Mangaluru: ಫ್ಲ್ಯಾಟ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ನಿರ್ವಹಣ ವೆಚ್ಚ: ನ್ಯಾಯಾಲಯ ಆದೇಶ
Team Udayavani, Sep 4, 2024, 6:10 AM IST
ಮಂಗಳೂರು: ಬಹುಮಹಡಿ ಕಟ್ಟಡಗಳ ಫ್ಲ್ಯಾಟ್‌ಗಳಿಗೆ ಅವುಗಳ ವಿಸ್ತೀರ್ಣಕ್ಕೆ ತಕ್ಕಂತೆ ಮಾಸಿಕ ನಿರ್ವಹಣ ವೆಚ್ಚ ವಸೂಲಿ ಮಾಡಬೇಕು ಎಂದು ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.
ಮಂಗಳೂರು ನಗರದ ಕೊಟ್ಟಾರದ ಬಳಿ ಇರುವ ಬಹುಮಹಡಿ ಕಟ್ಟಡವೊಂದರದಲ್ಲಿ 2018ರಿಂದ 2021ರ ವರೆಗೆ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಕಟ್ಟಡ ಮಾಲಕರು ತಮ್ಮ ಫ್ಲ್ಯಾಟಿನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕಿಗನುಗುಣವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸುತ್ತಿದ್ದರು. ಆದರೆ 2021ರಲ್ಲಿ ಕಟ್ಟಡದ ಅಸೋಸಿಯೇಷನ್ ಎಲ್ಲ ಫ್ಲ್ಯಾಟ್ ಮಾಲಕರು ಏಕರೂಪದ ಮಾಸಿಕ ನಿರ್ವಹಣ ವೆಚ್ಚ ಕೊಡಬೇಕಾಗಿ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯದ ವಿರುದ್ಧ ಒಂದು ಫ್ಲ್ಯಾಟ್‌ನ ಮಾಲಕ ಚಂದ್ರಹಾಸ ಅಮೀನ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ವಾದಿ ಮತ್ತು ಪ್ರತಿವಾದಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿ ವಿಚಾರಣೆಯನ್ನು ಪರಿಗಣಿಸಿ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 1972ನೇ ಅಪಾರ್ಟ್‌ಮೆಂಟ್ ಓನರ್‌ಶಿಪ್ ಆ್ಯಕ್ಟ್ ಪ್ರಕಾರ ಮಾಲಕರು ತಮ್ಮ ಫ್ಲ್ಯಾಟ್‌ನ ವಿಸ್ತೀರ್ಣ ಅಥವಾ ಶೇಕಡಾವಾರು ಅವಿಭಜಿತ ಹಕ್ಕುಗಳ ಸಾರವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸಲು ಬದ್ಧರು ಎಂದು ಆ. 21ರಂದು ಆದೇಶ ನೀಡಿದೆ. ಅಲ್ಲದೆ ಎಲ್ಲ ಫ್ಲ್ಯಾಟ್‌ಗಳ ಮಾಲಕರು ಏಕರೂಪದ ವಂತಿಗೆಯನ್ನು ನೀಡಬೇಕೆಂದು ಅಸೋಸಿಯೇಷನ್ ಮಾಡಿದ ನಿರ್ಣಯವನ್ನು ನ್ಯಾಯಾಲಯ ವಜಾಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.