ಪಾಲಿಕೆ; ಹಾಲಿ ಮೇಯರ್ ಅಧಿಕಾರಾವಧಿ ವಿಸ್ತರಣೆ ಮುಂದೂಡಿಕೆಯಾದ ಮೇಯರ್ ಚುನಾವಣೆ
Team Udayavani, Mar 3, 2022, 6:08 PM IST
ಲಾಲ್‌ಬಾಗ್ : ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್ ಅಧಿಕಾರಾವಧಿ ಬುಧವಾರಕ್ಕೆ ಕೊನೆಗೊಂಡಿದ್ದರೂ ಕಾನೂ ನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಪ್ರಸ್ತುತ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಸರಕಾರದ ಮುಂದಿನ ಆದೇಶ ಬರುವವರೆಗೆ ವಿಸ್ತರಣೆಗೊಂಡಿದೆ.
ಈ ಮೂಲಕ ಪಾಲಿಕೆ ಇತಿಹಾಸದಲ್ಲಿ ಎರಡನೇ ಬಾರಿ ಮೇಯರ್ ಹುದ್ದೆ ನಿಗದಿತ 1 ವರ್ಷದ ಬದಲು ಹೆಚ್ಚುವರಿ ದಿನಗಳವರೆಗೆ ವಿಸ್ತರಣೆ ಅವಕಾಶ ದೊರಕಿದಂತಾಗಿದೆ. ಮೇಯರ್, ಉಪಮೇಯರ್ ಹಾಗೂ ಸ್ಥಾಯೀ ಸಮಿತಿಯ ಈಗಾಗಲೇ ಇದ್ದ ಅಧಿಕಾರವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎನ್ನಲಾಗಿದೆ.
ಈ ಹಿಂದೆ 2005ರಲ್ಲಿ ಕಾನೂನಾತ್ಮಕ ಕಾರಣದಿಂದಾಗಿ ಮೇಯರ್ ಅಧಿಕಾರಾವಧಿ ವಿಸ್ತರಣೆಗೊಂಡಿತ್ತು. ಆಗ ಮೇಯರ್ ಆಗಿದ್ದ ಅಶ್ರಫ್ ಅವರು 25-07-2005ಕ್ಕೆ ಅಧಿಕಾರ ಸ್ವೀಕರಿಸಿದ್ದರು. ನಿಯಮ ಪ್ರಕಾರ ಅವರ ಅಧಿಕಾರ ಅವಧಿ 25-07-2006ಕ್ಕೆ ಕೊನೆಗೊಂಡು ನೂತನ ಮೇಯರ್ ಆಯ್ಕೆಯಾಗಬೇಕಿತ್ತು. ಆದರೆ ಆ ವೇಳೆಯಲ್ಲಿಯೂ ಕಾನೂನಾತ್ಮಕ ಕಾರಣದ ಹಿನ್ನೆಲೆಯಲ್ಲಿ ಅಂದಿನ ಮೇಯರ್ ಅಧಿಕಾರ ಅವಧಿ ವಿಸ್ತರಣೆಗೊಂಡಿತ್ತು. ಈ ಮೂಲಕ 25-10-2006ರ ವರೆಗೆ (1 ವರ್ಷ 3 ತಿಂಗಳು)ಅಶ್ರಫ್ ಮೇಯರ್ ಆಗಿದ್ದರು.
ಪಾಲಿಕೆಯ 23ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಮೇಯರ್ ಸ್ಥಾನವನ್ನು ಸಾಮಾನ್ಯ (ಜಿ) ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ (ಬಿಸಿಎಡಬ್ಲ್ಯು) ವರ್ಗಕ್ಕೆ ಮೀಸಲಿರಿಸಿದ್ದು, ಅದರಂತೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯನ್ನು ಮಾ. 2ರಂದು ನಿಗದಿಯಾಗಿತ್ತು.
ಆದರೆ ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರಿಂಕೋರ್ಟ್‌ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್ ಹಾಗೂ 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿರುವುದರಿಂದ ಈ ಚುನಾವಣೆಗೆ ಅನ್ವಯವಾಗುವುದೇ? ಎಂಬ ಬಗ್ಗೆ ದ.ಕ. ಜಿಲ್ಲಾಧಿಕಾರಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಆದರೆ ಈವರೆಗೂ ಸರಕಾರದಿಂದ ಯಾವುದೇ ಸ್ಪಷ್ಟೀಕರಣ ಸ್ವೀಕೃತವಾಗಿಲ್ಲ. ಹೀಗಾಗಿ ಮಾ. 2ರಂದು ನಿಗದಿಪಡಿಸಿದ ಮಂಗಳೂರು ಪಾಲಿಕೆಯ ಮೇಯರ್, ಉಪಮೇಯರ್, ಸ್ಥಾಯೀ ಸಮಿತಿ ಚುನಾವಣೆಯನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧ: ಪರ್ಯಾಯ ಮಾರ್ಗ ಯಾವುದು?
