ಪ್ಲಾಸ್ಟಿಕ್‌ ಬಳಕೆ ವಿರುದ್ದ ಸಮರ-ಪರಿಸರ ಪ್ರೇಮ

ಪ್ಲಾಸ್ಟಿಕ್‌ನಲ್ಲಿ ಮಣ್ಣು ತುಂಬಿ ಸೊಪ್ಪು, ತರಕಾರಿ ಬೆಳೆಸಿರುವ ಸಾವಯವ ಕೃಷಿಕ ವೀರೇಶ ನೇಗಲಿ

Team Udayavani, Jun 5, 2022, 3:16 PM IST

10

ಗದಗ: ಪರಿಸರದ ತುಂಬೆಲ್ಲ ಇಂದು ಪ್ಲಾಸ್ಟಿಕ್‌ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್‌ ಬಳಕೆ ಪರಿಣಾಮ ಮಾನವನ ಜೊತೆಗೆ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ, ಪರಿಸರಕ್ಕೂ ಅಪಾಯವನ್ನುಂಟು ಮಾಡುತ್ತಿದೆ.

ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿ ಣಾಮ ತಡೆಗಟ್ಟಲು ಸಾವಯವ ಕೃಷಿಕರೊಬ್ಬರು ಕಿರಾಣಿ, ಜನರಲ್‌ ಸ್ಟೋರ್ಸ್‌ ಹಾಗೂ ಪಾನ್‌ ಅಂಗಡಿಗಳು ಬಿಸಾಡುವ ಪಾನ್‌ ಮಸಾಲಾ, ಗುಟ್ಕಾ ಪ್ಲಾಸ್ಟಿಕ್‌ ಪೊಟ್ಟಣಗಳು ಹಾಗೂ ನಿರುಪಯುಕ್ತ ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಸಂಗ್ರಹಿಸಿಕೊಂಡು ಮರು ಬಳಕೆ ಮಾಡಿ ಸೊಪ್ಪು, ಸಸಿಗಳನ್ನು ನೆಟ್ಟು ಕೈತೋಟ ನಿರ್ಮಿಸಿಕೊಂಡಿದ್ದಾರೆ.

ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ವೀರೇಶ ಶಂಕರಪ್ಪ ನೇಗಲಿ ಅವರು ಬಿಎ ಪದವೀಧರರಾಗಿದ್ದು, ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾದ ಕಾರಣ ಬೇಸರಗೊಂಡಿದ್ದ ವೀರೇಶ ಅವರು ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಮಣ್ಣು ತುಂಬಿ ತರಕಾರಿ ಹಾಗೂ ವಿವಿಧ ಗಿಡಗಳ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ದರ್ಗಾ, ಬೀರಲಿಂಗೇಶ್ವರ ದೇವಸ್ಥಾನ, ಪಶು ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಹಲವೆಡೆ ಖಾಲಿಯಿದ್ದ ಜಾಗದಲ್ಲಿ ತೇಗ, ಸಾಗವಾಣಿ, ಪೇರಲ, ಹೆಬ್ಬೇವು, ಬೇವು, ನೆರಳೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಸಹಕಾರಿ ಸಂಘದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಪೋಲಾಗುತ್ತಿದ್ದ ನೀರಿನ ಹರಿವಿನ ಪಕ್ಕದಲ್ಲೂ ಗಿಡ ನೆಟ್ಟು ಪರಿಸರ ಪ್ರೇಮ ಸಾರುತ್ತಿದ್ದಾರೆ. ಅಲ್ಲದೇ, ಪರಿಸರ ಪ್ರೇಮಿಗಳ ಸಂಘವನ್ನು ಕಟ್ಟಿಕೊಂಡಿರುವ ವೀರೇಶ ಅವರು ಪ್ರತಿಯೊಬ್ಬರಿಗೂ ಗಿಡ ಕೊಟ್ಟು ಪೋಷಿಸುವ ಜವಾಬ್ದಾರಿ ನೀಡಿದ್ದಾರೆ. ಜೊತೆಗೆ ಜನ್ಮದಿನ ಹಾಗೂ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಸಿಗಳನ್ನು ಉಡುಗೊರೆಯಾಗಿ ಕೊಟ್ಟು ಪೋಷಿಸುವಂತೆ ಸಲಹೆ ನೀಡುತ್ತ ಬಂದಿದ್ದಾರೆ.

