Antarctic ನಲ್ಲಿ ಬೃಹತ್ ಸುನಾಮಿ?: ಹವಾಮಾನ ಬದಲಾವಣೆ ಪರಿಣಾಮ ಕಾರಣ ಶಂಕೆ
Team Udayavani, May 30, 2023, 7:55 AM IST
ವಾಷಿಂಗ್ಟನ್ :ಜಾಗತಿಕ ಹವಾಮಾನ ಬದಲಾವಣೆ ವಿಶ್ವರಾಷ್ಟ್ರಗಳಿಗೆ ಸವಾಲಾಗಿರುವ ನಡುವೆಯೇ, ನೀರ್ಗಲ್ಲುಗಳ ಪ್ರದೇಶ ಅಂಟಾರ್ಟಿಕದಲ್ಲಿ ಬೃಹತ್ ಸುನಾಮಿ ಸೃಷ್ಟಿಯಾಗಲಿದೆ ಎಂಬ ಆತಂಕ ಎದ್ದಿದೆ. ಅದು ಜಗತ್ತಿನ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಪ್ಲೇಮೌತ್ ವಿವಿಯ ವಿಜ್ಞಾನಿಗಳು ಅಂಟಾರ್ಟಿಕದಲ್ಲಿ ಸಾಗರತಳದ ಭೂ ಕುಸಿತಕ್ಕೆ ಸಂಬಂಧಿಸಿದ ಕಾರಣಗಳನ್ನು ಪತ್ತೆಹಚ್ಚುವ ಕುರಿತು ಸಂಶೋಧನೆ ನಡೆಸಿದ್ದಾರೆ. ಈ ವೇಳೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳನ್ನೂ ವರದಿ ಮಾಡಿದ್ದಾರೆ. ತಾಪಮಾನ ಏರಿಕೆಯು ಈ ಹಿಂದಿನ ದಾಖಲೆಗಳನ್ನೂ ಹಿಂದಿಕ್ಕಿ ಹೆಚ್ಚಾಗುತ್ತಲೇ ಇದೆ. ಈ ಹಿಂದೆ ಅಂಟಾರ್ಟಿಕ್‌ನಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಇದ್ದಾಗ ಬೃಹತ್ ಸುನಾಮಿ ಸಂಭವಿಸಿತ್ತು. ಇದೇ ರೀತಿಯ ಅಸ್ತಿರತೆ ಮುಂದುವರಿದರೆ ಮತ್ತೂಮ್ಮೆ ಬೃಹತ್ ಸುನಾಮಿ ಸಂಭವಿಸಲಿದೆ. ಈ ಬಾರಿ ದಕ್ಷಿಣ ಅಮೆರಿಕಾ, ನ್ಯೂಜಿಲೆಂಡ್ ಹಾಗೂ ಆಗ್ನೇಯ ಏಷ್ಯಾದ ತೀರಗಳನ್ನು ಸುನಾಮಿಯ ಅಲೆಗಳು ಅಪ್ಪಳಿಸಲಿದ್ದು, ಜಾಗತಿಕ ಕಂಟಕ ಎದುರಾಗಲಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಶಾಂಘೈನಲ್ಲಿ 100 ವರ್ಷದಲ್ಲೇ ಅತಿ ಹೆಚ್ಚು ಬಿಸಿಲು
ಚೀನಾದ ಶಾಂಘೈನಲ್ಲೂ ಹವಾಮಾನ ವೈಪರೀತ್ಯದ ಪರಿಣಾಮ ಎದುರಾಗಿದ್ದು, 100 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನ ಅತಿಹೆಚ್ಚು ತಾಪಮಾನವನ್ನು ನಗರ ವರದಿಮಾಡಿದೆ. ಶಾಂಘೈನ ಕ್ಸು ಜಿಯಾಹುಯಿ ಎನ್ನವ ಪ್ರದೇಶದಲ್ಲಿ ಸೋಮವಾರ 36.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 100 ವರ್ಷಗಳಲ್ಲೇ ದಾಖಲಾದ ಅತಿಹೆಚ್ಚು ತಾಪಮಾನ. ಇದಕ್ಕೂ ಮುಂಚೆ 1876ರಲ್ಲಿ 35.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಶಾಂಘೈನಲ್ಲಿ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.