Parliament: ಹೊಗೆ ಬಾಂಬ್‌ಗ ವಿಶೇಷ ಶೂ ಮಾಡಿಸಿದ್ದ ಮನೋರಂಜನ್‌!

 ವರ್ಷದ ಹಿಂದೆಯೇ ಲಕ್ನೋದ ಚಮ್ಮಾರನಿಂದ ಬೂಟಿನೊಳಗೆ ರಂಧ್ರ ಕೊರೆಸಿದ್ದ-  ಕುಕೃತ್ಯಕ್ಕೆಂದೇ ಎರಡು ಜತೆ ಬೂಟು ಸಿದ್ಧಪಡಿಸಿಕೊಂಡಿದ್ದ

Team Udayavani, Dec 15, 2023, 11:58 PM IST

manoranjan single

ಹೊಸದಿಲ್ಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿಗಳ ಮಾಸ್ಟರ್‌ ಪ್ಲ್ರಾನ್‌ ಕುರಿತಾದ ಒಂದೊಂದೇ ಸ್ಫೋಟಕ ಸತ್ಯಗಳು ಹೊರಬರಲಾರಂಭಿಸಿವೆ.

ಸದನದೊಳಗೆ ಕ್ಯಾನಿಸ್ಟರ್‌ ಮೂಲಕ ಹೊಗೆ ಬಾಂಬ್‌ ಸಿಡಿಸುವ ಯೋಜನೆ ಮೈಸೂರಿನ ಮನೋ ರಂಜನ್‌ನದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಸತ್ತಿನಲ್ಲಿ ಕೋಲಾಹಲ ಉಂಟುಮಾಡಲೆಂದೇ ಆರೋಪಿಗಳಾದ ಮನೋರಂಜನ್‌ ಮತ್ತು ಸಾಗರ್‌ ಶರ್ಮಾ ತಮಗೆ ಬೇಕಾದಂತಹ “ವಿಶೇಷ ಶೂ”ಗಳನ್ನು ಮಾಡಿಸಿಕೊಂಡಿದ್ದರು.

ಇವರು ವರ್ಷದ ಹಿಂದೆಯೇ ಲಕ್ನೋದ ಚಮ್ಮಾರನೊಬ್ಬನನ್ನು ಸಂಪರ್ಕಿಸಿ, ಎರಡು ಜೋಡಿ ಶೂಗಳ ಅಡಿಭಾಗದಲ್ಲಿ 2.5 ಇಂಚು ಆಳದ ಕುಳಿಗಳನ್ನು ಕೆತ್ತಿಸಿದ್ದರು.

ಫೋನ್‌ ಸುಟ್ಟ ಸೂತ್ರಧಾರ

ಘಟನೆ ನಡೆದ ದಿನ ರಾತ್ರಿ 11.30ರ ವೇಳೆಗೆ ಆರೋಪಿ ಲಲಿತ್‌ ಝಾ ಬಸ್‌ನಲ್ಲಿ ರಾಜಸ್ಥಾನದ ಕುಚಮಾನ್‌ ನಗರ ತಲುಪಿದ್ದ. ಅಲ್ಲಿ ತನ್ನ ಗೆಳೆಯ ಮಹೇಶ್‌ ಮತ್ತು ಆತನ ಸಂಬಂಧಿ ಕೈಲಾಶ್‌ ಸಹಾಯ ದಿಂದ ಢಾಬಾದಲ್ಲಿ ಉಳಿದುಕೊಂಡಿದ್ದ. ಗುರುವಾರ ಬೆಳಗ್ಗೆ ತಾನು ತಂದಿದ್ದ ಎಲ್ಲ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ಸುಟ್ಟು ಹಾಕಿದ್ದ. ಅನಂತರ ದಿಲ್ಲಿಗೆ ವಾಪಸಾಗಿ, ರಾತ್ರಿ ವೇಳೆಗೆ ಕರ್ತವ್ಯಪಥ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದ. ಮೊಬೈಲ್‌ಗ‌ಳನ್ನು ಸುಟ್ಟಿರುವ ಕಾರಣ ಈತ ಸಾಕ್ಷ್ಯ ನಾಶದ ಆರೋಪವನ್ನೂ ಎದುರಿಸಲಿದ್ದಾನೆ.

