Mangaluru; ವಿದ್ಯಾರ್ಥಿಗಳ ಹೊಡೆದಾಟ: ವೀಡಿಯೋ ವೈರಲ್
Team Udayavani, Aug 2, 2024, 11:49 PM IST
![Fight](https://www.udayavani.com/wp-content/uploads/2024/08/Fight-620x372.jpg)
![Fight](https://www.udayavani.com/wp-content/uploads/2024/08/Fight-620x372.jpg)
ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜು ಆಡಳಿತ ಮಂಡಳಿಯು ಆ.1ರಂದು ಕಾಲೇಜು ಗೇಟಿನ ಹೊರ ಭಾಗದಲ್ಲಿ ವಿದ್ಯಾರ್ಥಿಗಳ ನಡುವೆ ನಡೆದಿರುವ ಸಣ್ಣ ಗಲಾಟೆ ಇದಾಗಿದ್ದು, ಇದರಲ್ಲಿ ಭಾಗಿಯಾ ಗಿದ್ದ ವಿದ್ಯಾರ್ಥಿಗಳನ್ನು ಗುರುತಿಸ ಲಾಗಿದೆ. ಕಾಲೇಜಿನ ಶಿಸ್ತು ಸಮಿತಿ ವಿಚಾರಣೆ ನಡೆಸಿದೆ ಎಂದು ತಿಳಿಸಿದೆ.