![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 11, 2020, 7:45 AM IST
ಮಂಗಳೂರು: ಚರ್ಚ್‌ಗಳಲ್ಲಿ ಪ್ರಾರ್ಥನೆಗಳನ್ನು ಪುನರಾರಂಭಿಸಲು ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಧರ್ಮ ಪ್ರಾಂತದ ಚರ್ಚ್‌ಗಳಲ್ಲಿ ಜೂ. 13ರಿಂದ ಪ್ರಾರ್ಥನೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಈ ಕುರಿತಂತೆ ಮಾರ್ಗ ಸೂಚಿಗಳನ್ನು ರಚಿಸಲಾಗಿದೆ.
ಮುಂಜಾಗೃತ ಕ್ರಮವಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್ ಬಿಷಪರ ಪರಿಷತ್ತು ಕೆಲವೊಂದು ನಿರ್ದೇಶನಗಳನ್ನು ರೂಪೀಕರಿಸಿದೆ ಎಂದು ಬಿಷಪ್ ರೈ|ರೆ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.
ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ಪುನರಾರಂಭಿಸಬಹುದಾಗಿದ್ದು, ಈ ಸಂದರ್ಭ ಭಕ್ತರ ಸುರಕ್ಷತೆಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚ್‌ನ ಧರ್ಮ ಗುರುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು.
ಮಾರ್ಗಸೂಚಿಗಳು
– 10 ವರ್ಷ ದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರು ಚರ್ಚ್/ಆರಾಧನಾಲಯಗಳಲ್ಲಿ ಭಾಗ
ವಹಿಸದಿರುವುದು ಉತ್ತಮ.
– ಕೊರೊನಾ ಸೋಂಕು ಕಾರಣದಿಂದ ಕಂಟೈನ್ಮೆಂಟ್ ಪ್ರದೇಶದ ಜನರು ಪಾಲ್ಗೊಳ್ಳುವಂತಿಲ್ಲ.
-ಸಂಕೀರ್ಣ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಹೋಂಕ್ವಾರಂಟೈನ್‌ನಲ್ಲಿ ಇರುವವರು ಭಾಗವಹಿಸುವಂತಿಲ್ಲ.
ಚರ್ಚ್ ತೆರೆಯಲು ಮಾರ್ಗಸೂಚಿ
– ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ಯಾನಿಟೈಸೇಶನ್ ಬಗ್ಗೆ ಮಾಹಿತಿ ನೀಡಲು ಸ್ವಯಂ ಸೇವಕರ ನೇಮಕ ಮಾಡುವುದು.
– ಚರ್ಚ್‌ನ ಒಳಗೆ ಮತ್ತು ಭಕ್ತರು ಸ್ಪರ್ಶಿಸಬಹುದಾದ ಎಲ್ಲ ತಾಣಗಳನ್ನು ಕಾಲ ಕಾಲಕ್ಕೆ ಸ್ಯಾನಿಟೈಸೇಶನ್ ಮಾಡಿ ಸ್ವತ್ಛತೆಯನ್ನು ಕಾಪಾಡಬೇಕು.
– ಸಾಮಾಜಿಕ ಅಂತರ (ಕನಿಷ್ಠ 6 ಅಡಿ) ಮತ್ತಿತರ ಸುರಕ್ಷತೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸುವುದು.
– ಎಲ್ಲ ಭಕ್ತರು ಒಂದೇ ದ್ವಾರದ ಮೂಲಕ ಒಳಗೆ ಪ್ರವೇಶಿಸುವುದು.
ಬಲಿ ಪೂಜೆಗೆ ಮಾರ್ಗ ಸೂಚಿಗಳು
– ಬಲಿ ಪೂಜೆಗಳನ್ನು 45 ನಿಮಿಷದೊಳಗೆ ಮುಕ್ತಾಯಗೊಳಿಸಬೇಕು.
– ಬಲಿ ಪೂಜೆ ಆರಂಭಿಸುವ ಮೊದಲು ಧರ್ಮಗುರುಗಳು ಕೈಗಳನ್ನು ತೊಳೆದು ಸ್ವತ್ಛಗೊಳಿಸುವುದು.
– ಪರಮ ಪ್ರಸಾದವನ್ನು ಕೈಯಲ್ಲಿ ಮಾತ್ರ ಸ್ವೀಕರಿಸುವುದು.
You seem to have an Ad Blocker on.
To continue reading, please turn it off or whitelist Udayavani.