ಮಂಗಳೂರು ಸೆಂಟ್ರಲ್ ನಿಲ್ದಾಣ: ಲೋಕಲ್ ಟಿಕೆಟ್‌ಗಾಗಿ ಜನರ ಸರದಿ ಸಾಲು
Team Udayavani, May 10, 2022, 6:40 AM IST
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇದ್ದ ಅನ್ ರಿಸರ್ವ್ಡ್ ಟಿಕೆಟ್ ಕೇಂದ್ರವನ್ನು ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸಿದ್ದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.
ಟಿಕೆಟ್‌ಗಾಗಿ ಬರುವವರು ತಮ್ಮ ವಾಹನವನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಟಿಕೆಟ್ ಕೇಂದ್ರಕ್ಕೆ ನಡೆದು ಹೋಗಬೇಕು, ಅಲ್ಲಿಂದ ಮತ್ತೆ ನಡೆದುಕೊಂಡು ರೈಲು ನಿಲ್ದಾಣದೊಳಗೆ ಬರುವಷ್ಟರಲ್ಲಿ ರೈಲು ಇರುತ್ತದೋ ಹೋಗಿರುತ್ತದೋ ಹೇಳಲಾಗದು.
ಹಾಗೆಂದು ಸದ್ಯ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರವನ್ನು ಇರಿಸಲಾಗಿದ್ದರೂ ಅದಕ್ಕೆ ದೊಡ್ಡ ಸಾಲು ಇರುತ್ತದೆ. ವಾರಾಂತ್ಯ, ರಜೆ ಇದ್ದಾಗಲಂತೂ ನಿಲ್ದಾಣದ ಹೊರಗೆ ಸಾಲಿನಲ್ಲಿ ನಿಲ್ಲುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಟ್ಯಾಕ್ಸಿ ಚಾಲಕ ಪ್ರದೀಪ್.
ಹಿಂದೆ ಪ್ರವೇಶ ದ್ವಾರದ ಬಳಿ ಲೋಕಲ್ ಟಿಕೆಟ್ ಕೌಂಟರ್ ಹಾಗೂ ಅದೇ ಕಟ್ಟಡದ ಕೊನೆಯಲ್ಲಿ ಬುಕಿಂಗ್ ಕೇಂದ್ರವಿತ್ತು. ಪ್ರಸ್ತುತ ಇವೆರಡನ್ನೂ ಸುಮಾರು 200 ಮೀಟರ್ ದೂರದ ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸಿದೆ.
ಟರ್ಮಿನಲ್‌ನಲ್ಲೇ ಕೌಂಟರ್ ಬೇಕಿತ್ತು
ವಾಸ್ತವವಾಗಿ ಲೋಕಲ್ ಟಿಕೆಟ್ ಪಡೆಯುವುದು ಕೌಂಟರ್‌ನಲ್ಲಿ ಸುಲಭ. ಯಾಕೆಂದರೆ ಅಲ್ಲಿರುವ ಕಂಪ್ಯೂಟರ್‌ನಲ್ಲಿ ತುಂಬಬೇಕಾದ ಆಯ್ಕೆಗಳು ಕಡಿಮೆ. ಅದೇ ಸ್ವಯಂಚಾಲಿತ ಟಿಕೆಟ್ ಮೆಷಿನ್‌ನಲ್ಲಿ ಆಯ್ಕೆ ಹೆಚ್ಚಾದ್ದರಿಂದ ಸಮಯ ದುಪ್ಪಟ್ಟು ಬೇಕು.
ಕಣ್ಣೆದುರು ರೈಲು ಇಲ್ಲ ಎನ್ನುವ ಕಾರಣಕ್ಕೆ ದೂರ ಇರುವ ಕೌಂಟರ್‌ಗೆ ಪ್ರಯಾಣಿಕರು ಹೋಗಲು ಬಯಸುವುದಿಲ್ಲ. 2 ವರ್ಷದ ಹಿಂದೆ ಹೊಸ ಕಟ್ಟಡಕ್ಕೆ ಕೌಂಟರ್ ಸ್ಥಳಾಂತರಿ ಸಲಾಗಿದ್ದರೂ ಕೋವಿಡ್ ಕಾರಣದಿಂದ ಅದರಲ್ಲಿ ಲೋಕಲ್ ಟಿಕೆಟ್ ಕೇಂದ್ರ ಕಾರ್ಯಾಚರಿಸಿದ್ದು ಕಡಿಮೆ. ಕಳೆದ 3 ತಿಂಗಳಿಂದ ಲೋಕಲ್ ಅನ್‌ರಿಸವ್xì ಟ್ರೈನ್‌ಗಳು ಸಂಚರಿಸುತ್ತಿವೆ. ಹಾಗಾಗಿ ಈ ಸಮಸ್ಯೆ ಈಗ ಗಂಭೀರತೆ ಪಡೆದುಕೊಳ್ಳುತ್ತಿದೆ.
