ಶ್ರೀ ಮಸಣೀಕಮ್ಮನವರ ಬ್ರಹ್ಮ ರಥೋತ್ಸವ : ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸಾಗರ


Team Udayavani, Mar 10, 2022, 3:57 PM IST

ಶ್ರೀ ಮಸಣೀಕಮ್ಮನವರ ಬ್ರಹ್ಮ ರಥೋತ್ಸವ : ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸಾಗರ

ಪಿರಿಯಾಪಟ್ಟಣ: ಚಂಗಾಳ್ವರ ನಾಡಿನ ಅಧಿದೇವತೆ, ಪಿರಿಯಾಪಟ್ಟಣದ ಗ್ರಾಮದೇವತೆ ಶ್ರೀ ಮಸಣೀಕಮ್ಮನವರ (ಪಿರಿಯಾಪಟ್ಟಣದಮ್ಮ) ಜಾತ್ರಾ ಮಹೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತಧಿಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಕಳೆದ 15 ದಿನಗಳ ಹಿಂದೆಯೇ ದೇವಾಲಯದ ವಿಧಿವಿಧಾನದಂತೆ ಮುಹೂರ್ತ ಕಾರ್ಯ ನೆರವೇರಿಸಿದ ನಂತರ ಪ್ರತಿದಿನ ದೇವಾಲಯದಲ್ಲಿ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ ಕಳೆದ ಸೋಮವಾರದಿಂದ ಬೆಳಿಗಿನ ಜಾವ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಕೈಂಕರ್ಯ ಹಾಗೂ ವಿಶೇಷ ಪೂಜೆ ಹೋಮ ಹವನಾದಿಗಳು ನಡೆದಿದ್ದು. ಗುರುವಾರ ಬೆಳಗ್ಗೆ 10.30ರಿಂದ 12.15 ಗಂಟೆಯೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ಮಸಣೀಕಮ್ಮನವರ ಬ್ರಹ್ಮ ರಥೋತ್ಸವವನ್ನು ಭಕ್ತ ಸಾಗರದ ನಡುವೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೂಗಳಿಂದ ಅಂಲಕೃತಗೊಂಡ ರಥದಲ್ಲಿ ಮಸಣೀಕಮ್ಮ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮುಖಾಂತರ ಮೆರವಣಿಗೆ ನಡೆಸಲಾಯಿತು. ನಂತರ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಸಾವಿರಾರು ಭಕ್ತರು ಭಕ್ತಿಪರವಶತೆಯಿಂದ ತೇರನ್ನು ಎಳೆದು ಪುನೀತರಾದರು.

ಹರಿದು ಬಂದ ಭಕ್ತಸಾಗರ:
ಪಿರಿಯಾಪಟ್ಟಣ ತಾಲೂಕಿನ ಅಧಿದೇವತೆಯಾದ ಶ್ರೀ (ಮಸಣೀಕಮ್ಮ) ದೇವರ ರಥೋತ್ಸವಕ್ಕೆ ಹೊರ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸರದಿ ಸಾಲಿನಿಂದ ದೇವಾಲಯದ ಅವರಣ ಜನಜಂಗುಳಿಯಿಂದ ಕೂಡಿತ್ತು.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಆಡಳಿತ ಪಕ್ಷ BJPಗೆ ಮತ್ತೆ ಮಣೆ: 1985ರ ಬಳಿಕ ಇದೇ ಮೊದಲ ಬಾರಿ ಮನ್ನಣೆ

ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ:
ಪಟ್ಟಣದ ಬಿ.ಎಂ.ರಸ್ತೆಯ ಉಪ್ಪಾರಗೇರಿ ಗೇಟ್ ನಿಂದ ಹಿಡಿದು ಪಟ್ಟಣದ ಬೆಟ್ಟದಪುರ ವೃತ್ತದ ವರೆಗೆ ಪಟ್ಟಣದ ಉಪ್ಪಾರ ಬೀದಿ, ಒಳಕೋಟೆ, ಕರಿಬಸಪ್ಪ ಬಡಾವಣೆ, ದೇವೇಗೌಡನ ಕೊಪ್ಪಲಿನ ಉಪ್ಪಾರ ಸಮಾಜ, ಮಸಣಿಕೇರಿ, ಕೆ.ವೆಂಕಟೇಶ್ ಅಭಿಮಾನಿ ಬಳಗ, ಅಪ್ಪು ಅಭಿಮಾನಿ ಬಳಗ,ಆಟೋ ಚಾಲಕರ ಸಂಘ, ಪಿರಿಯಾಪಟ್ಟಣ ತರಕಾರಿ ಮಾರಾಟಗಾರರ ಸಂಘ, ಜೈನ್ ಮತ್ತು ವೀರಶೈವ ಸಮಾಜದ ಬಂದುಗಳು ಹಾಗೂ ವಿವಿಧ ಭಾಗಗಳಿಂದ ಜಾತ್ರೆಗೆಂದು ಬಂದಿದ್ದ ಅಮ್ಮನವರ ಭಕ್ತರು ಸೇರಿದಂತೆ ನೂರಾರು ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಜಾತ್ರೆಗೆ ಬಂದಂತಹ ಭಕ್ತ ಸಮೂಹಕ್ಕೆ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಬಾತು, ಮೊಸರನ್ನ, ಪುಳಿಯೋಗರೆ, ಮಜ್ಜಿಗೆ, ಪಾನಕ, ಕಲ್ಲಂಗಡಿ ಹಣ್ಣು ಮೈಸೂರು ಪಾಕ್, ಜಿಲೇಬಿ ಮತ್ತು ತಿಂಡಿ ವಿತರಿಸಿದರು. ಬೆಟ್ಟದಪುರ ಸರ್ಕಲ್ ಯುವಕರ ಸಂಘ ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಹಲವೆಡೆ ಪಾನಕ ಮಜ್ಜಿಗೆ ವಿತರಣೆ ಮಾಡಿದರಲ್ಲದೆ ಹಲವೆಡೆ ಜ್ಯೂಸ್ ಮತ್ತು ಐಸ್ಕ್ರೀಂಗಳನ್ನು ವಿತರಣೆ ಮಾಡುವ ಮೂಲಕ ದೇವರಿಗೆ ತಮ್ಮ ಭಕ್ತಿ ಮತ್ತು ಹರಕೆ ಸಮರ್ಪಿಸಿದರು.

ಸಂಚಾರ ನಿಯಂತ್ರಸಿಸಲು ಬಿಗಿ ಬಂದುಬಸ್ತ್:
ಜಾತ್ರಾ ಮಹೋತ್ಸವಸ ಅಂಗವಾಗಿ ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದ ಕಾರಣ ದೇವಾಲಯದ ಆವರಣ, ಸಂತೆಮಾಳ ಹಾಗೂ ಬಿ.ಎಂ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮದ್ಯಾಹ್ನ ರಥ ಬಿ.ಎಂ.ರಸ್ತೆಗೆ ಬಂದ ಕೂಡಲೇ ಮೈಸೂರು-ಮಡಿಕೇರಿ ಮುಖ್ಯರಸ್ತೆಯಲ್ಲಿ ಸಾಗರದ ರೀತಿಯಲ್ಲಿ ಜನಸಂದಣೆ ತುಂಬಿಹೋಯಿತು. ರಥವನ್ನು ಬಿ.ಎಂ.ರಸ್ತೆಯ ಬದಿಯಲ್ಲಿಯೇ ನಿಲುಗಡೆ ಮಾಡಿದ್ದರ ಪರಿಣಾಮ ಬಿ.ಎಂ.ರಸ್ತೆ ಭಾಗಶಃ ಬಂದ್ ಆಗಿತ್ತಾದರೂ. ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಕೈಗೊಂಡು ಪಾದಯಾತ್ರಿಗಳು, ವಾಹನ ಚಾಲಕರು ಸಂಚರಿಸಲು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅನುವು ಮಾಡಿಕೊಟ್ಟರು.

ಅಮ್ಮನವರ ಉತ್ಸವ ಹಾಗೂ ಮೆರವಣಿಗೆ:
ಶ್ರೀ ಮಸಣೀಕಮ್ಮನವರ ಉತ್ಸವವು ಗುರುವಾರ ಸಂಜೆಯಿಂದ ಪಟ್ಟಣದಲ್ಲಿ ಹಾಗೂ ಮಾ.11ರ ಶುಕ್ರವಾರರಂದು ಪಟ್ಟಣದ ಒಳಕೋಟೆ, ಕರಿಬಸಪ್ಪ ಬಡಾವಣೆ, ಪೇಟೆಬೀದಿ, ಸಣ್ಣಯ್ಯನಬೀದಿ, ಬಿ.ಎಂ.ರಸ್ತೆ, ದೇವೇಗೌಡನ ಕೊಪ್ಪಲು, ಉಪ್ಪಾರಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿ ಮಾ.12 ರ ಶನಿವಾರರಂದು ರಾತ್ರಿ 8 ಗಂಟೆಗೆ ಪಟ್ಟಣದ ಚಿಕ್ಕಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ.

ಟಾಪ್ ನ್ಯೂಸ್

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.