ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ
ಮಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ
Team Udayavani, May 25, 2024, 12:15 AM IST
ಮಂಗಳೂರು: ಸಮುದ್ರ ಮಟ್ಟದಿಂದ 200ರಿಂದ 1000 ಮೀ. ಕೆಳ ಭಾಗದ ಮೆಸೊಪೆಲಾಜಿಕ್ ವಲಯದಲ್ಲಿರುವ ಆಹಾರವಾಗಿ ಬಳಕೆಯಾಗದ ಮೀನುಗಳನ್ನು ಔಷಧೀಯ ಅಥವಾ ಸೌಂದರ್ಯ ವರ್ಧಕಗಳಲ್ಲಿ ಬಳಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಯೂರೋಪ್, ಅಮೆರಿಕ, ಜಪಾನ್‌ನಂತಹ ದೇಶಗಳಲ್ಲಿ ಈ ಮೀನುಗಳಿಂದಲೇ ಔಷಧಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಆಹಾರವಾಗಿ ಬಳಕೆಯಾಗದ ಮೀನುಗಳ ಜೀವಕಣಗಳ ಇನ್ನಷ್ಟು ಸಂಶೋಧನೆಯ ಮೂಲಕ ಭಾರತದಲ್ಲಿ ಈ ಮೀನುಗಳ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಬಹುದಾಗಿದೆ ಎಂದು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಮತ್ತು ಐಸಿಎಆರ್‌ನ ಮಾಜಿ ಉಪನಿರ್ದೇಶಕಿ ಡಾ|ಬಿ. ಮೀನ ಕುಮಾರಿ ಹೇಳಿದರು.
“ಭಾರತದ ಕಡಲಾಳದ ಮೆಸೊಪೆಲಾಜಿಕ್ ಮೀನುಗಳ ಸುಸ್ಥಿರ ಕೊಯ್ಲು ಮತ್ತು ಬಳಕೆಯ ಸಾಧ್ಯತೆಗಳ ಅನ್ವೇಷಣೆ’ ಕುರಿತು ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಮುದ್ರ ವ್ಯಾಪ್ತಿಯಲ್ಲಿ 172 ಮಿಲಿಯನ್ ಟನ್ ಆಹಾರವಾಗಿ ಉಪಯೋಗಿಸಲಾಗದ ಮೀನುಗಳಿವೆ. ಮೇಣ ಅಥವಾ ಜೆಲ್ಲಿ ರೂಪದಲ್ಲಿರುವ ಈ ಮೀನುಗಳನ್ನು ಆಹಾರವಾಗಿ ಬಳಸುವುದಿಲ್ಲ. ಮೀನುಗಾರರ ಬಲೆಗೆ ಬೀಳುವ ಈ ರೀತಿಯ ಸಣ್ಣ ಮೀನುಗಳನ್ನು ಎಸೆಯಲಾಗುತ್ತದೆ. ಆದರೆ, ಪ್ರಸಕ್ತ ಫಿಶ್ ಮೀಲ್‌ಗಳಲ್ಲಿ ಇದನ್ನು ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ. ಈ ಮೀನುಗಳ ಸಂಗ್ರಹಕ್ಕೆ ಸೂಕ್ತ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ಸಮಗ್ರ ಸಂಶೋಧನೆಯಿಂದ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು.
ಐಸಿಎಆರ್-ಸಿಎಂಎಫ್ಆರ್‌ಐನ ನಿರ್ದೇಶಕ ಡಾ| ಎ. ಗೋಪಾಲಕೃಷ್ಣನ್ ಅವರು ಮಾತನಾಡಿ, ವಿಶ್ವದಾದ್ಯಂತ ಸಮುದ್ರದಾಳದಲ್ಲಿ ಆಹಾರವಾಗಿ ಬಳಕೆಯಾಗದ ಮತ್ಸé ಸಂಪತ್ತು ಸುಮಾರು 12,000 ಮಿಲಿಯನ್ ಮೆಟ್ರಿಕ್ ಟನ್ ಇರುವುದಾಗಿ ಅಂದಾಜಿಸಲಾಗಿದೆ. ಭಾರತೀಯ ಸಮುದ್ರದಲ್ಲಿಯೂ 160 ತಳಿಗಳೊಂದಿಗೆ 365 ಮಿಲಿಯನ್ ಮೆಟ್ರಿಕ್ ಟನ್ ಇಂತಹ ಮೀನು ಇರುವುದಾಗಿ ಅಂದಾಜಿಸಲಾಗಿದೆ ಎಂದರು.
ಐಸಿಎಆರ್‌ನ ಸಹಾಯಕ ಮಹಾ ನಿರ್ದೇಶಕ ಡಾ| ಸುಭದೀಪ್ ಘೋಷ್, ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕಲ್ಲಾರ್, ಡಾ| ಶೋಭಾ ಜೆ., ಡಾ| ಪ್ರವೀಣ್ ಪುತ್ರನ್, ಸಾಧು ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.ಡಾ| ಸುಜಾತಾ ಥಾಮಸ್ ಸ್ವಾಗತಿಸಿದರು. ಡಾ| ರಾಜೇಶ್ ವಂದಿಸಿದರು.
ಕರಾವಳಿಯಲ್ಲಿ ಅನ್ವೇಷಣೆಯ “ಪೈಲೆಟ್’ ಯೋಜನೆ
ಕರಾವಳಿಯ ಸಮುದ್ರವು ಈಗಾಗಲೇ ಅತಿಯಾದ ಮೀನುಗಾರಿಕೆಗೆ ಒಳಗಾಗಿದೆ ಎಂಬ ಅಪವಾದ ಇರುವ ಸಮಯದಲ್ಲಿ ಸುಮಾರು 200 ಮೀಟರ್ ತಳಭಾಗದಲ್ಲಿರುವ ಆಹಾರವಾಗಿ ಉಪಯೋಗಿಸಲಾಗದ ಮೀನುಗಳ ಉಪ ಉತ್ಪನ್ನಗಳತ್ತ ಗಮನ ಹರಿಸಬೇಕಾಗಿದೆ. ಈ ವೇಳೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಆಗಬಹುದಾದ ಪರಿಣಾಮಗಳನ್ನು ಅನ್ವೇಷಿಸಿಕೊಂಡು ಈ ಮೀನುಗಳ ಬಳಕೆಯ ಕುರಿತಂತೆ ಸಿಎಂಎಫ್ಐಆರ್ ಮೂಲಕ ಪೈಲಟ್ ಯೋಜನೆ ಸದ್ಯ ಜಾರಿಯಲ್ಲಿದೆ ಎಂದು ಡಾ|ಎ.ಗೋಪಾಲಕೃಷ್ಣನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.