

Team Udayavani, Sep 18, 2024, 6:20 AM IST
ಕಾಪು: ಮಣಿಪುರ ಗ್ರಾಮದ, ರಹಮಾನಿಯ ಜುಮ್ಮಾ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಸೆ. 15ರಂದು ಎರಡು ಯುವಕರ ಗುಂಪು ಸೇರಿಕೊಂಡು ಶಾಂತಿ ಭಂಗ ಉಂಟಾಗುವ ರೀತಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಗಸ್ತಿನಲ್ಲಿದ್ದ ಪೊಲೀಸರು ಗಲಾಟೆ ನಿಲ್ಲಿಸಲು ಅವರ ಹತ್ತಿರಕ್ಕೆ ಹೋಗುತ್ತಿದ್ದಂತೆ ಎಲ್ಲರೂ ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಅಲ್ಲಿನ ಸಾರ್ವಜನಿಕರಲ್ಲಿ ಪೊಲೀಸರು ವಿಚಾರಿಸಿದ್ದು, ಗಲಾಟೆ ಮಾಡುತ್ತಿದ್ದ ಎರಡೂ ಗುಂಪಿನವರು ಮಣಿಪುರದ ನಿವಾಸಿಗಳೆಂದು ತಿಳಿದು ಕಾಪು ಎಎಸ್‌ಐ ದಯಾನಂದ್ ಅವರು ವಿಚಾರಣೆ ನಡೆಸಿದಾಗ ಒಂದು ಗುಂಪಿನಲ್ಲಿ ಮೊಹಮ್ಮದ್ ಇಝುದ್ದೀನ್, ಮೊಹಮ್ಮದ್ ಸಿರಾಜ್, ಇಮ್ರಾನ್ ಖಾನ್, ಆದಂ, ಸಫ್ವಾನ್ ಹಾಗೂ ಆರೀಶ್ ಅವರುಗಳಿದ್ದುದು ಗೊತ್ತಾಗಿತ್ತು.
ಅದೇ ರೀತಿಯಾಗಿ ಮತ್ತೊಂದು ಗುಂಪಿನಲ್ಲಿ ರಮೀಜ್, ರಿಯಾಝ್, ಸಲೀಂ, ಅನ್ವರ್, ಶಮೀಲ್ ಹಾಗೂ ಮಾಮು ಎನ್ನುವವರಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿತ್ತು. ಆದರೆಂತೆ ಈ ಎರಡೂ ತಂಡದವರು ಸಾರ್ವಜನಿಕವಾಗಿ ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂದು ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Udupi;ಹೋಟೆಲ್ ಮಥುರಾ ಗೋಕುಲ್: ಫೆ19 ರಿಂದ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಮತ್ತು ಕರಕುಶಲ ಮೇಳ
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ
Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್ ಸವಾರನ ಮೂಳೆ ಮುರಿತ
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್
UV Fusion: ನಮ್ಮೂರು ನಮ್ಮ ಹೆಮ್ಮೆ
You seem to have an Ad Blocker on.
To continue reading, please turn it off or whitelist Udayavani.