ಮಂಗಳೂರು ತಾ.ಪಂ. ಕಚೇರಿ ಕಟ್ಟಡ ಉದ್ಘಾಟನೆಯಾಗಿ ಮೂರು ವರ್ಷ: ಬಾಕಿ ಉಳಿದಿವೆ ಕೆಲಸಗಳು
Team Udayavani, Mar 8, 2023, 10:54 AM IST
ಮಂಗಳೂರು: ನಗರದ ಹಂಪನ ಕಟ್ಟೆಯಲ್ಲಿರುವ ಮಂಗಳೂರು ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಕೆಲವೊಂದು ಕೆಲಸಗಳು ಹಾಗೇ ಉಳಿದಿವೆ. ಮುಖ್ಯವಾಗಿ ಕಚೇರಿಯಲ್ಲಿ ಸಭಾಂಗಣ ಇನ್ನೂ ಸುಸಜ್ಜಿತಗೊಂಡಿಲ್ಲ. ಸಭಾಂಗಣಕ್ಕೆ ಬೇಕಾದ ಮೂಲ ಸೌಕರ್ಯಗಳನ್ನೇ ಕಟ್ಟಡ ಪೂರ್ಣಗೊಳಿಸುವ ವೇಳೆ ಕಲ್ಪಿ ಸಿಲ್ಲ. ಇದರಿಂದ ವಿವಿಧ ಸಭೆಗಳನ್ನು ಆಯೋಜಿ ಸುವಾಗ ಸಮಸ್ಯೆಯಾಗುತ್ತಿದ್ದು, ಸರಾಗವಾಗಿ ಸಭೆಗಳು ನಡೆಯುವುದಿಲ್ಲ.
ಕಟ್ಟಡ ಉದ್ಘಾಟನೆಯಾದ ಬಳಿಕ ತಾಲೂಕು ಪಂಚಾ ಯತ್ ಆಡಳಿತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನುವ ಮಾತುಗಳೂ ಕೇಳಿ ಬಂದಿದೆ. ತಾಲೂಕು ಮಟ್ಟದ ವಿವಿಧ ಸಭೆಗಳಾದ ಎಸ್.ಸಿ., ಎಸ್.ಟಿ. ಕುಂದುಕೊರತೆ ಸಭೆ, ಶಾಸಕರ ಸಭೆಗಳು, ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನ ಸಭೆಗಳು ಇದೇ ಸಭಾಂಗಣದಲ್ಲಿ ನಡೆಯುತ್ತವೆ. ಆದರೆ ಟೇಬಲ್‌ಗಳಲ್ಲಿ ಮೈಕ್ ವ್ಯವಸ್ಥೆ ಇಲ್ಲದೆ, ಓರ್ವ ಸಿಬಂದಿ ಮೈಕ್ ಹಿಡಿದುಕೊಂಡು ಮಾತನಾಡುವವ ಬಳಿಗೆ ಅಡ್ಡಾಡುವುದು ಸಾಮಾನ್ಯವಾಗಿದೆ. ಒಂದು ಸೌಂಡ್ ಬಾಕ್ಸ್ , ಎರಡು ಮೈಕ್ ಮೂಲಕ ಸಭೆ ನಡೆಯುತ್ತದೆ.
