Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

ಅನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳಿವೆ...

Team Udayavani, Dec 20, 2024, 5:36 PM IST

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

ಚಿಕ್ಕರಸಿನಕೆರೆ ಎಂದರೆ ತಕ್ಷಣ ನೆನಪಾಗುವುದೇ ಕಲಿಯುಗದ ದೈವ ಎಂದು ಪ್ರಖ್ಯಾತಿ ಪಡೆದಿರುವ ಬಸವ. ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿರುವ ಬಸವಪ್ಪನ ಪವಾಡಗಳು ಒಂದೆರಡಲ್ಲ. ರಾಜ್ಯ, ಹೊರ ರಾಜ್ಯಗಳಿಂದ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ದೇವಾಲಯಕ್ಕೆ ಆಗಮಿಸುವ ಜನ ತಪ್ಪ ಕಷ್ಟಕಾರ್ಪಣ್ಯಗಳನ್ನು ಬಸವನ ಮುಂದೆ ಹೇಳಿಕೊಂಡು ಪರಿಹಾರ ಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಚಿಕ್ಕರಸಿನಕೆರೆ ಗ್ರಾಮ ನಿರ್ಮಾಣವಾದ ಬಗೆ, ಅಲ್ಲಿ ನಡೆಯುವ ವಿಶೇಷತೆಗಳ ಕುರಿತು ಒಂದು ಲೇಖನ.

ಭಾರತೀನಗರ: ತಾಲೂಕು ಕೇಂದ್ರ ಮದ್ದೂರುನಿಂದ 7 ಕಿ.ಮೀ., ಮಂಡ್ಯದಿಂದ 20 ಕಿ.ಮೀ. ದೂರದಲ್ಲಿರುವ ಚಿಕ್ಕರಸಿನಕೆರೆ ಬಸಪ್ಪ ಕಷ್ಟ ಅಂತ ಬರುವ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ರಾಜ್ಯ, ಅಂತರ ರಾಜ್ಯಗಳಲ್ಲಿ ತನ್ನ ಖ್ಯಾತಿಯನ್ನು
ಪ್ರಖ್ಯಾತಿಗೊಳಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ. ನ್ಯಾಯಾಧೀಶ ಬಸಪ್ಪ ಚಿಕ್ಕರಸಿನಕೆರೆ ಕಾಲಭೈರವೇಶ್ವರ
ದೇಗುಲದಲ್ಲಿರುವ ಬಸಪ್ಪನ ಬಗ್ಗೆ ಅನೇಕ ಕಥೆಗಳಿವೆ. ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ವಿವಿಧ ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿ ತೆರವುಗೊಳಿಸುವ ಮೂಲಕ ಸುತ್ತಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಅಪಾರ ದೈವಭಕ್ತಿಯನ್ನುಂಟು ಮಾಡುವಲ್ಲಿ ಬಸವ ತನ್ನ ವೈಶಿಷ್ಟತೆ ಮೆರೆಯುತ್ತಾನೆ. ಅನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಸ್ಥಳೀಯರು.

ಏಪ್ರಿಲ್‌ನಲ್ಲಿ ಕಾಲಭೈರವೇಶ್ವರ ಜಾತ್ರೆ
ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಿನಲ್ಲಿ ನಡೆಯುತ್ತದೆ. ಆದಾದ ನಂತರ ಕಾರ್ತಿಕ ಮಾಸದ ದೀಪಾವಳಿ
ಸಂಭ್ರಮದಲ್ಲಿ ಬಸಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದು ಬಿಟ್ಟರೆ ವಿವಿಧ ಊರುಗಳಿಗೆ ಬಸಪ್ಪನ ಭೇಟಿ ಪೂರ್ವನಿಗದಿಯಂತೆ, ಕೆಲವೊಮ್ಮೆ ಅಚಾನಕ್‌ ಆಗಿ ಆಗುವುದೂ ಉಂಟು. ಚಿಕ್ಕರಸಿನಕೆರೆ ಅಲ್ಲದೇ, ಕಾರ್ಕಹಳ್ಳಿಯಲ್ಲೂ ಬಸವ ಇದ್ದು, ಎರಡು ದೈವಿ ಬಸವಗಳು ಭಾವ ಬಾಮೈದ ಬಸವಗಳು ಜನರ ಆಸ್ತಿಕತೆಯ ಪ್ರತೀಕವಾಗಿವೆ.

ಬಸವನಿಗೆ ಪೂಜೆ
ಬಸಪ್ಪನ ಜಾತ್ರೆಯಂದು ಚಿಕ್ಕರಸಿನಕೆರೆ, ಹುಣ್ಣನದೊಡ್ಡಿ ಹಾಗೂ ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂಡಿ ಉತ್ಸವ, ಕಾಳಮ್ಮ ಕಾರ್ಕಹಳ್ಳಿ ಬಸವೇಶ್ವರ, ಕಾಲಭೈರವೇಶ್ವರ ಸೇರಿದಂತೆ ದೇವಾನುದೇವತೆಗಳಿಗೆ ಶಿಂಷಾನದಿಯಲ್ಲಿ ಹೂ-ಹೊಂಬಾಳೆ ಕಾರ್ಯಕ್ರಮ, ಮಹಾಪೂಜೆಯ ಬಳಿಕ ಪ್ರಮುಖ ಬೀದಿಗಳಲ್ಲಿ ಬಸಪ್ಪನ ಮೆರವಣಿಗೆ ನಡೆಸಲಾಗುತ್ತದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ರೀತಿಯ ಪುಷ್ಪಾಭಿಷೇಕ ನಡೆಸಲಾಗುತ್ತದೆ. ಬಸಪ್ಪನ ಕೊಂಬಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಎಂದಿಗೂ ಯಾರೂ ಮುಟ್ಟುವುದಿಲ್ಲ.

ಗ್ರಾಮ ನಿರ್ಮಾಣದ ಇತಿಹಾಸ
ಹಬ್ಬದ ದಿನದಿಂದು ಬಹುಕಾಲದ ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಅಕ್ಕ-ತಂಗಿಯರಿದ್ದರು. ಅವರಿಬ್ಬರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರದ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು.

ಚಿಕ್ಕರಸಿನಕೆರೆಯಲ್ಲಿ ಶತಮಾನದ ದಿನಗಳ ಹಿಂದೆ ಹುತ್ತವೊಂದು ಬೆಳೆದುಕೊಡಿತ್ತು. ದೊಡ್ಡರಸಿನಕೆರೆ ಗ್ರಾಮದ ಬ್ರಾಹ್ಮಣರ ಕುಟುಂಬದ ಹಸುವೊಂದು ಮನೆಯಲ್ಲಿ ಹಾಲಿನ ಬದಲು ರಕ್ತವನ್ನು ನೀಡಿ ಚಿಕ್ಕರಸಿನಕೆರೆ ಬಳಿಗೆ ಬಂದು ಹುತ್ತದ ಬಳಿ ಹಾಲನ್ನು ಸುರಿಸುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹುತ್ತವನ್ನು ಅಗೆದು ನೋಡುವಷ್ಟರಲ್ಲಿ ಭೂಮಿಯೊಳಗೆ ಶ್ರೀಕಾಲಭೈರವೇಶ್ವರ ಬಸವನ ವಿಗ್ರಹವು ದೊರೆತಿದೆ. ನಂತರ ಗ್ರಾಮಸ್ಥರು ಆ ವಿಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ದೇವರ ಹೆಸರಿನಲ್ಲಿ ಬಸವ ಬಿಡುತ್ತ ಪ್ರತಿವರ್ಷವೂ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವರಿಗೆ ಬೋರದೇವರೆಂಬ ಮತ್ತೊಂದು ಹೆಸರು ಸಹ ಇದೆ.

ಸಿಂಹ ಸ್ವಪ್ನನಾದ ಕಾಲಭೈರವ
ಪರಮಶಿವನ ಸಂಹಾರಿ ಗಣಗಳಾದ ಕಾಲ ಭೈರವ, ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ ಹಾಗೂ ಉನ್ಮತ್ತ ಭೈರವ. ಈ ಪೈಕಿ ಅತ್ಯಂತ ಬಲಿಷ್ಠ ಹಾಗೂ ದುಷ್ಟರ ಪಾಲಿನ ಸಿಂಹಸ್ವಪ್ನನಾದ ಕಾಲಭೈರವ ಇಲ್ಲಿ ನೆಲೆಸಿದ್ದಾನೆ.

*ಅಣ್ಣೂರು ಸತೀಶ್‌

ಟಾಪ್ ನ್ಯೂಸ್

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.