![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 21, 2021, 9:02 PM IST
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತದಾನ ನಡೆದಿದ್ದು, ಕಸಾಪ ಅಧ್ಯಕ್ಷರಾಗಿ ಮತ್ತೊಮ್ಮೆ ಸಿ.ಕೆ.ರವಿಕುಮಾರ ಚಾಮಲಾಪುರ 2ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷರಾಗಿದ್ದ ಸಿ.ಕೆ.ರವಿಕುಮಾರ ಚಾಮಲಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯರು, ಮಾಜಿ ಅಧ್ಯಕ್ಷರು ಮಾಡಿಕೊಂಡಿದ್ದ ಒಂದು ಬಾರಿ ಅಧ್ಯಕ್ಷರಾದವರು 2ನೇ ಬಾರಿಗೆ ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ಅಲಿಖಿತ ನಿಯಮ ವಿರೋಧದ ನಡುವೆಯೂ ಎರಡನೇ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈಗಾಗಲೇ ಒಂದು ಬಾರಿ ಸೋತ್ತಿದ್ದ ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ ಅವರು 2ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಈ ಬಾರಿಯೂ ಮತದಾರರು ಕೈಹಿಡಿದಿಲ್ಲ.
ಚುನಾವಣೆಯಲ್ಲಿ ಸಿ.ಕೆ.ರವಿಕುಮಾರ ಹಾಗೂ ಎಸ್.ಕೃಷ್ಣಸ್ವರ್ಣಸಂದ್ರ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಅದರಂತೆ ಸಿ.ಕೆ.ರವಿಕುಮಾರ್ 2672 ಮತಗಳಿಂದ ಗೆಲುವು ಸಾಧಿಸಿದ್ದಾರೆ. ರವಿಕುಮಾರ್ 6540 ಮತ ಪಡೆದರೆ, ಕೆ.ಎಂ.ಕೃಷ್ಣೇಗೌಡ ಕೀಲಾರ 3868 ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, ಎಸ್.ಕೃಷ್ಣಸ್ವರ್ಣಸಂದ್ರ 3512 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ : ಉಡುಪಿ ಜಿಲ್ಲಾ ಕಸಾಪ ಚುನಾವಣೆ: ನೀಲಾವರ ಸುರೇಂದ್ರ ಅಡಿಗರಿಗೆ ಹ್ಯಾಟ್ರಿಕ್ ಗೆಲುವು
ಜಿಲ್ಲೆಯಾದ್ಯಂತ ಒಟ್ಟು 24204 ಮತಗಳಿದ್ದವು. ಭಾನುವಾರ ನಡೆದ ಮತದಾನದಲ್ಲಿ 14906 ಮತಗಳು ಚಲಾವಣೆಯಾಗಿದ್ದವು. ಮಂಡ್ಯ 6914, ಪಾಂಡವಪುರ 1869, ನಾಗಮಂಗಲ 730, ಕೆ.ಆರ್.ಪೇಟೆ 1006, ಶ್ರೀರಂಗಪಟ್ಟಣ 1032, ಮಳವಳ್ಳಿ 1410, ಮದ್ದೂರು 1945 ಮತದಾರರು ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕೆ.ಆರ್.ಪೇಟೆ, ಪಾಂಡವಪುರ, ಮಳವಳ್ಳಿಯಲ್ಲಿ ಎಸ್.ಕೃಷ್ಣಸ್ವರ್ಣಸಂದ್ರ ಅವರು ಮುನ್ನಡೆ ಪಡೆದಿದ್ದರೆ, ಮದ್ದೂರು, ಶ್ರೀರಂಗಪಟ್ಟಣ, ಮಂಡ್ಯ, ನಾಗಮಂಗಲದಲ್ಲಿ ರವಿಕುಮಾರ್‌ಚಾಮಲಾಪುರ ಮುನ್ನಡೆ ಸಾಧಿಸಿದ್ದಾರೆ. ಇದರಲ್ಲಿ 920 ಮತಗಳು ತಿರಸ್ಕೃತಗೊಂಡಿವೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.