Mangaluru ಅಧಿಕ ಲಾಭದ ಆಮಿಷ: 78 ಲ.ರೂ. ವಂಚನೆ
Team Udayavani, Mar 18, 2024, 12:22 AM IST
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಮತ್ತು ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಇಬ್ಬರಿಗೆ ಒಟ್ಟು 78 ಲ.ರೂ. ವಂಚಿಸಲಾಗಿದೆ.
ನಗರದ ಅಶೋಕ ನಗರದ ನಿವಾಸಿಯೋರ್ವರು ಫೇಸ್‌ಬುಕ್ ನೋಡುತ್ತಿದ್ದಾಗ ಅದರಲ್ಲಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಸಂದೇಶವಿತ್ತು. ಅದರಲ್ಲಿದ್ದ ಲಿಂಕ್ ತೆರೆದು ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅದರಲ್ಲಿ ಬಂದ ಸೂಚನೆಯಂತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಲಾಭಾಂಶ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಲಾಭಾಂಶ ನೀಡಬೇಕಾದರೆ ತೆರಿಗೆ ಪಾವತಿ ಮಾಡಬೇಕೆಂದು ಸೂಚಿಸಲಾಯಿತು ಅದನ್ನು ನಂಬಿ ಮತ್ತಷ್ಟು ಹಣ ಹೂಡಿಕೆ ಮಾಡಿದರು. ಆದರೆ ಅವರಿಗೆ ಯಾವುದೇ ಹಣ ವಾಪಸ್ ನೀಡಲಿಲ್ಲ. ಅವರಿಂದ ಜ.16ರಿಂದ ಫೆ.3ರ ವರೆಗೆ ಒಟ್ಟು 39.40 ಲ.ರೂ.ಗಳನ್ನು ಅಪರಿಚಿತರು ಹೂಡಿಕೆ ನೆಪದಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ದೂರುದಾರರ ವಾಟ್ಸ್ ಅಪ್ ಸಂಖ್ಯೆಗೆ ಅಪರಿಚಿತರು ಸಂದೇಶ ಕಳುಹಿಸಿ ಪಾರ್ಟ್ ಟೈಂ ಉದ್ಯೋಗವಾಗಿ ಗೂಗಲ್ ರಿವೀವ್ ಟಾಸ್ಕ್ ಮಾಡುವಂತೆಯೂ ಅಧಿಕ ಲಾಭಾಂಶ ನೀಡುವುದಾಗಿಯೂ ತಿಳಿಸಿದರು. ಅದನ್ನು ನಂಬಿದ ದೂರುದಾರರು ಟೆಲಿಗ್ರಾಂ ಆ್ಯಪ್ ಸೇರ್ಪಡೆಯಾಗಿ ಟಾಸ್ಕ್ನ ಭಾಗವಾಗಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದರು. ಆದರೆ ಅವರಿಗೆ ಯಾವುದೇ ಹಣ ನೀಡಲಿಲ್ಲ. ಜ.25ರಿಂದ ಫೆ.21ರ ವರೆಗೆ ಒಟ್ಟು 39,38,139 ರೂ.ಗಳನ್ನು ಅಪರಿಚಿತರು ವರ್ಗಾಯಿಸಿ ವಂಚಿಸಿದ್ದಾರೆ ಎಂದು ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.