ಸಿಂಗಾಪುರದಲ್ಲಿ ಮಾಸ್ಕ್ ವಿತರಣಾ ಯಂತ್ರ
Team Udayavani, May 14, 2020, 7:00 PM IST
ಮಣಿಪಾಲ: ತಂತ್ರಜ್ಞಾನ ನಿತ್ಯ ಬಳಕೆಗೆ ಅನುಕೂಲವಾಗುವಂತಿರಬೇಕು. ಯಾವ ಕಾಲಕ್ಕೆ ತನ್ನ ಅಗತ್ಯವಿದೆ, ಆ ಸಮಯದಲ್ಲೇ ಬಿಡುಗಡೆಯಾದರೆ ಮಾತ್ರ ಆ ತಂತ್ರಜ್ಞಾನವೂ ಫಲಪ್ರದವಾಗುತ್ತದೆ. ತಾಂತ್ರಿಕ ನೆರವು ಸಿಗದೆ ಕೋವಿಡ್ ಸಮಯದಲ್ಲಿ ಎಲ್ಲ ದೇಶಗಳು ಬಾಧಿಸುವಂತೆ ಮಾಡಿದ್ದು ಸುಳ್ಳಲ್ಲ. ಇಂತ ತುರ್ತು ಸಂದರ್ಭದಲ್ಲಿ ಸಿಂಗಾಪುರದ ತಂತ್ರಜ್ಞರು ಮಾಸ್ಕ್ ವಿತರಣಾ ಯಂತ್ರವನ್ನು ಅವಿಷ್ಕರಿಸಿ ನಗರದೆಲ್ಲೆಡೆ ಸ್ಥಾಪಿಸಿ ಕೊರೊನಾ ವಿರುದ್ಧದ ಹೊರಾಟದಲ್ಲಿ ಒಂದು ಹೆಜ್ಜೆ ಮುಂದೆ ಸಾಗಿದೆ.
ಮಾಸ್ಕ್ ವಿತರಣೆ ಯಂತ್ರ ಹೇಗಿದೆ?
ಎಟಿಎಂ ರೀತಿಯೇ ಕಾಣುವ ಮಿಶಿನ್ ಒಳಗಡೆ ಮಾಸ್ಕ್ ಗಳನ್ನು ಪೇರಿಸಿಡಲಾಗಿದೆ. ಹಣ ಹಾಕಿದ ಪ್ರಸ್ ಮಾಡಿದ ಕೂಡಲೇ ಮಾಸ್ಕ್ ಕೈಗೆ ಸಿಗುತ್ತದೆ. ಆರಾಮಾಗಿರಿ ಭಯಬೇಡ ಎನ್ನುವುದು ಈ ಮಿಶಿನ್‌ನಲ್ಲಿರುವ ಘೋಷವಾಗಿದೆ.
ಮಾಸ್ಕ್ ಧರಿಸುವುದು ಕಡ್ಡಾಯ
ಸಿಂಗಪುರವು ಲಾಕ್‌ಡೌನ್ ಕ್ರಮಗಳನ್ನು ತೆಗೆದುಹಾಕಲು ಸಜ್ಜಾದಾಗ ಜೂನ್ 1 ರ ವೇಳೆಗೆ ವ್ಯಾಪಾರ ಜಿಲ್ಲೆಯ ಸುತ್ತಲಿನ ಫ್ರೇಸರ್ಷ್ ಪ್ರಾಪರ್ಟಿಯ ಮಾಲ್‌ಗಳು ಮತ್ತು ವಿವಿಧ ಕೇಂದ್ರಗಳಲ್ಲಿ ಮೊದಲಾಗಿ 20 ಯಂತ್ರಗಳನ್ನು ನಿಯೋಜಿಸಲಾಗಿತ್ತು.
ಸಿಂಗಾಪುರದಲ್ಲಿ ಎಪ್ರಿಲ್‌ನಲ್ಲೇ ಮಾಸ್ಕ್ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ ಸುಮರು 10 ದಶಲಕ್ಷಕ್ಕಿಂತಲೂ ಹೆಚ್ಚಿಸಲು ಸುನ್ನಿಂಗ್‌ಡೇಲ್ ಟೆಕ್ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ. ಮಾಸ್ಕ್ ಗಳ ಅಪಾರ ದಾಸ್ತಾನು ಇಟ್ಟುಕೊಂಡಿರುವ ಸಿಂಗಾಪುರ, ಕಳೆದ ತಿಂಗಳು ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಅಷ್ಟೇ ಅಲ್ಲದೆ ಮರುಬಳಕೆ ಮಾಡಬಹುದಾದ ಮಾಸ್ಕ್ ಗಳನ್ನು ತಯಾರಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ.
ಮಾಸ್ಕ್ ಗಳ ವಿಷಯದಲ್ಲಿ ಸಿಂಗಾಪುರವನ್ನು ಸ್ವಾವಲಂಬಿಯಾಗಿಸುವಲ್ಲಿ ಸರಕಾರದೊಂದಿಗೆ ಎಲ್ಲ ರೀತಿಯ ಸಹಕಾರವನ್ನು ನಾವು ನೀಡುತ್ತೇವೆಂದು ಮಾಸ್ಕ್ ವಿತರಣಾ ಯಂತ್ರವನ್ನು ಅವಿಷ್ಕರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ರೇಜರ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿನ್-ಲಿಯಾಂಗ್ ಟಾನ್ ಹೇಳಿದರು.
ಆರಂಭಿಕ ಹಂತದಲ್ಲಿ ರೇಜರ್ ಕಂಪೆನಿಯು 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಐದು ಮಿಲಿಯನ್ ಮಾಸ್ಕ್ಗಳನ್ನು ಉಚಿತವಾಗಿ ಹಂಚುವ ಯೋಜನೆ ರೂಪಿಸಿತ್ತು. ಅನಂತರ ಆ ಪ್ಯಾಕೇಜ್ ಮುಗಿದ ಬಳಿಕ ಸುಲಭದಲ್ಲಿ ಖರೀದಿಗೆ ಲಭ್ಯವಾಗುವಂತೆ ದರ ನಿಗದಿ ಪಡಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.