Mangaluru: ಒಳಚರಂಡಿ ನೀರು ಸಂಪೂರ್ಣ ಮರು ಬಳಕೆ

ಎಲ್ಲ ನಾಲ್ಕು ಸಂಸ್ಕರಣ ಘಟಕಗಳ ನೀರನ್ನು ಪೂರ್ಣವಾಗಿ ಕೈಗಾರಿಕೆ, ಪಾರ್ಕ್‌ಗೆ ಬಳಸಲು ಪಾಲಿಕೆ ಚಿಂತನೆ

Team Udayavani, Dec 5, 2024, 3:04 PM IST

7

ಮಹಾನಗರ: ನಗರದ 60 ವಾರ್ಡ್‌ಗಳ ಕೊಳಚೆ ನೀರು ಶುದ್ದೀಕರಣಗೊಂಡ ಬಳಿಕ ಅದನ್ನು ಸಂಪೂರ್ಣ ಮರು ಬಳಕೆ ಮಾಡುವ ನಿಟ್ಟಿನಲ್ಲಿ ಇದೀಗ ಮಂಗಳೂರು ಮಹಾನಗರ ಪಾಲಿಕೆ ವಿಶೇಷ ಆಸ್ಥೆ ತೋರಿದೆ.

ನಗರದಲ್ಲಿರುವ 4 ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಪೈಕಿ ಕಾವೂರು ಹಾಗೂ ಪಚ್ಚನಾಡಿ ಘಟಕದ ಭಾಗಶಃ ನೀರನ್ನು ಮರು ಬಳಕೆ ಮಾಡಲಾಗುತ್ತಿದ್ದು, ಉಳಿದ ನೀರು ಶುದ್ಧೀಕರಣವಾಗಿ ನದಿ ಸೇರುತ್ತಿದೆ. ಇದನ್ನು ಪೂರ್ಣವಾಗಿ ಮರುಬಳಕೆ ಮಾಡುವುದು ಈಗಿನ ಯೋಚನೆ. ಜತೆಗೆ, ಸುರತ್ಕಲ್‌, ಜಪ್ಪಿನಮೊಗರು ಘಟಕದ ನೀರನ್ನೂ ಶುದ್ಧಗೊಳಿಸಿ ಬಳಸುವುದು ಚಿಂತನೆ.

ಕುದ್ರೋಳಿ, ಪಾಂಡೇಶ್ವರ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್‌ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ (ಸುರತ್ಕಲ್‌, ಜಪ್ಪಿನಮೊಗರು, ಕಾವೂರು, ಪಚ್ಚನಾಡಿ) ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ.

ಈ ಪೈಕಿ 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿಯನ್ನು ಎಸ್‌ಇಝಡ್‌ (ಶೇ.60) ಹಾಗೂ ಮಂಗಳೂರು ಪಾಲಿಕೆ(ಶೇ.40) ನಿರ್ವಹಣೆ ಮಾಡುತ್ತಿದೆ. ಸರಾಸರಿ 20 ಎಂಎಲ್‌ಡಿ ನೀರನ್ನು ಇಲ್ಲಿ ಸಂಸ್ಕರಣೆ ಮಾಡಿ ಅದನ್ನು ಎಸ್‌ಇಝಡ್‌ನ‌ಲ್ಲಿರುವ ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಇಲ್ಲಿನ ಕೊಳಚೆ ನೀರನ್ನು ಶುದ್ದೀಕರಿಸಿ ಕೈಗಾರಿಕೆಗಳ ಬಳಕೆಗೆ ನೀಡಲಾಗುತ್ತಿದೆ.

