Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ
ಸಂತಾನೋತ್ಪತ್ತಿ ಔಷಧ, ಶಸ್ತ್ರಚಿಕಿತ್ಸೆ ವಿಭಾಗ ವಿಶ್ವಾಸಾರ್ಹ ಐವಿಎಫ್, ಫರ್ಟಿಲಿಟಿ ಕೇಂದ್ರ
Team Udayavani, May 30, 2024, 6:45 AM IST
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್‌ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐವಿಎಫ್ ಮತ್ತು ಫರ್ಟಿಲಿಟಿ ಫಲವತ್ತತೆ ಕೇಂದ್ರಗಳಲ್ಲಿ ಒಂದು ಎಂಬ ಪ್ರಶಸ್ತಿಯೊಂದಿಗೆ ವಿಶೇಷ ಮನ್ನಣೆ ದೊರೆತಿದೆ.
ಈ ಮನ್ನಣೆಯು ಆಸ್ಪತ್ರೆಯ ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆಗಳು ಮತ್ತು ಆರೋಗ್ಯ ವಿತರಣೆಗೆ ಅದರ ಸಹಾನುಭೂತಿಯ ವಿಧಾನದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿದೆ.
ಮಣಿಪಾಲ್ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ (ಮಾರ್ಕ್), ಸಂತಾನಹೀನ ದಂಪತಿಗೆ ಕಳೆದ 35 ವರ್ಷಗಳ ಸಮರ್ಪಿತ ಸೇವೆಯೊಂದಿಗೆ ಮೇ 27ರಂದು ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿವ್ಯೂನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲಾಗಿದೆ.
ಮಾರ್ಕ್‌ಗೆ 25 ವರ್ಷ
ವಿವಿಧ ಕಾರ್ಯವಿಧಾನಗಳ ಮೂಲಕ 10,000ಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಲಭಗೊಳಿಸುವಲ್ಲಿ ಮಾರ್ಕ್ ಪ್ರಮುಖ ಪಾತ್ರ ವಹಿಸಿದೆ, ಮೊದಲ ಐವಿಎಫ್ ಮಗುವಿಗೆ ಈಗ 25 ವರ್ಷ.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಇನ್‌ಸೈಟ್ಸ್ ಕೇರ್ ಪ್ರಶಸ್ತಿಯು ಆರೋಗ್ಯ ಸೇವಾ ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ಮನ್ನಣೆಯಾಗಿದ್ದು, ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯ ವಿತರಣೆಯಲ್ಲಿ ಸಹಾನುಭೂತಿಯ ಸಂಸ್ಕೃತಿ ಬೆಳೆಸಲು ಪ್ರೇರಣೆಯಾಗಿದೆ.
ತಂಡದ ಸಮರ್ಪಣೆ ಮತ್ತು ವೈದ್ಯರ ಪರಿಣತಿ ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದೆ ಎಂದರು.
ಸಿಒಒ ಸಿ.ಜಿ. ಮುತ್ತಣ್ಣ , ಮಾಹೆ ಭೋದನ ಆಸ್ಪತ್ರೆಗಳ ಸಿಒಒ ಡಾ| ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಹಾಗೂ ಮಾರ್ಕ್ ತಂಡದವರು ಉಪಸ್ಥಿತರಿದ್ದರು.
ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ| ಪ್ರತಾಪ್ ಕುಮಾರ್ ಪ್ರಸ್ತಾವನೆಗೈದು ಐವಿಎಫ್ ಸೇವೆ ಬೆಳೆದುಬಂದ ದಾರಿಯನ್ನು ವಿವರಿಸಿದರು.
ಮಾರ್ಕ್ ನಲ್ಲಿ ಪ್ರಾದ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ಡಾ| ಸತೀಶ್ ಅಡಿಗ ಅವರು ತಮ್ಮ ನುರಿತ ಭ್ರೂಣಶಾಸ್ತ್ರಜ್ಞರ ತಂಡದೊಂದಿಗೆ ಟೆಸ್ಟ್ ಟ್ಯೂಬ್ ಬೇಬಿ ಕಾರ್ಯವಿಧಾನಗಳ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಪ್ರಾಧ್ಯಾಪಕರಾದ ಡಾ| ಪ್ರಶಾಂತ್ ಕೆ. ಅಡಿಗ, ಸಹಪ್ರಾಧ್ಯಾಪಿಕೆ ಡಾ| ಅಂಜಲಿ ಸುನೀಲ್ ಮುಂಡ್ಕೂರ್, ಸಹಪ್ರಾಧ್ಯಾಪಕಿ ಡಾ| ವಿದ್ಯಾಶ್ರೀ ಜಿ. ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.