Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
ತ್ಯಾಜ್ಯ ರಾಶಿಗೆ ಬೆಂಕಿ; ರಾ.ಹೆದ್ದಾರಿ ವ್ಯಾಪಿಸುವ ಹೊಗೆ
Team Udayavani, Nov 5, 2024, 4:51 PM IST
ಮಹಾನಗರ: ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಎಲ್ಲ ಸ್ಥಳೀಯಾಡಳಿತಗಳು ಕ್ರಮ ವಹಿಸುತ್ತಿದ್ದರೂ ಬೆಂಕಿ ಹಾಕಿ ಸುಡುವ ಪ್ರಕರಣಗಳೂ ಅಲ್ಲಲ್ಲಿ ನಡೆಯುತ್ತಿದೆ. ನಗರ ಹೊರ ವಲಯದ ಅಡ್ಯಾರ್- ಕಣ್ಣೂರು ಬಳಿ ಕಳೆದ ಹಲವು ಸಮಯದಿಂದ ತ್ಯಾಜ್ಯ ತಂದು ರಾಶಿ ಹಾಕಿ ಬೆಂಕಿ ಹಾಕಿ ಸುಡಲಾಗುತ್ತಿದ್ದು, ಅದರ ಹೊಗೆ ಸ್ಥಳೀಯವಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
ಇಲ್ಲಿನ ನೇತ್ರಾವತಿ ನದಿ ತೀರದ ಬಳಿ ಒಳ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದಾಗಿ ಅದಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳು ಹೊತ್ತಿ ಉರಿದು ದಟ್ಟ ಹೊಗೆ ಸ್ಥಳೀಯವಾಗಿ ವ್ಯಾಪಿಸುತ್ತಿದೆ. ಕೆಲವೊಮ್ಮೆ ಸಂಜೆ ವೇಳೆ ಬೆಂಕಿ ಹಚ್ಚಲಾಗುತ್ತಿದ್ದು, ಎರಡು ಮೂರು ದಿನಗಳ ಕಾಲ ಈ ಬೆಂಕಿ ಹೊಗೆಯಾಡುತ್ತಲೇ ಇರುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗೂ ವ್ಯಾಪಿಸಿ, ವಾಹನ ಸವಾರರಿಗೂ ಸಮಸ್ಯೆ ತಂದೊಡ್ಡುತ್ತಿದೆ. ಪ್ಲಾಸ್ಟಿಕ್ ಸುಟ್ಟಿರುವ ತೀವ್ರವಾದ ವಾಸನೆಯೂ ಸ್ಥಳೀಯವಾಗಿ ವ್ಯಾಪಿಸಿ ಮಾಲಿನ್ಯ ಉಂಟು ಮಾಡುತ್ತಿದೆ.
ಮಹಾನಗರ ಪಾಲಿಕೆ ಮತ್ತು ಅಡ್ಯಾರ್ ಗ್ರಾ.ಪಂ. ಗಡಿ ಪ್ರದೇಶವಾಗಿದ್ದು, ತ್ಯಾಜ್ಯವನ್ನು ಯಾರು, ಎಲ್ಲಿಂದ ತಂದು ಸುರಿಯುತ್ತಾರೆ ಎಂದು ಪತ್ತೆ ಹಚ್ಚುವ ಕೆಲಸ ಆಗಬೇಕಿದೆ. ಮಾತ್ರವಲ್ಲದೆ, ತ್ಯಾಜ್ಯವನ್ನು ಸುಟ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾ ಗುತ್ತಿರುವವರಿಗೆ ಸೂಕ್ತವಾದ ದಂಡ ವಿಧಿಸಬೇಕು. ಮುಂದಿನ ದಿನಗಳಲ್ಲಿ ಮತ್ತೆ ತ್ಯಾಜ್ಯ ಸುಡದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಎಲ್ಲಿದೆ ತ್ಯಾಜ್ಯ ಸುಡುವ ಸ್ಥಳ?
ರಾಷ್ಟ್ರೀಯ ಹೆದ್ದಾರಿಯ 73 ಅಡ್ಯಾರ್ ಕಟ್ಟೆಯಿಂದ ಕಣ್ಣೂರು ಕಡೆಗೆ ಬರುವಾಗ ಮಾತಾ ನರ್ಸರಿಗಿಂತ ಮೊದಲೇ ಎಡಭಾಗದಲ್ಲಿ ಮಣ್ಣಿನ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಸುಮಾರು 100 ಮೀ. ಒಳಭಾಗದಲ್ಲಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ತೆಂಗಿನ ತೋಟವೂ ಸ್ಥಳದಲ್ಲಿದೆ. ತ್ಯಾಜ್ಯ ಸಾಗಿಸುವ ಲಾರಿಗಳು ಸಂಚರಿಸಿರುವ ಚಕ್ರದ ಗುರುತುಗಳೂ ಸ್ಥಳದಲ್ಲಿವೆ. ಪ್ಲಾಸ್ಟಿಕ್ ತ್ಯಾಜ್ಯ ಮಾತ್ರವಲ್ಲದೆ ಕಟ್ಟಡ ತ್ಯಾಜ್ಯವನ್ನೂ ತಂದು ಸುರಿಯಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.