Udhayanidhi Stalin ವಿರುದ್ಧ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ
ದೇಶದಿಂದ ಉದಯನಿಧಿ ಸ್ಟಾಲಿನ್ ಗಡಿಪಾರು ಮಾಡಲು ಒತ್ತಾಯ
Team Udayavani, Sep 5, 2023, 9:34 PM IST
ಮಹಾಲಿಂಗಪುರ: ಸನಾತನ ಧರ್ಮ ನಾಶವಾಗಬೇಕೆಂದು ಹಿಂದೂ ಧರ್ಮ ವಿರೋ ಹೇಳಿಕೆ ನೀಡಿದ ತಮಿಳನಾಡಿನ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ಥಳೀಯ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಸಂಜೆ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮುಖಂಡರಾದ ಮನೋಹರ ಶಿರೋಳ, ಮಹಾಂತೇಶ ಹಿಟ್ಟಿನಮಠ, ಅರ್ಜುನ ಪವಾರ ಮಾತನಾಡಿ ಸನಾತನ ಹಿಂದೂ ಧರ್ಮವು ದೇವಧರ್ಮವಾಗಿದೆ. ಇದನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ. ಸನಾತನ ಹಿಂದೂ ಧರ್ಮದ ಮಹತ್ವ, ಹಿನ್ನಲೆ, ಅದರ ಶಕ್ತಿಯನ್ನು ಅರಿಯದೇ ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್‌ನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಚನ್ನಮ್ಮವೃತ್ತದಲ್ಲಿ ಸೇರಿದ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉದಯನಿಧಿ ಸ್ಟಾಲಿನ್ ಭಾವಚಿತ್ರವನ್ನು ಸುಟ್ಟು, ಮಾನವ ಸರಪಳಿ ನಿರ್ಮಿಸಿ, ಮುಧೋಳ ನಿಪ್ಪಾಣಿ, ರಬಕವಿ ಜಾಂಬೋಟಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ, ಸ್ಟಾಲಿನ್ ವಿರುದ್ಧ ಘೋಷನೆಗಳನ್ನು ಕೂಗಿ ಪ್ರತಿಭಟಿಸಿ, ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ, ಜೈಯತು ಜಯತು ಹಿಂದೂ ರಾಷ್ಟ್ರ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ರವಿ ಜವಳಗಿ, ಬಸವರಾಜ ಹುಕ್ಕೇರಿ, ಮಹಾಲಿಂಗಪ್ಪ ಕಂಕನವಾಡಿ, ಶಂಕರಗೌಡ ಪಾಟೀಲ, ಶಿವು ಅಂಗಡಿ, ಹಣಮಂತ ಜಮಾದಾರ, ವಿಜಯ ಸಬಕಾಳೆ, ಸುವರ್ಣಾ ಆಸಂಗಿ, ಹಣಮಂತ ಹಿಂದೂಪರ ಸಂಘಟನೆಗಳ ಸಚಿನ ಕಲ್ಮಡಿ, ಭೈರೇಶ ಆದೆಪ್ಪನವರ, ನಂದು ಲಾತೂರ, ಶ್ರೀನಿಧಿ ಕುಲಕರ್ಣಿ, ಮಹಾಲಿಂಗ ಕಲಾಲ, ದತ್ತ ಯರಗಟ್ಟಿ, ಸಚಿನ ವಂದಾಲ, ರಾಘು ಪವಾರ, ಬಸು ಮುರಾರಿ, ಅಕ್ಷಯ ಜಳ್ಳಿ, ಆನಂದ ಬಂಡಿಗಣಿ, ತಮ್ಮಣ್ಣಿ ಆದೆಪ್ಪನವರ, ಹಣಮಂತ ನಾವ್ಹಿ, ಸಂತೋಷ ಹಜಾರೆ, ಅಭಿ ಲಮಾಣಿ, ಸುನೀಲ ರಾಮೋಜಿ, ಮಹಾಲಿಂಗ ದೇಸಾಯಿ, ಚನ್ನು ಆರೆಗಾರ, ಅಭಿ ಗರಗಟ್ಟಿ, ಸಿ.ಬಿ.ಭಜಂತ್ರಿ, ಯಲ್ಲಪ್ಪ ಬನ್ನೆನ್ನವರ, ಕೃಷ್ಣಾ ಕಳ್ಳಿಮನಿ, ಸಂಗಮೇಶ ಅಂಬಲ್ಯಾಳ, ವೀರಭದ್ರ ಮುಗಳ್ಯಾಳ, ರಾಜೇಂದ್ರ ನ್ಹಾವಿ, ಈರಪ್ಪ ಹುಣಶ್ಯಾಳ, ಚೇತನ ಬಂಡಿವಡ್ಡರ, ರಾಘು ಡಂಬಳ, ವಿಶಾಲ ಪತ್ತಾರ, ವಿನಾಯಕ ಗುಂಜಿಗಾಂವಿ, ಮಹಾಲಿಂಗ ಅವಟಗಿ, ರಘು ಕಪರಟ್ಟಿ, ಬಸು ಕೊಣ್ಣೂರ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.