ಸಾವಯವ ಕೃಷಿಕರೂ ಆಗಿರುವ ವೀರೇಶ ಅವರು ಆರೂವರೆ ಎಕರೆ ಒಣಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. 5 ಜವಾರಿ ಆಕಳು, 2 ಜರ್ಸಿ, 1ಕರು ಸಾಕಿರುವ ಅವರು, ಅವುಗಳ ಸಗಣಿ, ಗೋಮೂತ್ರ ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಜೋಳ, ಹೆಸರು, ಮಡಿಕೆ, ಅಲಸಂದಿ, ತೊಗರಿ, ಹಿಂಗಾರಿನಲ್ಲಿ ಉಳ್ಳಾಗಡ್ಡಿ, ಕಡಲೆ, ಕುಸುಬೆ ಬೆಳೆಯುತ್ತಿದಾರೆ. ಕಳೆದ ಮುಂಗಾರಿನಲ್ಲಿ 60 ಗುಂಟೆಯಲ್ಲಿ ಬೆಳೆದಿದ್ದ ಶೇಂಗಾ 65 ಚೀಲ ಇಳುವರಿ ಬಂದಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಶಾಲಾ-ಕಾಲೇಜು ಹಂತದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನನಗೆ, ಗ್ರಾಮದಲ್ಲಿ ಒಂದು ದಿನ ಬೀಸಿದ ಬಿರುಗಾಳಿ ಮತ್ತಷ್ಟು ಪರಿಸರದ ಬಗ್ಗೆ ಕಾಳಜಿ ಹೊಂದಲು ಕಾರಣವಾಯಿತು. ಬಿರುಗಾಳಿಯಿಂದ ಪ್ಲಾಸ್ಟಿಕ್‌ ತ್ಯಾಜ್ಯಗಳೆಲ್ಲವೂ ಮನೆಯೊಳಗೆ ಹಾಗೂ ರಸ್ತೆ ಸಂಚಾರಕ್ಕೆ ಅಡೆತಡೆ ಉಟು ಮಾಡಿದ್ದವು. ಇದರಿಂದದ ಎಚ್ಚೆತ್ತುಕೊಂಡು, ಪ್ಲಾಸ್ಟಿಕ್‌ ಸಂಗ್ರಹಿಸಿ ಮಣ್ಣು ತುಂಬಿ, ಗಿಡ ನೆಟ್ಟು ಮರು ಬಳಕೆ ಮಾಡಲು ಪ್ರಯತ್ನಿಸಿದೆ. ­ –ವೀರೇಶ ನೇಗಲಿ, ಸಾವಯವ ಕೃಷಿಕ, ಪರಿಸರ ಪ್ರೇಮಿ

ಅಂಗನವಾಡಿ, ಗ್ರಾಪಂ ಕಟ್ಟಡದ ಪಕ್ಕದಲ್ಲಿ ಸಾರ್ವಜನಿಕರಿಂದ ಮೂತ್ರ ವಿಸರ್ಜನೆ ನಿರಾತಂಕವಾಗಿ ನಡೆಯುತ್ತಿತ್ತು. ಇದನ್ನರಿತ ವೀರೇಶ ಅವರು ತೇಗ, ಸಾಗವಾಣಿ, ಹೆಬ್ಬೇವು ಗಿಡಗಳನ್ನು ಬೆಳೆಸಿ ವನವನ್ನಾಗಿಸಿದರು. ಇದರಿಂದ ಮೂತ್ರ ವಿಸರ್ಜನೆ ಬಂದ್‌ ಆಗಿದೆ. ಪರಿಸರದ ಜಾಗೃತಿ ಹೆಚ್ಚಾಗಿದೆ. ­ಪ್ರಕಾಶ ಕುಲಕರ್ಣಿ, ಯಲ್ಲಪ್ಪ ಲಕ್ಕುಂಡಿ, ಕೋಟುಮಚಗಿ ಗ್ರಾಮಸ್ಥರು  

-ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.