ಮಂಗಳೂರು-ಮೈಸೂರು ದಿನಂಪ್ರತಿ ರೈಲಿಗೆ ಆಗ್ರಹ
Team Udayavani, Apr 16, 2022, 7:00 AM IST
ಮಂಗಳೂರು: ಮಂಗಳೂರು- ಬೆಂಗಳೂರು ನಡುವೆ ಮೈಸೂರು ಮಾರ್ಗವಾಗಿ ಪ್ರತೀ ದಿನ ರೈಲು ಸಂಚಾರ ಆರಂಭಿಸಬೇಕು ಎಂಬ ಆಗ್ರಹ ಕರಾವಳಿ ಭಾಗದಲ್ಲಿ ವ್ಯಕ್ತವಾಗಿದೆ.
ಮೈಸೂರು ಮಾರ್ಗವಾಗಿ ಮಂಗಳೂರು- ಬೆಂಗಳೂರು ನಡುವೆ (ನಂ. 16585/ 16586) ರೈಲು ಪ್ರಸ್ತುತ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ.
ಮೈಸೂರಿನಲ್ಲಿ ದಕ್ಷಿಣ ಕನ್ನಡ ಮೂಲದ ಸುಮಾರು 60 ಸಾವಿರ ಮಂದಿ ನೆಲೆಸಿದ್ದಾರೆ. ಮೈಸೂರು-ಮಂಗಳೂರು ಮಧ್ಯೆ ಸುಮಾರು 250 ಕಿ.ಮೀ. ದೂರ ವಿದ್ದು, ದಿನವೊಂದಕ್ಕೆ ಸಾವಿರಾರು ಮಂದಿ ಬಸ್, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ಪ್ರತಿದಿನ ರೈಲು ಆರಂಭಗೊಂಡರೆ ಕರಾವಳಿಯ ಜನತೆಗೆ ಅನುಕೂಲವಾಗಲಿದೆ ಹಾಗೂ ಪ್ರಸ್ತುತ ಕಣ್ಣೂರು-ಮಂಗಳೂರು-ಬೆಂಗಳೂರು ರೈಲಿಗಿರುವ ದಟ್ಟಣೆಗೂ ಇದು ಪರಿಹಾರವಾದೀತು.
ಮಂಗಳೂರಿನಿಂದ ಮೈಸೂರು ಮಾರ್ಗವಾಗಿ ದಿನಂಪ್ರತಿ ರೈಲು ಓಡಿಸುವ ಬಗ್ಗೆ ರೈಲ್ವೇ ಬಳಕೆದಾರರ ಸಂಘಟನೆಗಳು ನೈಋತ್ಯ ರೈಲ್ವೇಗೆ ಬೇಡಿಕೆ ಸಲ್ಲಿಸಿವೆ. ನೈಋತ್ವ ರೈಲ್ವೇ ಈ ಪ್ರಸ್ತಾವನೆಯನ್ನು ದಕ್ಷಿಣ ರೈಲ್ವೇಗೆ ಕಳುಹಿಸಿಕೊಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಗುಜರಾತ್‌ನ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಆಪ್ ಆಹ್ವಾನ
ಪ್ಲಾಟ್‌ಫಾರಂ ಹೊಂದಿಸುವ ಸಾಧ್ಯತೆ
ದಿನಂಪ್ರತಿ ಮೈಸೂರು ಮೂಲಕ ರೈಲು ಸಂಚಾರಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರಂನ ಕೊರತೆಯನ್ನು ಅಡ್ಡಿಯಾಗಿ ತೋರಿಸುವ ಸಾಧ್ಯತೆಗಳಿವೆ. ಇದನ್ನು ನಿವಾರಿಸಲು ಪರ್ಯಾಯ ಸಾಧ್ಯತೆಗಳನ್ನು ರೈಲ್ವೇ ಬಳಕೆದಾರರ ಸಂಘಟನೆಗಳ ಪ್ರತಿನಿಧಿಗಳು ಸಲಹೆ ಮಾಡಿದ್ದಾರೆ.
ಪ್ರಸ್ತುತ ಚೆರ್ವತ್ತೂರು ಎಕ್ಸ್ ಪ್ರಸ್ ರೈಲು ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬಂದು ಮರುದಿನ ಬೆಳಗ್ಗೆ 5ಕ್ಕೆ ನಿರ್ಗಮಿಸುತ್ತದೆ. ಈ ರೈಲನ್ನು ಬೆಳಗ್ಗೆ ಮಡಗಾಂವ್‌ಗೆ ಓಡಿಸಿ ಮರಳಿ ರಾತ್ರಿ 10ಕ್ಕೆ ಬರುವಂತೆ ಮಾಡಬಹುದಾಗಿದೆ. ರಾತ್ರಿ ಪಿಟ್‌ಲೆçನ್‌ನಲ್ಲಿ ಇದರ ನಿರ್ವಹಣ ಕೆಲಸಗಳನ್ನು ಮಾಡಿ ಮರುದಿನ ಬೆಳಗ್ಗೆ ಎಂದಿನಂತೆ ಚೆರ್ವತ್ತೂರಿಗೆ ಓಡಿಸಬಹುದು.
ಇದರಿಂದ ಒಂದು ಪ್ಲಾಟ್‌ಫಾರಂ ಖಾಲಿಯಾಗುತ್ತದೆ ಮತ್ತು ಇದನ್ನು ಮೈಸೂರು ಗಾಡಿಗೆ ಹೊಂದಿಸಬಹುದಾಗಿದೆ. ಪ್ರಸ್ತುತ ಮಡಗಾಂವ್‌ಗೆ ಸಂಚರಿಸುತ್ತಿರುವ ಇಂಟರ್‌ಸಿಟಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅದನ್ನು ಮಡಗಾಂವ್‌ಗೆ ಸಂಚರಿಸುವಂತೆ ಮಾಡಿದರೆ ಅಲ್ಲಿಗೂ ಒಂದು ರೈಲು ಸಿಕ್ಕಿದಂತಾಗುತ್ತದೆ.
ಪ್ರಸ್ತುತ ವಾರದಲ್ಲಿ 3 ದಿನ ಮೈಸೂರು ಮಾರ್ಗವಾಗಿ ಸಂಚರಿಸುವ ಮಂಗಳೂರು-ಬೆಂಗಳೂರು ರೈಲನ್ನು ದಿನಂಪ್ರತಿ ಓಡಿಸಬೇಕು ಎಂಬ ಬೇಡಿಕೆ ಬಗ್ಗೆ ನೈಋತ್ವ ರೈಲ್ವೇಯಿಂದ ಪೂರಕ ಪ್ರಕ್ರಿಯೆಗಳು ನಡೆದಿವೆ. ಈ ಬಗ್ಗೆ ದಕ್ಷಿಣ ರೈಲ್ವೇಯ ಗಮನ ಸೆಳೆಯಲಾಗಿದೆ. ಅವರು ಸಮ್ಮತಿಸಿದರೆ ಪ್ರಸ್ತಾವನೆ ಅಲ್ಲಿಂದ ರೈಲ್ವೇ ಮಂಡಳಿಗೆ ಹೋಗಿ ನಿರ್ಧಾರವಾಗಲಿದೆ.
– ಅನೀಸ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೇ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.