ಖಾಯಂ ಕೇಂದ್ರವೀಗ ದೂರವಾಗಿದ್ದರೆ ಪ್ರವೇಶದ್ವಾರದಲ್ಲಿರುವ ಮೆಷಿನೇ ಮುಖ್ಯ ಕೇಂದ್ರವಾಗಿ ಮಾರ್ಪಾಡಾಗಿದೆ.
ಹಿಂದೆ ಸೆಂಟ್ರಲ್‌ನಲ್ಲಿ 3 ಅಟೊಮೇಟೆಡ್ ಮೆಷಿನ್‌ಗಳು ಕಾರ್ಯವೆಸಗುತ್ತಿದ್ದವು. ಈಗ ಒಂದು ಮಾತ್ರ ಸರಿಯಿದೆ. ಅದನ್ನು ಪೀಕ್ ಅವರ್‌ನಲ್ಲಿ ನಿರ್ವಹಿಸಲು ಒಬ್ಬ ನಿವೃತ್ತ ರೈಲ್ವೇ ಸಿಬಂದಿಗೆ ಹೊಣೆ ವಹಿಸಲಾಗಿದೆ. ಅವರು ತನ್ನ 10 ಸಾವಿರ ರೂ. ರಿಚಾರ್ಜ್ ಆಗಿರುವ ಟೋಕನ್ ಬಳಕೆ ಮಾಡಿಕೊಂಡು ಟಿಕೆಟ್ ನೀಡುತ್ತಾರೆ. ಆ ಮೊತ್ತ ಮುಗಿದ ಕೂಡಲೇ ದೂರ ಇರುವ ಕೌಂಟರ್‌ಗೆ ತೆರಳಿ ಮತ್ತೆ ರಿಚಾರ್ಜ್ ಮಾಡಿಕೊಂಡು ಬರಬೇಕಾಗುತ್ತದೆ. ಈ ಪ್ರಕ್ರಿಯೆ ಆಗುವಾಗ ಜನ ನಿಂತೇ ಇರಬೇಕಾಗುತ್ತದೆ. ಅನೇಕ ಬಾರಿ ಆತ ಟೋಕನ್ ರಿಚಾರ್ಜ್ ಮಾಡಿ ಬರುವಾಗ ರೈಲುಗಳು ಹೊರಟು ಹೋಗಿದ್ದೂ ಇದೆ ಎಂದು ಸ್ಥಳೀಯ ಟ್ಯಾಕ್ಸಿ ಚಾಲಕ ನಾಗಪ್ಪ ತಿಳಿಸುತ್ತಾರೆ.
ಮೂರು ಸ್ವಯಂಚಾಲಿತ ಟಿಕೆಟ್ ಯಂತ್ರಗಳಿದ್ದವು. ಪ್ರಸ್ತುತ ಒಂದೇ ಇರುವುದರಿಂದ ಹಾಗೂ ಜನರೆಲ್ಲರೂ ಸೆಂಟ್ರಲ್ ಸ್ಟೇಶನ್ ಕಟ್ಟಡಕ್ಕೇ ಟಿಕೆಟ್‌ಗಾಗಿ ಬರುವುದರಿಂದ ಕೆಲವೊಮ್ಮೆ ಸಾಲು ದೊಡ್ಡದಾಗುತ್ತದೆ. ಹೊಸ ಮಷಿನ್ ಖರೀದಿಸುವುದಕ್ಕೆ ಮುಖ್ಯ ಕಚೇರಿಗೆ ಈಗಾಗಲೇ ಕೋರಲಾಗಿದೆ.
– ಕಿಶನ್ ಬಂಗೇರ, ಡೆಪ್ಯುಟಿ ಸ್ಟೇಶನ್ ಮ್ಯಾನೇಜರ್
ಕಮರ್ಷಿಯಲ್ ಮಂಗಳೂರು ಸೆಂಟ್ರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.