ಬಡವರ ಕಲ್ಯಾಣ ಧರ್ಮದ ರಕ್ಷಣೆ ಅಹರ್ನಿಶಿ: ಸಚಿವ ಆರ್. ಅಶೋಕ್
ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾದ ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ ; 183 ಜೋಡಿ ದಾಂಪತ್ಯ ಜೀವನಕ್ಕೆ
Team Udayavani, Apr 28, 2022, 6:20 AM IST
ಬೆಳ್ತಂಗಡಿ: ಹಿಂದೂ ಪರಂಪರೆಯಲ್ಲಿ ದಾಂಪತ್ಯದ ಮಹತ್ವವನ್ನು ಹಿರಿಯರು ಏಳೇಳು ಜನುಮದ ಅನುಬಂಧ ಎಂದು ಸಾರಿದ್ದಾರೆ. ಇದರರ್ಥ ಬದುಕಿನಲ್ಲಿ ಸಿರಿತನ-ಬಡತನ ಶಾಶ್ವತವಲ್ಲ. ಅರ್ಥಪೂರ್ಣ ಬದುಕಿನ ರಹಸ್ಯವೇ ಪ್ರೀತಿ ಮತ್ತು ವಿಶ್ವಾಸವಾಗಿದೆ. ಈ ನೆಲೆಯಲ್ಲಿ ಭಾರತೀಯ ಸಂಸ್ಕೃತಿಯು ಧರ್ಮ ರಕ್ಷಣೆ ಮತ್ತು ಬಡವರ ಕಲ್ಯಾಣಕ್ಕೆ ಮಹತ್ವ ನೀಡುತ್ತಾ ಬಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಿದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜನಪರ ಯೋಜನೆಗಾಗಿ ನೂರಾರು ಕಾರ್ಯಗಳಾಗುತ್ತಿವೆ. ಧರ್ಮಸ್ಥಳವೆಂದರೆ ನಿಜವಾದ ಧರ್ಮವಿರುವಂತ ಶಕ್ತಿ ಸ್ವರೂಪಿ ಈಶ್ವರನ ನೆಲೆವೀಡಾಗಿದೆ ಎಂದರು.
ಚಲನಚಿತ್ರ ನಟ ಗಣೇಶ್ ಮಾತನಾಡಿ, ಸತ್ಯವೆಂದರೆ ಮಂಜುನಾಥ, ಪ್ರಮಾಣ ಎಂದರೆ ಧರ್ಮಸ್ಥಳವಾಗಿದೆ. ಸಂಸಾರ ಸಾಗರಕ್ಕೆ ಧುಮುಕಿದ ನವದಂಪತಿಗಳಿಗೆ ಶ್ರೀ ಸ್ವಾಮಿಯು ದೋಣಿಯ ನಾವಿಕನಂತೆ ಬಂದು ಅನುಗ್ರಹಿಸಲಿ ಎಂದ ಅವರು ವರನಟ ರಾಜ್‌ಕುಮಾರ್ ಹಾಡಿದ “ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ’ ಹಾಡನ್ನು ಹಾಡಿ ನೂತನ ದಂಪತಿಗಳಿಗೆ ಶುಭಕೋರಿದರು.
ಸರಳ ಜೀವನಕ್ಕೆ ನಾಂದಿ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ, ಹಿಂದೆ ವಿವಾಹದ ದುಂದುವೆಚ್ಚದಿಂದ ಸಾಲ ಮಾಡಿ ಜೀತಕ್ಕೆ ತುತ್ತಾಗುತ್ತಿದ್ದರು. ಅಂದು ಸರಕಾರ ಜೀತಮುಕ್ತರನ್ನಾಗಿ ಮಾಡಿತ್ತು. ಹಾಗಾಗಿ ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಸಲ್ಲ. ಅದಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು ಎಂದರು. 50ನೇ ವರ್ಷದ ಈ ಕಾರ್ಯ ಕ್ರಮದಲ್ಲಿ 24 ತಾಲೂಕಿನ 53 ಜಾತಿಯವರು ಇದ್ದು, 60 ಜೊತೆ ಅಂತರ್ಜಾತೀಯ ವಿವಾಹವಾಗಿದ್ದಾರೆ ಎಂದು ಉಲ್ಲೇಖೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಶಾಸಕರು ಹಾಗೂ ಒಕ್ಕಲಿಗ ಗೌಡರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಶಾಸಕ ಹರೀಶ್ ಪೂಂಜ, ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇìಂದ್ರ ಕುಮಾರ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ ಕುಮಾರ್ ಸ್ವಾಗತಿಸಿ ದರು. ಗಣೇಶ್ ಕಾಮತ್ ವಂದಿಸಿದರು. ಬಾರಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
ಮನೆಬಾಗಿಲಿಗೆ ಸರಕಾರದ ಸೇವೆ
ರಾಜ್ಯ ಸರಕಾರ ಜನಪರ ಯೋಜನೆಯಡಿ ಗ್ರಾಮವಾಸ್ತವ್ಯ ನಡೆಸಿ ಮನೆಬಾಗಿಲಿಗೆ ಸೇವೆ ಒದಗಿಸುತ್ತಿದೆ. ಮುಂದಿನ 15 ದಿನಗಳಲ್ಲಿ ವೃದ್ಧಾಪ್ಯ ವೇತನವನ್ನು ದೂರವಾಣಿ ಮೂಲಕ ಆಧಾರ್ ಮಾಹಿತಿ ನೀಡಿದರೆ 72 ತಾಸಿನಲ್ಲಿ ಮನೆಬಾಗಿಲಿಗೆ ತಲುಪಿಸುವ ಕಾರ್ಯವಾಗಲಿದೆ. ಪಡಿತರ ಸೇರಿದಂತೆ ಎಲ್ಲ ಸೇವೆ ಮನೆಬಾಗಿಲಿಗೆ ನೀಡುವ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.