ಮಂಗಳೂರು ಸಾಹಿತ್ಯ ಉತ್ಸವ ಸಂಪನ್ನ; ಭೂಮಿ ಹುಟ್ಟುವ ಮೊದಲೇ ಜನಿಸಿದ್ದು ಆದಿ ಜಾಂಬವ
ಸಾಮಾಜಿಕ ಜಾಲತಾಣ, ಡಿಜಿಟಲ್ ವೇದಿಕೆಗಳಲ್ಲೂ ಅಖ್ಯಾಯಿಕೆಗಳು ಇರುತ್ತವೆ
Team Udayavani, Feb 20, 2023, 6:21 PM IST
ಭಾರತ್ ಫೌಂಡೇಶನ್ ವತಿಯಿಂದ ಐದನೇ ಆವೃತ್ತಿಯ ಮಂಗಳೂರು ಲಿಟ್‌ಫೆಸ್ಟ್ ನ ಎರಡನೇ ದಿನದ ಕಾರ್ಯಕ್ರಮಗಳು ರವಿವಾರ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಭವನದಲ್ಲಿ ನಡೆಯಿತು. ಬೆಳಗ್ಗಿನಿಂದ ಸಂಜೆಯ ವರಗೆ ವಿವಿಧ ಗೋಷ್ಠಿಗಳು ಆಯೋಜನೆಗೊಂಡು ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ರಜಾದಿನವಾದ್ದ ರಿಂದ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಂಡು ಬಂತು.
ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ.
ಹರಟೆ ಕಟ್ಟೆಯಲ್ಲಿ ತಮ್ಮ ದಕ್ಕಲ ಜಾಂಬವ ಪುರಾಣದ ಕುರಿತು ಮಾತನಾಡಿದರು. ದಕ್ಕಲ ಮುನಿಸ್ವಾಮಿ ಅವರ ಒಡನಾಡಿಯಾಗಿರುವ ಘನಶ್ಯಾಮ್ ಅವರು ವಿವರಣೆ ನೀಡಿ, ಊರಿಂದ ಊರಿಗೆ ಹೋಗಿ ದಕ್ಕಲ ಜಾಂಬವ ಪುರಾಣವನ್ನು ಜನರಿಗೆ ಹೇಳಿ, ಕೊಟ್ಟ ಕಾಣಿಕೆಯನ್ನು ಸ್ವೀಕರಿಸಿ ಜೀವನ ನಡೆಸುತ್ತಾರೆ. ಸದ್ಯ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದಾರೆ ಎಂದ ರು ಸತ್ಯಬೋಧ ಜೋಶಿ ಸಮನ್ವಯಕಾರರಾಗಿದ್ದರು.
ಯಕ್ಷಗಾನಕ್ಕೆ ಅಪಚಾರ ಖಂಡನೀಯ
ಯಕ್ಷಗಾನ ಆರಾಧನಾ ಕಲೆ ಯಾಗಿದ್ದು, ಸಾವಿರಾರು ಮಂದಿ ಅದರಿಂದಲೇ ಜೀವನ ನಡೆಸುತ್ತಿದ್ದಾರೆ. ಇಂತಹ ಕಲೆಯನ್ನು ಜಾಹೀರಾತು ಮತ್ತು ವೇದಿಕೆಗಳಲ್ಲಿ ಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಚೌಕಟ್ಟು ಮೀರಿದರೆ ಅದು ಕಲೆಗೆ ಅಪಚಾರ ಮಾಡಿದಂತೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಲಾಪ್ರೇಮಿಗಳು, ಸಾರ್ವಜನಿಕರ ಸಹಕಾರವೂ ಆಗತ್ಯ ಎಂದರು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಲಿಟ್‌ಫೆಸ್ಟ್ ನ ಎರಡನೇ ದಿನದ ಗೋಷ್ಠಿಯಲ್ಲಿ “ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ’ ವಿಚಾರವಾಗಿ ಅವರು ಮಾತನಾಡಿದರು. ಯಕ್ಷಗಾನವನ್ನು ಕರಾವಳಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯ ಕಲೆಯಾಗಿ ಘೋಷಣೆ ಮಾಡವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಮಹಿಳಾ ಯಕ್ಷಗಾನ ಕಲಾವಿದೆ ಸಿಎ ವೃಂದಾ ಕೊನ್ನಾರ್ ಅವರು ಮಾತನಾಡಿ, ಯಕ್ಷಗಾನದಲ್ಲಿ ಮಹಿಳೆಯರೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಹಂತದಲ್ಲಿದ್ದು, ಆದರೂ ಪುರುಷ ಪಾತ್ರ ಮಾಡುವ ಮಹಿಳೆಯರ ಸ್ವರ, ಕಾಲುಂಗುರ, ಮೂಗುತ್ತಿಯಂತಹ ಆಭರಣಗಳ ಬಗ್ಗೆ ಮಾತನಾಡುತ್ತಿರುವುದು ಕೇಳಿ ಬರುತ್ತಿದೆಯಾದರೂ, ಅದನ್ನು ಯಥಾಸ್ಥಿತಿ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಪುರುಷೋತ್ತಮ ಭಂಡಾರಿ ಸಮನ್ವಯಕಾರರಾಗಿದ್ದರು.
ಭಾರತದ ರಕ್ಷಣ ಸಾಮರ್ಥ್ಯ ವೃದ್ಧಿ
ಭಾರತ-ಚೀನಾ ಗಡಿಯಲ್ಲಿ ಚೀನಾ 2020ರಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ ಸೌಲಭ್ಯವನ್ನು ಗಡಿಯತ್ತ ತಿರುಗಿಸಿತು. ಭಾರತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಚೀನಾ ಈಗ ಅರ್ಥ ಮಾಡಿಕೊಂಡಿದೆ. ಭಾರತದ ವಾಯುಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಈಗ ಸಿದ್ಧವಾಗಿದೆ. ಹೀಗಾಗಿ ಯುದ್ಧ ನಡೆಸುವ ಬಗ್ಗೆ ಅದು ಮರು ಚಿಂತನೆ ನಡೆಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಎವಿಎಂ ಮನ್‌ಮೋಹನ್ ಬಹದ್ದೂರ್. Armed to lead-Indiaʼs way farward ಎಂಬ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಭರತ್ ಕರ್ನಾಡ್ ಅವರು ಮಾತನಾಡಿ, ಪ್ರಸ್ತುತ ಚೀನಾ ಪ್ರಚೋದನೆಗೆ ಭಾರತ ಕೇವಲ ಪ್ರತಿಕ್ರಿಯಿಸಿಲ್ಲ. ರಕ್ಷಣಾತ್ಮಕ ಕ್ರಮ ತೆಗೆದುಕೊಂಡಿದೆ ಎಂದರು. ಶಿವ್ ಕುನಾಲ್ ವರ್ಮಾ ಅವರು ಮಾತನಾಡಿ, ಚೀನಾ ಭಾರತವನ್ನು ತನ್ನ ಪ್ರಮುಖ ಶತ್ರು ಎಂದೇ ಪರಿಗಣಿಸುತ್ತದೆ. ನಾವು ಸಾಕಷ್ಟು ಬಲಿಷ್ಠಗೊಂಡಿದ್ದೇವೆ ಎಂದರು.
