“ಭೋಜರಾಜ್ ಎಂಬಿಬಿಎಸ್’ ತುಳು ಸಿನೆಮಾ ತೆರೆಗೆ
Team Udayavani, Feb 19, 2022, 6:55 AM IST
ಮಂಗಳೂರು: ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ಪ್ರಭಾ ನಾರಾಯಣ ಸುವರ್ಣ ಮುಂಬಯಿ ಅರ್ಪಿಸುವ ರಫೀಕ್ ದರ್ಬಾರ್ ನಿರ್ಮಾಣದ ಪರ್ವೇಜ್ ಬೆಳ್ಳಾರೆ, ಶರಣ್‌ರಾಜ್ ಸುವರ್ಣ ಕಾಸರಗೋಡು ಸಹ ನಿರ್ಮಾಣದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದಲ್ಲಿ ತಯಾರಾದ “ಭೋಜರಾಜ್ ಎಂಬಿಬಿಎಸ್’ ತುಳು ಚಿತ್ರ ಶುಕ್ರವಾರ ಕರಾವಳಿಯ ವಿವಿಧ ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡಿದೆ.
ಮಂಗಳೂರಿನಲ್ಲಿ ರೂಪವಾಣಿ, ಸಿನೆಪೊಲಿಸ್, ಪಿವಿಆರ್, ಬಿಗ್ ಸಿನಿಮಾಸ್, ಸುರತ್ಕಲ್‌ನಲ್ಲಿ ನಟರಾಜ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡುಬಿದಿರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಕುಂದಾಪುರದಲ್ಲಿ ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾಸರಗೋಡಿನಲ್ಲಿ ಕೃಷ್ಣಾ, ಮುಳ್ಳೇರಿಯಾದಲ್ಲಿ ಕಾವೇರಿ ಚಿತ್ರಮಂದಿರಗಳಲ್ಲಿ ಸಿನೆಮಾ ಏಕಕಾಲದಲ್ಲಿ ತೆರೆಕಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನೆಮಾಸ್‌ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ಮಾಪಕ ಟಿ.ಎ. ಶ್ರೀನಿವಾಸ್ ಉದ್ಘಾಟಿಸಿದರು. ತುಳು ಸಿನೆಮಾವನ್ನು ಎಲ್ಲರೂ ವೀಕ್ಷಿಸುವ ಮೂಲಕ ತುಳು ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ನಟ ಭೋಜರಾಜ ವಾಮಂಜೂರು ಮಾತನಾಡಿ, ತುಳು ಚಿತ್ರರಂಗ ಐವತ್ತರ ಗಡಿಯನ್ನು ದಾಟಿ ಮುಂದುವರಿದಿದೆ. ತುಳುವಿನಲ್ಲಿ ತೆರೆಕಾಣುತ್ತಿರುವ 122ನೇ ಸಿನೆಮಾ “ಭೋಜರಾಜ ಎಂಬಿಬಿಎಸ್’ ಆಗಿದ್ದು, ಸರ್ವಧರ್ಮದ ಕಲಾಭಿಮಾನಿಗಳ ಪ್ರೋತ್ಸಾಹ ಬೇಕು ಎಂದರು.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ, “ಬಣ್ಣಬಣ್ಣದ ಬದುಕು’ ಮತ್ತು “ಪಮ್ಮೆಣ್ಣೆ ದಿ ಗ್ರೇಟ್’ ಸಿನೆಮಾದ ಅನಂತರ ಮೂಡಿ ಬಂದ ಈ ಸಿನೆಮಾಕ್ಕೆ ಪ್ರೇಕ್ಷಕರ ಆಶೀರ್ವಾದ ದೊರೆಯಲಿ ಎಂದರು.
ರಂಗನಟ ವಿ.ಜಿ. ಪಾಲ್, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ರಫೀಕ್ ದರ್ಬಾರ್, ಪ್ರಭಾ ಸುವರ್ಣ, ನಾರಾಯಣ ಸುವರ್ಣ, ಸುಮಲತಾ ಸುವರ್ಣ ಉಪಸ್ಥಿತರಿದ್ದರು.
ಚಿತ್ರದಲ್ಲಿ ಭೋಜರಾಜ ವಾಮಂಜೂರು ಮುಖ್ಯ ಪಾತ್ರದಲ್ಲಿ ಅಭಿ ನಯಿಸಿದ್ದಾರೆ. ದೇವದಾಸ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಶೀತಲ್ ನಾಯಕ್, ನವ್ಯಾ ಪೂಜಾರಿ, ರವಿ ರಾಮಕುಂಜ, ರೋನ್ಸ್ ಲಂಡನ್, ಪ್ರಾಣ್ ಶೆಟ್ಟಿ, ಪರ್ವೆàಜ್ ಬೆಳ್ಳಾರೆ, ಡಾ| ಸತೀಶ್ ಕಲ್ಲಿಮಾರ್, ಸುಜಾತಾ ಶಕ್ತಿನಗರ, ದನ್ವಿತ್ ಸುವರ್ಣ ಇದ್ದಾರೆ. ಸಿನೆಮಾದಲ್ಲಿ ಮೂರು ಹಾಡುಗಳಿವೆ. ರಾಜೇಶ್ ಭಟ್ ಬೆದ್ರ, ಗುರು ಬಾಯಾರು, ರಾಕಿಸೋನು ರಾಗ ಸಂಯೋಜಿಸಿದ್ದಾರೆ. ಈ ಸಿನೆಮಾ ಸಂಪೂರ್ಣ ಹಾಸ್ಯ ಮನೋರಂಜನೆ ಹೊಂದಿದೆ ಎಂದು ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.