ಹಿಂದೆಯೂ 40 ಬಾರಿ ಭದ್ರತ ವೈಫ‌ಲ್ಯ: ಅಮಿತ್‌ ಶಾ

“ಸಂಸತ್ತಿನಲ್ಲಿ ಈ ಹಿಂದೆ ಸುಮಾರು 40 ಬಾರಿ ಭದ್ರತ ಉಲ್ಲಂಘನೆ ಗಳಾಗಿವೆ. ಸದನದೊಳಗೆ ಗನ್‌ ತಂದ ಘಟನೆಗಳೂ ನಡೆದಿವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಭದ್ರತ ವೈಫ‌ಲ್ಯ ವಿಚಾರ

ವನ್ನೆತ್ತಿಕೊಂಡು ವಿಪಕ್ಷಗಳು ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿರು ವಂತೆಯೇ ಶಾ ಈ ಹೇಳಿಕೆ ನೀಡಿದ್ದಾರೆ. ಕಾಗದ ಎಸೆದದ್ದು, ಪಿಸ್ತೂಲ್‌ ತಂದದ್ದು, ಘೋಷಣೆ ಕೂಗಿದ್ದು, ಸಂಸದರ ಆಸನದತ್ತ ಜಿಗಿದದ್ದು ಸೇರಿದಂತೆ ಈವರೆಗೆ ಸರಿಸುಮಾರು 40ರಷ್ಟು ಇಂತಹ ಘಟನೆಗಳು ನಡೆದಿವೆ. ಆಯಾ ಸ್ಪೀಕರ್‌ಗಳು ಅದಕ್ಕೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶಾ ವಿವರಿಸಿದ್ದಾರೆ.

ಎಡ ಕಾಲಿಗೆ ಧರಿಸುವ ಶೂಗಳ ಸೋಲ್‌ಗ‌ಳಲ್ಲಿ ಕೆತ್ತಿಸಲಾದ ಕುಳಿಯ ಒಳಗೆ ಗ್ಯಾಸ್‌ ಕ್ಯಾನಿಸ್ಟರ್‌ಗಳನ್ನು ಇರಿಸಿಕೊಂಡು ಸದನದೊಳಕ್ಕೆ ಬಂದಿದ್ದರು. ನ್ಪೋರ್ಟ್ಸ್ ಶೂಗಳ ಒಳಗೆ ಗ್ಯಾಸ್‌ ಕ್ಯಾನಿಸ್ಟರ್‌ಗಳಿರುವುದು ಸಹಜವಾಗಿಯೇ ಯಾರ ಗಮನಕ್ಕೂ ಬಂದಿಲ್ಲ. ಅಲ್ಲದೆ ಭದ್ರತ ತಪಾಸಣೆ ವೇಳೆ ಬೂಟುಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಆರೋಪಿಗಳು ದೃಢಪಡಿಸಿಕೊಂಡೇ ಈ ಸಂಚು ಹೂಡಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ. ಸದ್ಯದಲ್ಲೇ ಆರೋಪಿಗಳನ್ನು ಲಕ್ನೋಗೆ ಕರೆದೊಯ್ದು, ಶೂಗಳನ್ನು ಸಿದ್ಧಪಡಿಸಿಕೊಟ್ಟ ಚಮ್ಮಾರನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

7 ದಿನ ವಶಕ್ಕೆ
ಈ ನಡುವೆ ಗುರುವಾರ ರಾತ್ರಿ ಶರಣಾದ ಪ್ರಕರಣದ ಸೂತ್ರಧಾರ ಲಲಿತ್‌ ಝಾನನ್ನು ಶುಕ್ರವಾರ ಪೊಲೀಸರು ದಿಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ವಿಚಾರಣೆಗೆ ಒಳಪಡಿಸಿ ಪ್ರಕರಣದ ಇಡೀ ಸಂಚನ್ನು ಬಯಲು ಮಾಡಲು ಆತನನ್ನು 15 ದಿನ ವಶಕ್ಕೆ ನೀಡಿ ಎಂದು ಪೊಲೀಸರು ಅರಿಕೆ ಮಾಡಿಕೊಂಡಿದ್ದು, ನ್ಯಾಯಾಲಯವು ಆರೋಪಿಯನ್ನು 7 ದಿನಗಳ ಪೊಲೀಸ್‌ ವಶಕ್ಕೊಪ್ಪಿಸಿ ಆದೇಶ ನೀಡಿದೆ.

ಮನೋರಂಜನ್‌ ಕೊಠಡಿಗೆ ಬೀಗ

ಮೈಸೂರಿನ ಮನೋರಂಜನ್‌ ಮನೆಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ಶುಕ್ರವಾರವೂ ಭೇಟಿ ನೀಡಿ ಆತನ ಕೋಣೆಗೆ ಬೀಗಮುದ್ರೆ ಹಾಕಿದ್ದಾರೆ. ಕೊಠಡಿ ಯಲ್ಲಿ ಸಾಕ್ಷ್ಯಾಧಾರ ಕಲೆ ಹಾಕಿದ್ದು, ಬಳಿಕ ಕೋಣೆಯನ್ನು ಸೀಜ್‌ ಮಾಡಿದ್ದಾರೆ. ಮತ್ತೂಮ್ಮೆ ಬಂದು ಪರಿಶೀಲನೆ ನಡೆಸುವವರೆಗೂ ಕೊಠಡಿಯ ಬಾಗಿಲು ತೆಗೆಯದಂತೆ ಕುಟುಂಬ ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಆತನ ಹಣದ ಮೂಲದ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.