ಹಾಲಿ ಮೇಯರ್-ಉಪಮೇಯರ್ ಮುಂದುವರಿಕೆ
ಹೊಸ ಮೇಯರ್, ಉಪಮೇಯರ್ ಬರುವವರೆಗೆ/ಮುಂದಿನ ಚುನಾವಣೆಯ ವರೆಗೆ ಹಾಲಿ ಮೇಯರ್, ಉಪಮೇಯರ್ ಅವರು ಮುಂದುವರಿಯಲು ನಗರಾಡಳಿತ ಸಂಸ್ಥೆಯ ಕಾಯ್ದೆಯಲ್ಲಿ ಅವಕಾಶವಿದೆ. ಅವರ ಅಧಿಕಾರದ ವ್ಯಾಪ್ತಿಯ ಕುರಿತಂತೆ ಸರಕಾರದಿಂದ ಸಲಹೆ ಕೇಳಲಾಗುವುದು.
– ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಪಾಲಿಕೆ
ಕೊನೆಯ ಮೇಯರ್ ಅಧಿಕಾರಾವಧಿ ಕಡಿತ!
ಮಹಾನಗರ ಪಾಲಿಕೆಯ ಅಧಿಕಾರಾವಧಿ 5 ವರ್ಷಗಳಾಗಿದ್ದು, ಮೇಯರ್ ಅವರ ಅಧಿಕಾರಾವಧಿ 1 ವರ್ಷವಾಗಿರುತ್ತದೆ. ಈ ಮಧ್ಯೆ ಯಾವುದೇ ಮೇಯರ್ ಅವರ ಅಧಿಕಾರಾವಧಿ ವಿಸ್ತರಣೆಯಾದರೆ ಕೊನೆಯ ಮೇಯರ್ ಅವರ ಅಧಿಕಾರ ಅವಧಿ ಕಡಿತಗೊಳ್ಳುತ್ತದೆ. ಪಾಲಿಕೆ ಪ್ರಸಕ್ತ ಆಡಳಿತಾವಧಿ 28-02-2020ಕ್ಕೆ ಆರಂಭವಾಗಿದ್ದು, 27-02-2025ರವರೆಗೆ ಇರಲಿದೆ. ಮುಂಬರುವ (ಮೂರನೇ) ಹಾಗೂ ನಾಲ್ಕನೇ ಮೇಯರ್ ಅವಧಿ ಪೂರ್ಣ 1 ವರ್ಷ ದೊರಕಿದರೂ ಕೊನೆಯ ಮೇಯರ್ ಅವಧಿ ಮಾತ್ರ ಕಡಿತವಾಗಲಿದೆ. ಪ್ರಸ್ತುತ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ವಿಸ್ತರಣೆ ಎಷ್ಟು ದಿನ ಆಗಲಿದೆಯೋ ಅಷ್ಟು ಅವಧಿ ಕೊನೆಯ ಮೇಯರ್ ಅವರ ಆಡಳಿತ ಅವಧಿ ಕಡಿತವಾಗಲಿದೆ.
ಇಂತಹುದೇ ಪರಿಸ್ಥಿತಿ ವಿಜಯ ಅರುಣ್ ಅವರು ಮೇಯರ್ ಆಗಿದ್ದ ಕಾಲದಲ್ಲಿ ಎದುರಾಗಿತ್ತು. ಅವರು 25-10-2006ಕ್ಕೆ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು. 1 ವರ್ಷದ ಬದಲು ಅವರು 16-06-2007ರ ವರೆಗೆ ಮಾತ್ರ ಮೇಯರ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tennis: ಅಲೆಕ್ಸಾಂಡರ್ ಮುಲ್ಲರ್‌ಗೆ ಹಾಂಕಾಂಗ್ ಪ್ರಶಸ್ತಿ
Brisbane ಇಂಟರ್‌ನ್ಯಾಶನಲ್ ಟೆನಿಸ್: ಅರಿನಾ ಸಬಲೆಂಕಾ ಚಾಂಪಿಯನ್
Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್ ಕಪಾಡಿಯಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tennis: ಅಲೆಕ್ಸಾಂಡರ್ ಮುಲ್ಲರ್‌ಗೆ ಹಾಂಕಾಂಗ್ ಪ್ರಶಸ್ತಿ
Brisbane ಇಂಟರ್‌ನ್ಯಾಶನಲ್ ಟೆನಿಸ್: ಅರಿನಾ ಸಬಲೆಂಕಾ ಚಾಂಪಿಯನ್
Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್ ಕಪಾಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.