![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 4, 2023, 8:47 PM IST
ಮಂಗಳೂರು: ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ 6 ಮಂದಿಯನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ. 2ರಂದು ಸಂಜೆ ನಗರದ ಜೈಲು ರಸ್ತೆಯ ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಮುರುಡೇಶ್ವರದ ಶಶಾಂಕ್ ಜೈವಂತ್(21)ನನ್ನು ವಿಚಾರಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ರಾತ್ರಿ 8 ಗಂಟೆಗೆ ಎಸ್‌ಡಿಎಂ ಕಾಲೇಜು ಬಳಿ ಡ್ರಗ್ಸ್ ಸೇವನೆ ಮಾಡಿದ್ದ ಅಳಕೆಯ ಸೂರ್ಯಪ್ರತಾಪ್ ಸಿಂಗ್(21)ನನ್ನು ಬಂಧಿಸಲಾಗಿದೆ. ರಾತ್ರಿ 8.30ಕ್ಕೆ ಕರಾವಳಿ ಮೈದಾನದ ಬಳಿ ಡ್ರಗ್ಸ್ ಸೇವಿಸಿದ್ದ ಬಾಗಲಕೋಟೆಯ ಯಮನೂರ್ (22) ಮತ್ತು ನಂದನ್(20)ನನ್ನು ಬಂಧಿಸಲಾಗಿದೆ.
ಸಂಜೆ 7.45ಕ್ಕೆ ಬಲ್ಮಠ ಗ್ರೌಂಡ್ ಬಳಿ ಡ್ರಗ್ಸ್ ಸೇವಿಸಿದ್ದ ಸುಂಕದಕಟ್ಟೆಯ ದೀಕ್ಷಿತ್ (27) ಮತ್ತು ಅಶೋಕ ನಗರದ ಭೀಮಣ್ಣ ಗೋಗಿ (24)ನನ್ನು ಬಂಧಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.