Mangaluru physiocon 2023; ರಾಜ್ಯದಲ್ಲಿ ಅವಿರೋಧ ಜಾರಿಗೆ ಪ್ರಯತ್ನ: ಬಸವರಾಜ ಹೊರಟ್ಟಿ
ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ
Team Udayavani, Sep 10, 2023, 11:18 PM IST
ಮಂಗಳೂರು: ಫಿಸಿಯೋಥೆರಪಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಪ್ರೊಫೆಶನ್ಸ್ ಆ್ಯಕ್ಟ್ (ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ) 2021 ಅನ್ನು ರಾಜ್ಯದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು ಅವಿರೋಧವಾಗಿ ಜಾರಿಯಾಗುವಂತೆ ಪ್ರಯತ್ನಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ದ.ಕ.ಫಿಸಿಯೋಥೆರಪಿ ಶಿಕ್ಷಕರ ಸಂಘದ ವತಿಯಿಂದ ನಡೆದ ಮಂಗಳೂರು ಫಿಸಿಯೋಕಾನ್ 2023 – ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರತಿ ಆಸ್ಪತ್ರೆಯಲ್ಲೂ ಫಿಸಿ ಯೋಥೆರಪಿ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ. ಇಂದು ವೈದ್ಯರಷ್ಟೇ ಪ್ರಾಧಾನ್ಯತೆ ಫಿಸಿಯೋಥೆರಪಿಸ್ಟ್‌ಗಳಿಗೂ ಇದೆ. ಕೆಲವು ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿ ಸಹಜ ಜೀವನ ನಡೆಸುವಲ್ಲಿ ನೆರವಾಗುವುದು ಫಿಸಿಯೋಥೆರಪಿಸ್ಟ್
ಗಳು ಎಂದರು.
ಸ್ವಂತ ಅನುಭವ ಹೊಂದಿದ್ದೇನೆ
ಎರಡು ವರ್ಷಗಳ ಹಿಂದೆ ಮಂಡಿನೋವಿನಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದೆ. ಹಲವರು ಹಲವು ಸಲಹೆಗಳನ್ನು ನೀಡಿದ್ದರು. ಮಂಡಿಚಿಪ್ಪು ಬದಲಾವಣೆಯ ಬಗ್ಗೆಯೂ ಆಲೋಚಿಸಿದ್ದೆ. ಆದರೆ ಫಿಸಿಯೋಥೆರಪಿ ಕಡೆಗೆ ಒಲವು ತೋರಿಸಿ ಚಿಕಿತ್ಸೆ ಪಡೆದು ಗುಣವಾಗಿದೆ. ಪರಿಣಾಮ ಇಂದು ಯಾವುದೇ ಕಾರ್ಯಕ್ರಮದಲ್ಲಿ ಗಂಟೆಗಟ್ಟಲೆ ನಿಂತು ಮಾತನಾಡಲು ಸಾಧ್ಯವಾಗಿದೆ ಎಂದು ತಮ್ಮ ಅನುಭವ ತಿಳಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಕುಲಸಚಿವ (ಮೌಲ್ಯಮಾಪನ) ಡಾ| ರಿಯಾಝ್ ಬಾಷಾ ಎಸ್. ಅವರು, ಫಿಸಿಯೋಥೆರಪಿಸ್ಟ್‌ಗಳದ್ದು ನೋವು ಗುಣಪಡಿಸುವಂತಹ ಕೆಲಸವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿರುವಂತೆ ಕೆಲವು ವಿಭಾಗಗಳಲ್ಲಿ ಸ್ಪೆಷಲಿಸ್ಟ್‌ಗಳಾಗುವ ಅಗತ್ಯವಿದೆ ಎಂದರು.
ತೇಜಸ್ವಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಮಾತನಾಡಿ, ಫಿಸಿಯೋಥೆರಪಿ ವೈದ್ಯಕೀಯ ಕ್ಷೇತ್ರ ದಲ್ಲಿ ಅಗತ್ಯದ ವಿಭಾಗವಾಗಿದ್ದು, ರೋಗಿಗಳನ್ನು ಸಹಜ ಸ್ಥಿತಿಗೆ ತರುವಲ್ಲಿ ಅವರ ಪಾತ್ರ ಮಹತ್ತರವಾದುದು. ರೊಬೊಟಿಕ್, ಕೃತಕ ಬುದ್ಧಿಮತ್ತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಯಾಗಿದೆ ಎಂದರು.
ಪ್ರಶಸ್ತಿ ಪ್ರದಾನ
ಪುಣೆಯ ಸ್ನೇಹಲ್ ದೇಶಪಾಂಡೆ ಅವರಿಗೆ ಫಿಸಿಯೋ ರತ್ನ, ಡಾ| ಮಧುಲಿಕಾ ಹೊರಟ್ಟಿ ಅವರಿಗೆ ಬೆಸ್ಟ್ ಕ್ಲಿನಿಕಲಿಸ್ಟ್ ಮತ್ತು ಡಾ| ಚಂದ್ರಶೇಖರ್ ಕೊಡಬಗಿ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂದಿನ ವರ್ಷದ ಸಮ್ಮೇಳನ 2024ರ ಫೆ.16-17ರಂದು ಹುಬ್ಬಳ್ಳಿ-ಧಾರವಾಡದ ಡಿವಿಎಚ್ ಕಲಾಕ್ಷೇತ್ರದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
ಭಾರತೀಯ ಫಿಸಿಯೋಥೆರಪಿ ಸಂಘದ ಉಪಾಧ್ಯಕ್ಷ ಡಾ| ಸುರೇಶ್ ಬಾಬು ರೆಡ್ಡಿ, ಅಂತಾರಾಷ್ಟ್ರೀಯ ಉಪನ್ಯಾಸಕಾರ ಸಿಂಗಾಪುರದ ಡಾ| ಸೆಂಗ್ ಕ್ವೀ ವೀ, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸೆನೆಟ್ ಸದಸ್ಯರಾದ ಡಾ| ಸಾಯಿ ಕುಮಾರ್, ಡಾ| ಶಿವ ಶರಣ್ ಶೆಟ್ಟಿ, ಡಾ| ಶರಣ್ ಶೆಟ್ಟಿ, ಸಿಂಡಿಕೇಟ್ ಸದಸ್ಯ ಡಾ| ಕೆ.ವೆಂಕಟಗಿರಿ, ಸಂಘಟನ ಸಮಿತಿ ಅಧ್ಯಕ್ಷ ಡಾ| ಯು.ಟಿ. ಇಫ್ತಿಕರ್ ಆಲಿ ಉಪಸ್ಥಿತರಿದ್ದರು.
ಡಾ| ಭರತ್ ಕೆ.ಎಚ್. ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು. ಜಂಟಿ ಕಾರ್ಯದರ್ಶಿ ಡಾ| ಸಜೇಶ್ ರಘುನಾಥನ್ ಸ್ವಾಗತಿಸಿದರು. ಸಂಚಾಲಕಿ ಪ್ರೊ| ವೈಶಾಲಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.