Mangaluru: ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒಗೆ 3 ವರ್ಷಗಳ ಸಜೆ
Team Udayavani, Dec 14, 2024, 1:59 AM IST
ಮಂಗಳೂರು: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ನಾಯ್ಕ ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 3 ವರ್ಷಗಳ ಸಾದಾ ಸಜೆ ಹಾಗೂ 50,000 ರೂ. ದಂಡ ವಿಧಿಸಿದೆ.
2019ರ ಜೂ.3ರಂದು 9/11 ದಾಖಲಾತಿಗೆ ಸಂಬಂಧಿಸಿದಂತೆ ಗ್ರಾಮಸ್ಥರೊಬ್ಬರಿಂದ 9,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿ ಪ್ರೇಮ್ ಸಿಂಗ್ ಅವರನ್ನು ಯಶಸ್ವಿಯಾಗಿ ಟ್ರ್ಯಾಪ್ ಮಾಡಲಾಗಿತ್ತು.
ಎಸಿಬಿ ಡಿವೈಎಸ್ಪಿಯಾಗಿದ್ದ ಮಂಜುನಾಥ ಬಿ. ಕವರಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿ ಮತ್ತು ಯೋಗೀಶ್ ತನಿಖಾಧಿಕಾರಿಗಳಾಗಿದ್ದರು. ಪೊಲೀಸ್ ನಿರೀಕ್ಷಕ ಶ್ಯಾಮ ಸುಂದರ್ ಎಚ್.ಎಂ. ಅವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು ಶುಕ್ರವಾರ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ಅಂತಿಮ ತೀರ್ಪು ನೀಡಿದ್ದು, ಪ್ರೇಮ್ ಸಿಂಗ್ ಅವರಿಗೆ 3 ವರ್ಷಗಳ ಸಾದಾ ಸಜೆ ಹಾಗೂ 50,000 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ತಿಂಗಳ ಕಾಲ ಸಾದಾ ಸಜೆಗೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alvas: ವಿರಾಸತ್ನಲ್ಲಿ ನೀಲಾದ್ರಿ ಕುಮಾರ್ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು
Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ
Mudubidire: ಭಾರತ್ ಸ್ಕೌಟ್ಸ್-ಗೈಡ್ಸ್ ರಾಜ್ಯ ತಂಡಕ್ಕೆ ರಾಷ್ಟ್ರದಲ್ಲೇ ಮೊದಲ ಸ್ಥಾನ
Mangaluru: ಈ ಬಾರಿ ಜನಾಕರ್ಷಣೆಯ ಕರಾವಳಿ ಉತ್ಸವಕ್ಕೆ ಒತ್ತು ನೀಡಿ: ಸಚಿವ ದಿನೇಶ್, ಖಾದರ್
Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Alvas: ವಿರಾಸತ್ನಲ್ಲಿ ನೀಲಾದ್ರಿ ಕುಮಾರ್ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು
Navy: ಪಶ್ಚಿಮ ಕಮಾಂಡ್ನ ಮೆಡಿಕಲ್ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Udupi: ಸಿಎಸ್ಆರ್ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
Manipal Kasturba Hospital: ಶಿಶುವಿನ ಯಕೃತ್ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ
Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.