ಜತೆಗೆ ಪಚ್ಚನಾಡಿಯಲ್ಲಿರುವ 8.7 ಎಂಎಲ್‌ಡಿ ಸಾಮರ್ಥಯದ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ (ಸೆಕೆಂಡರಿ ಟ್ರೀಟ್‌ಮೆಂಟ್‌ ಪ್ಲಾಂಟ್‌-ಎಸ್‌ಟಿಪಿ) ಶುದ್ಧೀಕರಿಸಿ ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್‌ಮೆಂಟ್‌ ಪ್ಲಾಂಟ್‌ಗೆ(ಟಿಟಿಪಿ) ಬಿಡಲಾಗುತ್ತದೆ. ಅಲ್ಲಿ ಮತ್ತೆ ಸ್ವತ್ಛ ನೀರನ್ನಾಗಿ ಪರಿವರ್ತಿಸಿ ಪಿಲಿಕುಳ ನಿಸರ್ಗಧಾಮದಲ್ಲಿ ಗಿಡಗಳಿಗೆ ಬಳಸಲಾಗುತ್ತದೆ. ಪ್ರತೀದಿನ ಹೀಗೆ ಬರುವ 6.5 ಎಂ.ಎಲ್‌.ಡಿ. ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಪ್ರತಿನಿತ್ಯ ನೀಡಲಾಗುತ್ತದೆ. ಉಳಿದ ನೀರನ್ನು ಪಿಲಿಕುಳ ಗಾಲ್ಫ್ ಕ್ಲಬ್‌ಗ ನೀಡಲಾಗುತ್ತಿದೆ. ಇವೆರಡೂ ಘಟಕದಲ್ಲಿ ಮರು ಬಳಕೆಗೆ ನಿಗದಿ ಮಾಡಲಾದ ನೀರಿನ ಹೆಚ್ಚುವರಿ ನೀರನ್ನು ಸಂಪೂರ್ಣ ಶುದ್ದೀಕರಿಸಿ ನದಿಗೆ ಬಿಡಲಾಗುತ್ತದೆ.

ಸುರತ್ಕಲ್‌, ಜಪ್ಪಿನಮೊಗರಿಗೆ ಯೋಜನೆ
16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್‌ ಎಸ್‌ಟಿಪಿ ಹಾಗೂ 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ ನೀರಿನ ಮರು ಬಳಕೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇಲ್ಲಿಂದ ಕಾವೂರಿಗೆ ಪೈಪ್‌ಲೈನ್‌ ಹಾಕಿ ಶುದ್ದೀಕರಿಸಿದ ನೀರನ್ನು ಮರು ಬಳಕೆಗೆ ಲಭ್ಯವಾಗುವಂತೆ ಮಾಡುವ ಬಗ್ಗೆ ಪಾಲಿಕೆ ಮನಸ್ಸು ಮಾಡಿತಾದರೂ ಫಲಪ್ರದವಾಗಿಲ್ಲ. ಪೈಪ್‌ಲೈನ್‌ ವೆಚ್ಚ ನಿಭಾಯಿಸುವುದೇ ಪಾಲಿಕೆಗೆ ಹೊರೆಯಾಗಿ ಯೋಜನೆ ಬಾಕಿಯಾಗಿದೆ.

ಮಂಗಳೂರಿನಲ್ಲಿ ಬೇಸಗೆ ಬಂದಾಗ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತದೆ. ಒಂದು ವೇಳೆ ಕೊಳಚೆ ನೀರು ಶದ್ಧೀಕರಣಕ್ಕೆ ಒತ್ತು ನೀಡಿ ಕುಡಿಯಲು ಹೊರತುಪಡಿಸಿದ ಕಾರ್ಯಕ್ಕೆ ಈ ನೀರು ಬಳಕೆ ಮಾಡಿದರೆ ಶೇ.30ರಷ್ಟು ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಆದರೆ ಇದಕ್ಕೆ ಬಳಕೆ ಮಾಡುವ ಯಂತ್ರಗಳು, ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಪ್ರಾರಂಭಿಕವಾಗಿ ಸಣ್ಣ ಮಟ್ಟದಲ್ಲಿ ಆರಂಭಿಸಿ ಇದು ಯಶಸ್ವಿಯಾದಾಗ ದೊಡ್ಡ ಮಟ್ಟಕ್ಕೆ ವಿಸ್ತರಣೆ ಮಾಡಲು ಸುಲಭವಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ.

ಕೈಗಾರಿಕೆಗಳ ಬಳಕೆಗೆ ನೀರು ಅಗತ್ಯ
ಕೈಗಾರಿಕೆ, ಕಟ್ಟಡ ನಿರ್ಮಾಣ, ಪಾರ್ಕ್‌, ಉದ್ಯಾನವನ ಸಹಿತ ವಿವಿಧ ಕಡೆಗಳಲ್ಲಿ ಶುದ್ದೀಕರಿಸಿದ ಕೊಳಚೆ ನೀರು ಬಳಕೆಗೆ ಅವಕಾಶವಿದೆ. ಆದರೆ ಆ ನೀರನ್ನು ಘಟಕದಿಂದ ಕೊಂಡೊಯ್ಯುವುದು ಮಾತ್ರ ಸವಾಲು. ಸದ್ಯದ ಮಾಹಿತಿ ಪ್ರಕಾರ ಎಂಆರ್‌ಪಿಎಲ್‌ ಸಂಸ್ಥೆಗೆ ಶುದ್ದೀಕರಿಸಿದ ಕೊಳಚೆ ನೀರು ಇನ್ನಷ್ಟು ಅಗತ್ಯವಿದೆ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚುವರಿ ನೀರು ಎಂಆರ್‌ಪಿಎಲ್‌ ಪಡೆಯುವ ಸಾಧ್ಯತೆ ಇದೆ.

