ಕಾರ್ಕಳ: ಮನೆಮನೆಯಲ್ಲಿಂದು ಮೆಹಂದಿ ಉತ್ಸವ : ಮದರಂಗಿ ಮಾಯಾಲೋಕದೊಳಗೆ ಜನ ಬಂಧಿ


Team Udayavani, Mar 16, 2022, 3:28 PM IST

ಕಾರ್ಕಳ: ಮನೆಮನೆಯಲ್ಲಿಂದು ಮೆಹಂದಿ ಉತ್ಸವ : ಮದರಂಗಿ ಮಾಯಾಲೋಕದೊಳಗೆ ಜನ ಬಂಧಿ

ಕಾರ್ಕಳ : ಕಾರ್ಕಳ ಉತ್ಸವ ಹೊಸ ಯೋಚನೆ, ಯೋಜನೆ, ವಿನೂತನಕ್ಕೆ ಉತ್ಸವ ಸಾಕ್ಷಿಯಾಗುತ್ತಿದೆ. ಶುಭ, ಸಂಭ್ರಮ, ಸಹಬಾಳ್ವೆಯ ಸಂಕೇತವಾಗಿ ಮಾ.16ರಂದು ತಾ|ನಲ್ಲಿ ವಿಶೇಷ ಮನೆಮನೆ ಮೆಹಂದಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ಸಂಸ್ಕೃತಿಯ ಭಾಗವಾಗಿರುವ, ಆರೋಗ್ಯದಾಯಕವೂ ಆಗಿರುವ ಮೆಹಂದಿ ಹಚ್ಚಿಕೊಳ್ಳು ವುದನ್ನು ಹಬ್ಬ, ಮದುವೆ ವಿಶೇಷ ಸಮಾರಂಭಗಳಲ್ಲಿ ಕಂಡಿದ್ದೆವು. ಮೆಹಂದಿ ಉತ್ಸವದಲ್ಲಿ ತಾಲೂಕಿನ ಇಡೀ ಕುಟುಂಬಗಳು ಭಾಗವಹಿಸುವ ಮೂಲಕ ಅವಿಸ್ಮರಣೀಯ ವಾಗಲಿದೆ. ಬುಧವಾರ ಬೆಳಗ್ಗೆಯಿಂದ ರಾತ್ರಿ ತನಕ ಗಂಡು-ಹೆಣ್ಣು ಬೇಧವಿಲ್ಲದೆ ಎಲ್ಲರೂ ಕೈಗಳಿಗೆ ಮೆಹಂದಿ ಹಚ್ಚುವ ಕಾರ್ಯ ನಡೆಸಲಿದ್ದಾರೆ.

ಮೆಹಂದಿ ಉತ್ಸವ ಹಿನ್ನಲೆಯಲ್ಲಿ ನಗರದ ವಿವಿಧೆಡೆ ವಿವಿಧ ಶೈಲಿಯ ಮೆಹಂದಿ ಟ್ಯೂಬ್‌ಗಳನ್ನು ಖರೀದಿಸು ತ್ತಿರುವುದು ಕಂಡು ಬಂತು. ಮಕ್ಕಳಿಂದ ಹಿಡಿದು, ವೃದ್ಧರ ವರೆಗೆ ಮೆಹಂದಿ ಹಾಕಲು ಉತ್ಸುಹಕರಾಗಿದ್ದಾರೆ. ಪ್ರತೀ ಕುಟುಂಬಗಳು ಇದರಲ್ಲಿ ಭಾಗಿ ಯಾಗಬೇಕಲು ಎನ್ನುವ ಆಶಯ ಸಚಿವರದ್ದಾಗಿದೆ.

ಎಲ್ಲವೂ ಆಕರ್ಷಣೀಯ
ವಸ್ತು ಪ್ರದರ್ಶನದಲ್ಲಿ ಶಿಲ್ಪಕಲೆ, ಲಲಿತ ಕಲೆ, ಖಾದಿ ರಾಜ್ಯ ಹೊರರಾಜ್ಯಗಳ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆ ಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬಿದಿರಿನ ಚಾಪೆ, ತಟ್ಟಿ, ಮುಟ್ಟಾಳೆ, ಗೆರಸೆ, ಹುರಿಹಗ್ಗ, ಪಡಿಮಂಚಕ್ಕೆ ಭತ್ತದ ಸೂಡಿ ಬಡಿಯುವ ಮಹಿಳೆಯರು, ಹಳ್ಳಿ ಮಕ್ಕಳ ಆಟದ ಜತೆಗೆ ಕಾವಲು ನಿಂತ ನಾಯಿ, ಹಸು ಕರುವಿನ ಕಲಾಕೃತಿಗಳು ಹಳ್ಳಿ ಸೊಗಡಿನ ಸೊಬಗು ಪ್ರದರ್ಶಿಸುತ್ತಿದೆ.

