ಇಂದು ಮಂಗಳೂರಿನಲ್ಲಿ ಮೀನುಗಾರ ಮುಖಂಡರ ಸಭೆ
ತಮಿಳುನಾಡು ಮೀನುಗಾರರಿಂದ ಆಕ್ರಮಣ
Team Udayavani, Feb 13, 2023, 6:20 AM IST
ಮಂಗಳೂರು: ಮಂಗಳೂರು ಮತ್ತು ಮಲ್ಪೆಯ ಮೀನುಗಾರರ ಮೇಲೆ ಆಕ್ರಮಣ ನಡೆ ಸಿರುವ ತಮಿಳುನಾಡು ಮೀನುಗಾರರ ಮೇಲೆ ಸೂಕ್ತ ಕ್ರಮ ಕೈಗೊಂಡು ರಾಜ್ಯದ ಮೀನುಗಾರರಿಗೆ ನ್ಯಾಯ, ರಕ್ಷಣೆ, ಪರಿಹಾರ ಒದಗಿಸಬೇಕೆಂದು ಒತ್ತಾಯಿಸುವುದಕ್ಕಾಗಿ ಸೋಮವಾರ ಮಂಗಳೂರಿನಲ್ಲಿ ಬೋಟ್ ಮಾಲಕರು, ಮೀನುಗಾರ ಮುಖಂಡರ ಸಭೆ ನಡೆಯಲಿದೆ.
ಸಭೆಯಲ್ಲಿ ಘಟನೆಯ ಬಗ್ಗೆ ಪರಾ ಮರ್ಶೆ ನಡೆಸಿ ಜಿಲ್ಲಾಡಳಿತ, ರಾಜ್ಯ, ಕೇಂದ್ರ ಸರಕಾರದ ಮುಂದಿಡಬೇಕಾದ ಬೇಡಿಕೆ ಬಗ್ಗೆ ನಿರ್ಧಾರ ತೆಗೆದುಕೊಂಡು ಬಳಿಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಜತೆ ಮಾತುಕತೆ ನಡೆಯಲಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಘಟನೆಯನ್ನು ಮೀನುಗಾರಿಕೆ ಇಲಾಖೆಯ ಗಮನಕ್ಕೆ ತರಲಾಗಿದೆ. ಅವರು ಘಟನೆ ನಡೆದ ವ್ಯಾಪ್ತಿಯ ಕುರಿತು ಹೆಚ್ಚಿನ ಮಾಹಿತಿ ಕೇಳಿದ್ದು ಅದನ್ನು ನೀಡಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.
ಕಳೆದ ಬುಧವಾರ ಕನ್ಯಾಕುಮಾರಿ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ 200ಕ್ಕೂ ಅಧಿಕ ಬೋಟ್ ಗಳಿಗೆ ತಮಿಳುನಾಡು ಮೀನುಗಾ ರರು ಕಲ್ಲು, ಮರದ ತುಂಡು ಮತ್ತಿತರ ಪರಿಕರಗಳನ್ನು ಎಸೆದು ಹಾನಿ ಗೊಳಿಸಿ ದ್ದರು. ಇದರಿಂದ ಬೋಟ್ ಗಳು ವಾಪಸಾಗಿದ್ದವು. ಆಕ್ರಮಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.