ಈಸ್ಟರ್ ಆಚರಣೆ ಹೊಸ ಭರವಸೆ ಮೂಡಿಸಲಿ
ಉಡುಪಿ ಬಿಷಪ್ ಅವರಿಂದ ಈಸ್ಟರ್ ಸಂದೇಶ
Team Udayavani, Apr 12, 2020, 12:35 PM IST
ಉಡುಪಿ: ಪ್ರಾರ್ಥನೆ, ಉಪವಾಸ, ದಾನ-ಧರ್ಮಗಳನ್ನೊಳಗೊಂಡ ನಲ್ವತ್ತು ದಿನಗಳ ತಪಸ್ಸು ಕಾಲದ ವ್ರತವು ಕಳೆದು ಯೇಸು ಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬ ಮತ್ತೂಮ್ಮೆ ಬಂದಿದೆ. ಎರಡು ಸಾವಿರ ವರ್ಷಗಳ ಹಿಂದೆ ಯೇಸುಕ್ರಿಸ್ತರು ಅನುಭವಿಸಿದ ಕಷ್ಟ, ಯಾತನೆ, ಶಿಲುಬೆಯ ಮರಣ ಹಾಗೂ ಇವೆಲ್ಲದರ ಶಿಖರವಾದ ಪುನರುತ್ಥಾನವನ್ನು ಭಕ್ತಿಂದ ಸ್ಮರಿಸಿ, ಆ ಚಾರಿತ್ರಿಕ ಘಟನೆಗಳನ್ನು ಪುನರ್ಜಿಸಿ, ದೈನಂದಿನ ಜೀವನದಲ್ಲಿ ಶ್ವಾಸವರ್ಧನೆಯನ್ನು ಮಾಡುವ ಸಂಭ್ರಮವಿದು.
ಈಜಿಪ್ತಿನ ದಾಸ್ಯತ್ವದಲ್ಲಿ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹಾಗೂ ಹೊಸ ಬದುಕಿನೆಡೆಗೆ ಕರೆದೊಯ್ದ ಚಾರಿತ್ರಿಕ ನೆನಪಿನ ಆಚರಣೆಯೂ ಈ ಹಬ್ಬದೊಂದಿಗೆ ಸೇರಿಕೊಂಡಿದೆ. ಹೀಗಾಗಿ ಈಸ್ಟರ್ ಯೇಸುಕ್ರಿಸ್ತರು ಮರಣದ ಮೇಲೆ ಜಯವನ್ನು ಸಾರಿದ ಅವರ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ ಹೊಸ ಜೀವನ, ಹೊಸ ಸೃಷ್ಟಿ ಹಾಗೂ ಹೊಸ ಅನ್ವೇಷಣೆಯಿಂದ “ಮರಣವೇ ಜೀವನದ ಅಂತಿಮ ಅಲ್ಲ’ ಎಂಬುದನ್ನೂ ಸಾರುತ್ತದೆ.
ಇಡೀ ಮಾನವಕುಲ ಕೋವಿಡ್ 19 ಮಹಾಮಾರಿಯ ಸೋಂಕಿನ ಭೀತಿಯಿಂದ ನಲುಗಿರುವಾಗ ಬಂದಿರುವ ಈ ವರ್ಷದ ಈಸ್ಟರ್ ಹಬ್ಬ ಅಂಧಕಾರದ ಕಾರ್ಮೋಡಗಳ ಅಂಚಿನಲ್ಲಿ ಕಾಣಿಸುವ ಬೆಳ್ಳಿಯ ರೇಖೆಯಂತಿದೆ. ಕಷ್ಟ, ನೋವು, ರೋಗ, ಯಾತನೆಗಳು ಶಾಶ್ವತವಲ್ಲ. ಅವುಗಳಿಗೆ ಅಂತ್ಯವಿದೆ. ದೇವರು ನಮ್ಮನ್ನು ಸೋಲಲು ಸೃಷ್ಟಿಸಿಲ್ಲ; ಬದಲಾಗಿ ಕಷ್ಟಗಳ ಮೇಲೆ ಜಯಶಾಲಿಗಳಾಗಲು ಸೃಷ್ಟಿಸಿದ್ದಾರೆ. ಆದ್ದರಿಂದ ಈ ಕಠಿನ ಪರಿಸ್ಥಿತಿಯಲ್ಲಿ ಸಜ್ಜನ ಯೋಬನ ಮಾತುಗಳು ನಮಗೆ ಪ್ರೇರಣೆಯಾಗಲಿ: ದೇವರಿಂದ ನಾವು ಸುಖಪಡೆಯಬಹುದು,
ದುಃಖವನ್ನು ಮಾತ್ರ ಪಡೆಯಬಾರದೋ?
ಈ ಈಸ್ಟರ್ ಹಬ್ಬದಂದು ಈ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಗಳಿಗಾಗಿ; ಜನತೆಯ ಅಸುರಕ್ಷತೆಯನ್ನು ದೂರಗೊಳಿಸಿ ವಿಶ್ವಾಸ ತುಂಬುತ್ತಿರುವ ಎಲ್ಲ ಅಧಿಕಾರಿಗಳಿಗಾಗಿ; ಹಸಿದು ಕಂಗೆಟ್ಟ ನಿರಾಶ್ರಿತ ಜನತೆ ಹಾಗೂ ಅಶಕ್ತರಿಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಹಾಯ ಮಾಡುತ್ತಿರುವ ಎಲ್ಲ ಸುಮನಸ್ಸಿನ ಜನರಿಗಾಗಿ ಹಾಗೂ ಇವುಗಳನ್ನೆಲ್ಲ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿರುವ ಜನ ಪ್ರತಿನಿಧಿಗಳಿಗಾಗಿ ನಮ್ಮ ವಿಶೇಷ ಪ್ರಾರ್ಥನೆಗಳು ಸಲ್ಲಲಿ. ಮರಣದ ಮೇಲೆ ಜಯಶಾಲಿಯಾದ ಪ್ರಭು ಯೇಸುಕ್ರಿಸ್ತರು ಎಲ್ಲರ ಮನೆ ಮನಗಳಲ್ಲಿ ನವಜೀವನದ ಭರವಸೆಯನ್ನು ಮೂಡಿಸಲಿ ಎಂದು ಉಡುಪಿಯ ಧರ್ಮಾಧ್ಯಕ್ಷರಾದ ಜೆರಾಲ್ಡ್ ಲೋಬೋ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.