ಜಿಮೇಲ್‌ನಲ್ಲಿ ಮೀಟಿಂಗ್
Team Udayavani, Jun 1, 2020, 4:36 AM IST
ಗೂಗಲ್‌ನ ಚಾಟ್ ವ್ಯವಸ್ಥೆಯಾದ ಹ್ಯಾಂಗ್ ಔಟ್ಸ್ ಬಹುತೇಕರಿಗೆ ಗೊತ್ತಿರುತ್ತದೆ. ಅದರಲ್ಲಿ ಚಾಟ್ ಮಾಡುವುದರ ಜೊತೆಗೆ, “ಮೀಟ್’ ಎಂಬ ವಿಡಿಯೊ ಕಾಲ್ ಮಾಡುವ ಆಯ್ಕೆಯನ್ನೂ ನೀಡಲಾಗಿತ್ತು. ಈ ಸವಲತ್ತನ್ನು ಈಗ ಜಿಮೇಲ್ ಜೊತೆ ಇಂಟಗ್ರೇಟ್ ಮಾಡಲಾಗಿದೆ. ಇನ್ನು ಮುಂದೆ, ಪ್ರತ್ಯೇಕ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ.
ಅಲ್ಲದೆ ಕಚೇರಿಯಿಂದ ಕೊಡಮಾಡುವ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ಗ್ಳಲ್ಲಿ ಯಾವುದೇ ಪ್ರತ್ಯೇಕ ಸಾಫ್ಟ್‌ವೇರ್ ಅಳವಡಿಸದೆ, ಜಿ ಮೇಲ್‌ನಿಂದಲೇ ಮೀಟಿಂಗ್‌ಗಳನ್ನು ಮಾಡಬಹುದಾಗಿದೆ. ಕಂಪ್ಯೂಟರ್‌ನ ಬ್ರೌಸರ್‌ನಲ್ಲಿ ಜಿಮೇಲ್ ಖಾತೆಗೆ ಲಾಗಿನ್ ಆಗಬೇಕು. ಆಗ ಎಡಗಡೆ ಇನ್‌ಬಾಕ್ಸ್, ಡ್ರಾಫ್ಟ್ಸ್, ಎಂಬಿತ್ಯಾದಿ ಆಯ್ಕೆಗಳ ಕೆಳಗೆ “ಮೀಟ್’ ಆಯ್ಕೆಯನ್ನು ನೋಡಬಹುದು.
ಅದರಲ್ಲಿ- ಸ್ಟಾರ್ಟ್ ಎ ಮೀಟಿಂಗ್, ಜಾಯಿನ್ ಎ ಮೀಟಿಂಗ್ ಎಂಬ ಎರಡು ಉಪ ಆಯ್ಕೆಗಳಿವೆ. ಮೀಟಿಂಗ್ ನಡೆಸುವ ಮುಖ್ಯಸ್ಥರು, ಸ್ಟಾರ್ಟ್ ಎ ಮೀಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ಕ್ಯಾಮೆರಾ ಪರದೆ ತೆರೆದುಕೊಳ್ಳುತ್ತದೆ. ಅದರ ಪಕ್ಕದಲ್ಲಿ 10 ಸಂಖ್ಯೆಗಳ ಐಡಿ ಇರುತ್ತದೆ. ಅದನ್ನು ಮೀಟಿಂಗ್‌ನಲ್ಲಿ ಪಾಲ್ಗೊಳ್ಳುವವರಿಗೆ ಕಳುಹಿಸಬೇಕು.
ಮಿಕ್ಕವರು ತಮ್ಮ ಕಂಪ್ಯೂಟರ್‌ಗಳಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ, ಜಾಯಿನ್ ಎ ಮೀಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಸ್ವೀಕರಿಸಿದ 10 ಸಂಖ್ಯೆಗಳ ಐಡಿ ಟೈಪಿಸಬೇಕು. ಮೀಟಿಂಗ್‌ನಲ್ಲಿ ಒಟ್ಟು 16 ಮಂದಿ ಏಕ ಕಾಲದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.