ಎಂಆರ್‌ಪಿಎಲ್‌ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ 6 ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಇದರಲ್ಲಿರುವ ಕ್ಯಾಪ್ಟಿವ್‌ ಪವರ್‌ ಪ್ಲಾಂಟ್‌ ಮೂಲಕ ವಿದ್ಯುತ್‌ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 400 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು ಅದನ್ನು ತಣಿಸುವುದಕ್ಕೆ ಮತ್ತೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ. ಸದ್ಯ ಕಾವೂರು ಒಳಚರಂಡಿ ಸಂಸ್ಕರಣಾ ಘಟಕದಿಂದ ನೀರು ಪಡೆಯಲಾಗುತ್ತಿದೆ.

ನೀರು ಮರು ಬಳಕೆ ಅಗತ್ಯ
ನಾಗ್ಪುರ ಮಾದರಿಯಲ್ಲೇ ಮಂಗಳೂರಿನಲ್ಲೂ ಕೊಳಚೆ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಮರುಬಳಕೆಗೆ ಸಿಗುವಂತೆ ಯೋಜನೆ ರೂಪಿಸಬೇಕಾಗಿದೆ. ಶುದ್ಧೀಕರಿಸಿದ ಈ ನೀರನ್ನು ಕಟ್ಟಡ ಕಾಮಗಾರಿ, ಕೈಗಾರಿಕೆ ಗಳಿಗೆ ಬಳಕೆ ಮಾಡಬಹುದಾ ಗಿದೆ. ಮಹಾನಗರಪಾಲಿಕೆ ಈ ಯೋಜನೆಯನ್ನು ಕೈಗೆತ್ತಿ ಕೊಂಡರೆ ಎಂಆರ್‌ಪಿಎಲ್‌ ತನ್ನ ಕೈಗಾರಿಕೆಗೆ ಬಳಸಿಕೊಳ್ಳಲು ತಯಾರಿದೆ. ಜತೆಗೆ ಪಾರ್ಕ್‌, ಕೈಗಾರಿಕೆ, ಕಟ್ಟಡ ಕಾಮಗಾರಿಗೆ ನೀಡಲು ಅವಕಾಶವಿದೆ.
– ಡಾ| ಭರತ್‌ ಶೆಟ್ಟಿ ವೈ., ಶಾಸಕರು, ಮಂಗಳೂರು ಉ.

ಎಂಆರ್‌ಪಿಎಲ್‌ ಜತೆಗೆ ಸಭೆ
ಕೊಳಚೆ ನೀರು ಶುದ್ಧೀಕರಣ ನಡೆಸಿ ಅದರ ಮರುಬಳಕೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಮುಂದಿನ ವಾರದಲ್ಲಿ ಎಂಆರ್‌ಪಿಎಲ್‌ ಜತೆಗೆ ವಿಶೇಷ ಸಭೆ ನಡೆಸಲು ಉದ್ದೇಶಿಸಲಾಗಿದೆ. ಹೆಚ್ಚುವರಿ ನೀರು ಅವರಿಗೆ ಆವಶ್ಯಕತೆ ಇದೆ. ಕೊಳಚೆ ನೀರು ಸಾಗಾಟಕ್ಕೆ ವೆಚ್ಚ ಅಧಿಕವಾಗಲಿದೆ; ಹೀಗಾಗಿ ಇದನ್ನು ಯಾರು ನಿಭಾಯಿಸುವುದು ಹಾಗೂ ನಿರ್ವಹಣೆ ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.
– ಆನಂದ್‌ ಸಿ.ಎಲ್‌, ಆಯುಕ್ತರು, ಮನಪಾ

-ದಿನೇಶ್‌ ಇರಾ

ಟಾಪ್ ನ್ಯೂಸ್

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.