“ಅಖ್ಯಾಯಿಕೆ’ ಹೀಗೆಯೇ ಎಂದು ಹೇಳಲು ಆಗದು
“ಮಾಧ್ಯಮ ಮತ್ತು ಅಖ್ಯಾಯಿಕೆ- ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಅಸ್ಮಿತೆಗಳು: ಒಂದು ವಿವೇಚನೆ’ ಎಂಬ ವಿಷಯ ಬಗ್ಗೆ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿದರು. ಮಾಧ್ಯಮ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಡಿಜಿಟಲ್ ವೇದಿಕೆಗಳಲ್ಲೂ ಅಖ್ಯಾಯಿಕೆಗಳು ಇರುತ್ತವೆ. ಅದು ಅವರವರ ದೃಷ್ಟಿಕೋನವನ್ನು ಹೊಂದಿಕೊಂಡಂತೆ ಇರುತ್ತದೆ. ಆದರೆ ಅವುಗಳ ನಿಜ ಸ್ವರೂಪವನ್ನು ಅರ್ಥೈಸಲು ಯಾರೂ ಮುಂದಾಗುವುದಿಲ್ಲ ಎಂದರು.
ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹರಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರವೇ ನೀತಿ ರೂಪಿಸಲು ಮುಂದಾಗಿದೆ. ಆಗ ಪತ್ರಿಕಾ
ರಂಗದ ಘನತೆಯನ್ನೂ ಎತ್ತಿಹಿಡಿಯಲು ಸಾಧ್ಯವಿದೆ ಎಂದರು. ರಾಧಾಕೃಷ್ಣ ಹೊಳ್ಳ ಸಮನ್ವಯಕಾರರಾಗಿದ್ದರು.
ಪ್ರತಿಯೊಬ್ಬ ಯೋಧನಲ್ಲಿಯೂ ಇದೆ ಅದ್ಭುತ ಕತೆ
“ಸ್ಟೋರೀಸ್ ಆಫ್ ವಾರಿಯರ್’ (ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್) ಸಂವಾದದಲ್ಲಿ ಶಿವ್ ಆರೂರ್ ಅವರು, ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ವರದಿ ಮಾಡುತ್ತಿದ್ದೇನೆ. ನಿರಂತರವಾಗಿ ಯೋಧರನ್ನು ಭೇಟಿ ಯಾಗುತ್ತಾ ಬಂದಿದ್ದೇನೆ. ಪ್ರತಿಯೊಬ್ಬ ಯೋಧನ ಬಳಿಯೂ ಒಂದು ಅದ್ಭುತ ಕತೆಯಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಹಾಗೂ ಶೌರ್ಯಚಕ್ರದಂತಹ ಪ್ರಶಸ್ತಿಗಳು ಬಂದಾಗ ಮಾತ್ರ ನಾವು ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಯೋಧರ ಸಂಪೂರ್ಣ ಕತೆ ಕೇಳುವ ಹಸಿವು ನನಗಿತ್ತು. ಅದುವೇ ಪುಸ್ತಕ ಬರೆಯಲು ಪ್ರೇರೇಪಿಸಿತು.
ಅಪಾಯದ ನಡುವೆಯೂ ತೇಜಸ್ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ 24 ವರ್ಷದ ಯೋಧನ ಸಾಹಸಗಾಥೆ ನನ್ನನ್ನು ಪುಸ್ತಕ ಬರೆಯಲು ಮೊದಲ ಹೆಜ್ಜೆ ಇಡುವಂತೆ ಮಾಡಿತು ಎಂದರು. ಗಲ್ವಾನ್ ಘರ್ಷಣೆ ಚೀನಾಗೆ ಒಂದು ಪಾಠವೇ ಹೊರತು ಭಾರತಕ್ಕಲ್ಲ. ಚೀನಾ ಪೂರ್ವಯೋಜಿತವಾಗಿ ಆಕ್ರಮಣ ನಡೆಸಿತ್ತು. ಆದರೆ ನಮ್ಮ ಯೋಧರು ಚೀನಾದ ಪ್ರದೇಶದೊಳಗೆ ಹೋಗಿ ಅವರನ್ನು ಹೊಡೆದಿದ್ದಾರೆ. ಎಂದರು. ಕ್ಯಾಪ್ಟನ್ ಬೃಜೇಶ್ ಚೌಟ ಅವರು ಸಂವಾದ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.