ಆಸಕ್ತ ಯುವಕರು ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಲೆಯ ಬಗ್ಗೆ ಪರಿಪೂರ್ಣ ಅಧ್ಯಯನ, ಮಾಹಿತಿ ಪಡೆದುಕೊಳ್ಳುವುದು ಅವಶ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.