ಇದರಿಂದ ಕೆಲವೊಮ್ಮೆ ಒಬ್ಬರು ಮಾತನಾಡುವುದು ಎಲ್ಲರಿಗೂ ಕೇಳಿಸುವುದಿಲ್ಲ . ಕಟ್ಟಡ ನಿರ್ಮಾಣ ಮಾಡುವಾಗಲೇ ಬೇಕಾದ ಎಲ್ಲ ಅವಶ್ಯಕತೆಗಳನ್ನು ಕಲ್ಪಿಸದ ಪರಿಣಾಮ ಈಗ ಮತ್ತೆ ಅನುದಾನಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇಬ್ಬರಿಗೆ ಒಂದರಂತೆ 25-30 ಟೇಬಲ್‌ಗಳಿದ್ದು, ಅದರಲ್ಲಿ ಕೆಲವು ಟೇಬಲ್‌ಗಳಿಗೆ ಕುರ್ಚಿ ಇಲ್ಲ. ಪ್ಲಾಸ್ಟಿಕ್ ಕುರ್ಚಿಗಳನ್ನು ಇರಿಸಲಾಗಿದೆ. ಯಾವುದೇ ಟೇಬಲ್‌ಗಳಿಗೆ ಮೈಕ್ ವ್ಯವಸ್ಥೆ ಇಲ್ಲ. ಎಲ್ಲ ಟೇಬಲ್‌ಗಳಿಗೆ ಮೈಕ್ ವ್ಯವಸ್ಥೆ, ನಾಲ್ಕು ಮೂಲೆಗಳಲ್ಲಿ ಸ್ಪೀಕರ್, ಇನ್ನಷ್ಟು ಟೇಬಲ್, ಚೇರ್‌ಗಳ ಅಳವಡಿಕೆ ಮಾಡುವ ಉದ್ದೇಶವಿದೆ ಎನ್ನುತ್ತಾರೆ ಅಧಿಕಾರಿಗಳು.
ನವೀಕರಣಕ್ಕೆ ಪ್ರಯತ್ನ
ತಾಲೂಕು ಪಂಚಾಯತ್ ಕಚೇರಿ ಸಭಾಂಗಣ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಾಲೇ ಚಿಂತನೆ ನಡೆಸಲಾಗಿದೆ. ಸಿಎಸ್‌ಆರ್ ಅನುದಾನ ಲಭ್ಯವಾಗುವ ಕುರಿತು ಪ್ರಯತ್ನ ನಡೆಯುತ್ತಿದ್ದು, ಸಿಕ್ಕಿದರೆ ಅವಶ್ಯಕ ಸಲಕರಣೆಗಳನ್ನು ಅಳವಡಿಸಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ, ಸರಕಾರದ ಅನುದಾನಕ್ಕೆ ಕಾಯಬೇಕಾಗಿದೆ.
-ಲೋಕೇಶ್, ಕಾರ್ಯನಿರ್ವಹಣಾಧಿಕಾರಿ, ಮಂಗಳೂರು ತಾ.ಪಂ.
4.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ತಾಲೂಕು ಪಂಚಾಯತ್ ಕಟ್ಟಡ 4.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 2020ರ ಫೆ.12ರಂದು ಉದ್ಘಾಟನೆಯಾಗಿತ್ತು. ಇದೀಗ ಸುಮಾರು 3 ವರ್ಷಗಳು ಸಂದಿವೆ. ಒಟ್ಟು ಮೂರು ಅಂತಸ್ತಿನ ಕಟ್ಟಡದಲ್ಲಿ ತಳ ಅಂತಸ್ತಿನಲ್ಲಿ ಆಡಳಿತ ಕಚೇರಿ, ಕಾರ್ಯನಿರ್ವಹಣಾಧಿಕಾರಿ ಕಚೇರಿ, ಲೆಕ್ಕಪತ್ರ ಶಾಖೆ ಮೊದಲಾದವುಗಳಿವೆ. ಮೊದಲ ಅಂತಸ್ತಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ, ಸ್ಥಾಯೀ ಸಮಿತಿ ಮೀಟಿಂಗ್ ಹಾಲ್ ಮೊದಲಾದವುಗಳಿವೆ. ಎರಡನೇ ಮಹಡಿಯಲ್ಲಿ 600 ಚ.ಅಡಿ ವಿಸ್ತೀರ್ಣದ 300 ಜನರು ಆಸೀನರಾಗಬಹುದಾದ ಸಭಾಂಗಣ ನಿರ್ಮಿಸಲಾಗಿದೆ.
~ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.