Mangaluru; ಸಿಸಿಬಿ ಪೊಲೀಸರಿಂದ ಇಸ್ಪೀಟ್ ಅಡ್ಡೆಗೆ ದಾಳಿ: 29 ಜನರ ಬಂಧನ
Team Udayavani, Jan 21, 2024, 8:05 PM IST
ಮಂಗಳೂರು: ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್(ಉಲಾಯಿ-ಪಿದಾಯಿ) ಜೂಜಾಟವಾಡುತ್ತಿದ್ದ ಇಸ್ಪೀಟ್ ಅಡ್ಡೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 29 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು 1,75,450 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಆದಿತ್ಯವಾರ ಮುಂಜಾನೆ ಮೂಲ್ಕಿ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವವೇ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 29 ಜನರನ್ನು ಬಂಧಿಸಿದ್ದಾರೆ.
ಈ ಜೂಜಾಟವನ್ನು ನಿತ್ಯಾನಂದ ,ವಿಲ್ಫ್ರೇಡ್ ಮತ್ತು ರೆಹಮಾನ್ ಎಂಬವರು ತಮ್ಮ ಲಾಭಕ್ಕೋಸ್ಕರ ಆಡಿಸುತ್ತಿದ್ದರು. ಕಾರ್ಯಾಚರಣೆಯ ವೇಳೆ ನಿತ್ಯಾನಂದ ಮತ್ತು ರೆಹಮಾನ್ ಪರಾರಿಯಾಗಿದ್ದಾರೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಿಸಿಬಿ ಘಟಕದ ಸಿಬ್ಬಂದಿಗಳು ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಬಂಧಿತರಿಂದ 1,75,450 ರೂ ನಗದು ಹಣ, 52 ಇಸ್ಪೀಟ್ ಎಲೆಗಳು, 4 ಟೇಬಲ್, 10 ಚೇರ್, 1 ರೆಕ್ಸಿನ್ ಕವರ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.