ಮುಸ್ಲಿಂ ಡಿಫೆನ್ಸ್ ಫೋರ್ಸ್ ಕುರಿತು ಮಾಹಿತಿ ಸಂಗ್ರಹ: ಪೊಲೀಸ್ ಕಮಿಷನರ್
Team Udayavani, May 6, 2022, 7:45 AM IST
ಮಂಗಳೂರು : ಮುಸ್ಲಿಂ ಡಿಫೆನ್ಸ್ ಫೋರ್ಸ್ (ಎಂಡಿಎಫ್) ಹೆಸರಿನಲ್ಲಿ ತಾಲಿಬಾನಿ ಫತ್ವಾ ಸಂಸ್ಕೃತಿ ಹೇರಲು ಯತ್ನಿಸುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲವು ತಿಂಗಳುಗಳಿಂದ ಎಂಡಿಎಫ್ ಹೆಸರಿನಲ್ಲಿ ಬುರ್ಖಾ ಧರಿಸುವಂತೆ ಮುಸ್ಲಿಂ ಯುವತಿಯರಿಗೆ ಕಟ್ಟೆಚ್ಚರಿಕೆ ನೀಡುವುದು, ಮಾಲ್ಗಳಲ್ಲಿ ತಿರುಗಾಡುವ ಮಕ್ಕಳ ಪೊಷಕರಿಗೂ ಎಚ್ಚರಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ಸ್ಟಾಗ್ರಾಂ ಪೇಜ್ ಮತ್ತು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಈ ರೀತಿಯ ಹೇಳಿಕೆ ಹಾಕಲಾಗಿದೆ. ಈ ಮೆಸೇಜ್ ಯಾರು ಹಾಕಿದ್ದು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ, ಇನ್ನೂ ದೂರು ದಾಖಲು ಮಾಡಿಲ್ಲ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ವಿದೇಶಿ ಸಿಮ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಕಾರಿಯಾಗಿ ಬರೆಯು ವವರ ಮೇಲೂ ನಿಗಾ ಇರಿಸಿದ್ದೇವೆ. ನಿರ್ದಿಷ್ಟವಾಗಿ ಎಂಡಿಎಫ್ ಬಗ್ಗೆ ತನಿಖೆಗೆ ಪೊಲೀಸ್ ತಂಡ ರಚನೆ ಮಾಡಿಲ್ಲ, ಈ ಬಗ್ಗೆ ದೂರುಗಳೂ ಬಂದಿಲ್ಲ. ದೂರು ಬಂದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಎಂಡಿಎಫ್ ಜತೆಗೆ ಬೇರೆ ಬೇರೆ ಗ್ರೂಪ್ಗ್ಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಆಗುತ್ತಿದೆ. ಈ ರೀತಿ ಮೆಸೇಜ್ ಮಾಡುವವರ ಎಲ್ಲ ಮಾಹಿತಿ ದಾಖಲಾಗುತ್ತದೆ. ಅಂತಹವರ ಮೊಬೈಲ್ ವಿವರಗಳೂ ಸಿಗುತ್ತವೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇರಿಸುವುದಕ್ಕಾಗಿಯೇ ಒಬ್ಬ ಅಧಿಕಾರಿ, ಆರು ಮಂದಿ ಸಿಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಏನಿದು ಎಂಡಿಎಫ್?
ನಿರ್ದಿಷ್ಟವಾಗಿ ಯಾವುದೇ ಸಂಘಟನೆಯ ಸ್ವರೂಪವಿಲ್ಲದೆ ಸೋಶಿಯಲ್ ಮೀಡಿಯಾ ಮೂಲಕವೇ ಈ ಹೆಸರಿನಲ್ಲಿ ಕೆಲವರು ಕಾರ್ಯಾಚರಿಸುತ್ತಿದ್ದಾರೆ. ಈ ಹೆಸರಿನಲ್ಲಿ ಮೂಲಭೂತವಾದಿ ವಿಚಾರಗಳನ್ನು ಹರಿಯ ಬಿಡಲಾಗುತ್ತಿದೆ. ಬುರ್ಖಾ, ಹಿಜಾಬ್ ಧರಿಸಿ ಬರುವ ಮುಸ್ಲಿಂ ಯುವತಿಯರು ಅಸಭ್ಯ ವರ್ತನೆ ತೋರಿದರೆ ಮಾನ ಹರಾಜು ಹಾಕಲಿದ್ದೇವೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.