Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
ಬಿತ್ತನೆ ಬೀಜಗಳಾದ ರಾಗಿ, ಭತ್ತ, ಅವರೆ, ಸೋರೆಕಾಯಿ, ಮೊದಲಾದ ಧಾನ್ಯಗಳನ್ನು ಪ್ರದರ್ಶಿಸಿದರು.
Team Udayavani, Dec 21, 2024, 12:51 PM IST
ಉದಯವಾಣಿ ಸಮಾಚಾರ
ಮಂಡ್ಯ: ಜೀವನದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಅದರಲ್ಲೂ ಪರಿಸರ ಸ್ನೇಹಿ ಮನೆ ನಿರ್ಮಿಸಬೇಕು ಎಂಬ ಕನಸಿರುತ್ತೆ. ಅದಕ್ಕೆ ಮಾದರಿಯಾಗಿ ಸಕ್ಕರೆ ನಾಡಿನ ಅಕ್ಷರ ಜಾತ್ರೆಯಲ್ಲೊಂದು ವಿನೂತನ ಮಾದರಿ ಮನೆ ನಿರ್ಮಿಸಲಾಗಿದೆ. ಅದು ಅಂತಿಥ ಮನೆಯಲ್ಲ ರೈತ ಸ್ನೇಹಿಯಾಗಿರೋ “ತೊಟ್ಟಿ” ಮನೆ . ಮನೆಯ ಮಧ್ಯ ಭಾಗದ ಸುತ್ತಲು ಆಕಾಶ , ಮಳೆ ನೀರು ಬೀಳಲು ಜಾಗವಿದೆ. ಅಂಗಳದ ಸುತ್ತಲೂ ಕೋಣೆಗಳು ನೈಸರ್ಗಿಕ, ಗಾಳಿ, ಬೆಳಕು, ಮನೆಯ ಹಿತ್ತಲಿನಲ್ಲೇ ದಿನಪಯೋಗಿ ಸೊಪ್ಪಿನ ಗಿಡಗಳು, ಮತ್ತು ನೀರು ಸೇದುವ ಬಾವಿ ಇರುವಂತಹ ಇದು ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನದ ವಿಶೇಷವಾಗಿ ನೋಡುಗರ ಗಮನ ಸೆಳೆಯುತ್ತಿದೆ.
ಪುರಾತನ ಕಾಲದಲ್ಲಿ ಮನೆಗೆ ಮುಕ್ತವಾಗಿ ಹೆಚ್ಚು ಗಾಳಿ ಬೆಳಕು ಸಾರಾಗವಾಗಿ ಬರಲಿ ಎಂಬ ಉದ್ದೇಶದಿಂದ ವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದ ತೊಟ್ಟಿ ಮನೆಗಳು ಈಗ ನರನ್ನುಆಕರ್ಷಿಸುವಂತೆ ಮಾಡಿದ್ದು ಆಧುನಿಕ ಶೈಲಿಯ ಮನೆಗಳನ್ನೇ ಬದಲಿಸಿ ಹಳೇ ಶೈಲಿಗೆ ಮರುಕಳಿಸುವಂತೆ ಮಾಡುತ್ತಿದೆ. ಇನ್ನು ಸಾಹಿತ್ಯ ಸಮ್ಮೇಳನದ ಅಂಗವಾಗಿ ನಿರ್ಮಿಸಿರುವ ಈ ತೊಟ್ಟಿ ಮನೆ ರೈತ ಸ್ನೇಹಿಯಾಗಿ ಹಲವು ವಿಶೇಷತೆಗಳನ್ನು ಹೊಂದಿದೆ.
ಮನೆಯ ಮಧ್ಯ ಭಾಗದಲ್ಲಿ ತೊಟ್ಟಿ ಮನೆ ನಿರ್ಮಸಲಾಗಿದ್ದುಇಂದಿನ ಆಧುನಿಕ ಯುಗದಲ್ಲಿ ಮಾಯವಾಗಿರುವ ಪುರಾತನ ಕಾಲ ಕೃಷಿ ಹಾಗೂ ಗ್ರಾಮೀಣ ಪ್ರದೇಶದ ಜನರು ಬಳಸುತ್ತಿದ್ದ ಉಪಕರಣಗಳಾದ ಹಸೆಮಣೆ, ಕಳಸ, ತೇವಟೆಗೆ ಮಣೆ, ರೈಲ್ ಚೊಂಬು, ತಕ್ಕಡಿ, ತಾಮ್ರದ ತಟ್ಟೆ, ಕೊಳದಪ್ಪಲೆ, ಸೌಟು, ತಾಂಬಟ್ಟಲು, ಟಿಫನ್ ಕ್ಯಾರಿರ್ಯ, ಇಡ್ಲಿ ಪಾತ್ರೆ, ದೇಕ್ಷಾ, ಕವಗೋಲು, ವಳಕಲ್ಲು, ಕೃಷಿ ಉಪಕರಣಗಳಾದ ನೇಗಿಲು, ಕುಂಟೆ, ಕೂರಿಗೆ, ಕುಂದಿಗೆ, ಬಿದಿರಿನಿಂದ ತಯಾರಿಸಿದ ಕೃಷಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಇರುವ ಕುಕ್ಕೆ, ವಾಡೆ, ಸೇರು, ಕೊಳಗ, ಇನ್ನಿತರ ಹಲವಾರು ಮಾದರಿಗಳು ನೋಡುಗರ ಕಣ್ಮನ ಸೆಳೆದವು.
