ಮಂಗಳೂರು-ಬೆಂಗಳೂರು ರೈಲು ಶೀಘ್ರ ಆರಂಭ ನಿರೀಕ್ಷೆ
Team Udayavani, Jun 3, 2020, 10:17 AM IST
ಪುತ್ತೂರು: ಮಂಗಳೂರು – ಬೆಂಗ ಳೂರು ನಡುವೆ ಬಸ್ ಸಂಚಾರ ಆರಂಭವಾಗಿದೆ. ಆದರೆ 10 ವರ್ಷ ಪ್ರಾಯದ ಕೆಳಗಿನವರು, 65 ವರ್ಷ ಪ್ರಾಯ ಮೀರಿ ದವರು ಪ್ರಯಾಣಿಸಲು ಅವಕಾಶವಿಲ್ಲ. ಆದರೆ ರೈಲುಗಳಲ್ಲಿ ಅಂತಹ ನಿಬಂಧನೆಗಳಿಲ್ಲ.ಆದ್ದರಿಂದ ಮಂಗಳೂರು-ಬೆಂಗಳೂರು ಮತ್ತು ಕಾರವಾರ-ಮಂಗಳೂರು – ಬೆಂಗಳೂರು ಪ್ರಯಾಣಿಕ ರೈಲುಗಳ ಓಡಾಟವನ್ನು ಆರಂಭಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.
ದೇಶಾದ್ಯಂತ ಸೀಮಿತ ಸಂಖ್ಯೆಯಲ್ಲಿ ರೈಲುಗಳ ಓಡಾಟ ಆರಂಭವಾಗಿದೆ. ಆದರೆ ನೈಋತ್ಯ ರೈಲ್ವೇಯ ಪ್ರಥಮ ಹಂತದ ಪಟ್ಟಿಯಲ್ಲಿ ಈ ರೈಲುಗಳ ಉಲ್ಲೇಖವಿಲ್ಲ. ಕರಾವಳಿಯಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರು ದೊಡ್ಡ ಸಂಖ್ಯೆ ಯಲ್ಲಿರುವುದರಿಂದ ಬೇಡಿಕೆ ಬೇಗನೆ ಫಲ ನೀಡುವ ನಿರೀಕ್ಷೆ ಇದೆ.
ಲೋಕಲ್ ರೈಲಿಗೆ ಬೇಡಿಕೆ
ಮೀಟರ್‌ಗೇಜ್ ಕಾಲದಿಂದಲೇ ಮಂಗಳೂರು-ಕಬಕ ಪುತ್ತೂರು ಮತ್ತು ಮಂಗಳೂರು-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವೆ ಲೋಕಲ್ ರೈಲುಗಳ ಓಡಾಟವಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಲೋಕಲ್ ರೈಲುಗಳ ಓಡಾಟವೂ ಸ್ಥಗಿತಗೊಂಡಿದೆ. ಅವುಗಳ ಓಡಾಟವನ್ನು ಆರಂಭಿಸುವಂತೆ ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಪ್ರಯಾ ಣಿಕರ ಹಿತರಕ್ಷಣ ವೇದಿಕೆಯು ಮೈಸೂರು ವಿಭಾಗೀಯ ರೈಲ್ವೇ ಮ್ಯಾನೇಜರ್‌ಗೆ ಪತ್ರ ಬರೆದಿದ್ದು, ಸಂಸದರ ಗಮನಕ್ಕೂ ತಂದಿದೆ.
ಮಂಗಳೂರು-ಬೆಂಗಳೂರು, ಕಾರವಾರ-ಬೆಂಗಳೂರು ನಡುವಣ ರೈಲು ಸಂಚಾರವನ್ನು ಮತ್ತೆ ಆರಂಭಿಸುವಂತೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಪೂರಕ ಸ್ಪಂದನ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಏರುಪೇರಾದ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಲಾಗುವುದು.
– ನಳಿನ್ ಕುಮಾರ್ ಕಟೀಲು, ದ.ಕ. ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.