70 ದಶಕದಲ್ಲಿ ಜನಿಸಿದ್ದ ನಾಗರಿಕರು ಹಳೆಯ ಮನೆ ತೊಟ್ಟಿ ಮನೆಯನ್ನು ನೋಡಿ ತಮ್ಮ ಬಾಲ್ಯದ ಜೀವನವನ್ನು ನೆನೆದು ಪುಳಕಿತರಾದರು. ಸಮ್ಮೇಳನದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪುರಾತನ ವಸ್ತುಗಳನ್ನು ಪರಿಚಯಿಸುವ ಮೂಲಕ ನೈಸರ್ಗಿಕ ಜೀವನ ಶೈಲಿ ಬಗ್ಗೆ ತಿಳಿವಳಿಕೆ ಹೇಳುತ್ತಿರುವುದು ಕಂಡು ಬಂತು. ಸಮ್ಮೇಳನದ ಅಂಗವಾಗಿ ತೊಟ್ಟಿ ಮನೆಯನ್ನು ವಿನೂತನವಾಗಿ ಹಸೆ, ಚಿತ್ತಾರಗಳನ್ನು ಬಿಡಿಸಿ ವಿನ್ಯಾಸಗೊಳಿಸಲಾಗಿತ್ತು.
ಮನೆಯ ಮುಂಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಒಕ್ಕಣೆ ಮಾಡಲು ಹಿಂಗಾರು ಮತ್ತು ಮುಂಗಾರಿಗೆ ಬಿತ್ತನೆ ಬೀಜಗಳಾದ ರಾಗಿ, ಭತ್ತ, ಅವರೆ, ಸೋರೆಕಾಯಿ, ಮೊದಲಾದ ಧಾನ್ಯಗಳನ್ನು ಪ್ರದರ್ಶಿಸಿದರು. ತೊಟ್ಟಿ ಮನೆ ಮುಂಭಾಗದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಹಳ್ಳಿಕಾರ್‌ತಳಿಯ ಜೋಡೆತ್ತುಗಳನ್ನು ಕಟ್ಟಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ರಾಸುಗಳ ಬಗ್ಗೆ
ಪರಿಚಯಿಸಿದರು, ಗ್ರಾಮೀಣ ಪ್ರದೇಶದ ರೈತರಿಗೆ ಸಾಹಿತ್ಯಾ ಸದಭಿರುಚಿಯ ಜೊತೆಗೆ ಕೃಷಿ ಮತ್ತು ಗ್ರಾಮಾಂತರ ಜೀವನದ ಬಗ್ಗೆ ಸಮ್ಮೇಳನದಲ್ಲಿ ತೊಟ್ಟಿ ಮನೆ ಮೂಲಕ ಗಮನ ಸೆಳೆಯಲಾಯಿತು.
ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ನಿರ್ಮಿಸುವ ತೊಟ್ಟಿ ಮನೆಗಳನ್ನು ಈ ಬಾರಿ ಸಾಹಿತ್ಯ ಸಮ್ಮೇಳನದ ಕೇಂದ್ರ ಬಿಂದುವಾಗಿಸಿ ಪರಿಚಯಿಸಿರುವುದು ಖುಷಿ ತಂದಿದೆ. ನಗರ ಪ್ರದೇಶದಲ್ಲಿ ನೆಲೆಸಿರುವವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ನೈಸರ್ಗಿಕ ಶೈಲಿಯ ಮನೆಗಳು ನಿರ್ಮಿಸಬೇಕು ಎಂಬುವರಿಗೆ ಇದು ಮಾದರಿಯಾಗಲಿದೆ.
●ಮಹಾದೇವಸ್ವಾಮಿ, ಮಂಡ್ಯ
■ ರಘು ಕೆ.ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
Mandya: ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.