ಇದನ್ನೂ ಓದಿ : ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಹೆದ್ದಾರಿ : ಇದು ಕತ್ತಲ ದಾರಿ

ಇಂದು ಗೂಡುದೀಪ ಉದ್ಘಾಟನೆ
ಮಾ.16ರಿಂದ ಸ್ವರಾಜ್‌ ಮೈದಾನದಲ್ಲಿ ಗೂಡುದೀಪ ಉದ್ಘಾಟನೆಯಾಗಲಿದೆ. ಕಾರ್ಕಳ ಕ್ಷೇತ್ರದ 1ರಿಂದ 10 ನೇ ತರಗತಿಯ ಮಕ್ಕಳಿಗೆ ಪ್ರತೀ ಶಾಲೆಯಿಂದ ತಲಾ ಒಂದು ಗೂಡುದೀಪದ ನೋಂದಾವಣೆಯೊಂದಿಗೆ ಸ್ಪರ್ಧೆ ನಡೆಯುತ್ತದೆ. ಸಾಂಪ್ರದಾಯಿಕ ಅಥವಾ ಆಧುನಿಕ ಗೂಡುದೀಪಗಳ ಸ್ಪರ್ಧೆಗೆ ಅವಕಾಶವಿದೆ. ವಿಜೇತರಿಗೆ ಬಹುಮಾನವಿದೆ. ಸ್ಪರ್ಧೆಯಲ್ಲಿ ಗೂಡುದೀಪಗಳಲ್ಲದೆ, ಮಂಗಳೂರು ನಮ್ಮ ಕುಡ್ಲ ತಂಡದಿಂದ ಸುಮಾರು 100 ದೊಡ್ಡ ಗಾತ್ರದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪಗಳ ಪ್ರದರ್ಶನವಿರುತ್ತದೆ.

ಇಂದು ಪ್ರಾಣೇಶ್‌ ತಂಡದಿಂದ ಹಾಸ್ಯ
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌, ಬಸವರಾಜ ಮಹಾಮನಿ, ಗಂಗಾವತಿ ನರಸಿಂಹ ಜೋಶಿ, ಯಶವಂತ ಸರ್‌ದೇಶ್‌ ಪಾಂಡೆ ಇವರಿಂದ ಸಂಜೆ 6ರಿಂದ ಕನ್ನಡ ಹಾಸ್ಯ, ರಾಜಸ್ಥಾನ, ಕಾಶ್ಮೀರ ಮಹಾರಾಷ್ಟ್ರ ರಾಜ್ಯಗಳ ಚಡಯ್‌, ತೇರತಾಲಿ, ರೌಫ್, ವಚನಾಗಿಯಾ, ತರ್ಪಾ ಜಾನಪದ ನೃತ್ಯಗಳು ನಡೆಯಲಿವೆ. ರಾತ್ರಿ 8.45ರಿಂದ ತುಳು ನಾಟಕ ನಮಸ್ಕಾರ ಮೇಸ್ಟ್ರೇ ಪ್ರದರ್ಶನಗೊಳ್ಳಲಿದೆ.

ಉತ್ಸವ ಸೇನಾನಿಗಳಿಗೆ ಮೆಚ್ಚುಗೆಯ ಸುರಿಮಳೆ
ಕಾರ್ಕಳ ಉತ್ಸವದ ಯಶಸ್ವಿಗೆ 37 ಸಮಿತಿಗಳು, ಸ್ವಯಂ ಸೇವಕರು ಅಹರ್ನಿಶಿ ದುಡಿಯುತ್ತಿದ್ದಾರೆ. ಇವರ ಜತೆಗೆ ಮೆಸ್ಕಾಂ, ಪೊಲೀಸ್‌ ಇಲಾಖೆ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬಂದಿ ಹಗಲಿರುಳೆನ್ನದೆ ಬೆವರು ಹರಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇಲ್ಲೆ ಮೊಕ್ಕಾಂ ಹೂಡಿದ್ದಾರೆ. ಎಲ್ಲಿಯೂ ಎಳ್ಳಷ್ಟು ಗೊಂದಲಗಳು ಏರ್ಪಡದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಸ್ವತ್ಛತೆಯ ಕಾರ್ಮಿಕರು, ತಂಡದವರು ಇಷ್ಟೊಂದು ಜನಸಂದಣಿಯ ಮಧ್ಯೆ ನಗರ, ಸ್ವರಾಜ್‌ ಮೈದಾನ, ಗಾಂಧಿ ಮೈದಾನಗಳಲ್ಲಿ ಕಸ ಕಣ್ಣಿಗೆ ಕಾಣದಂತೆ ತೆರವುಗೊಳಿಸಿ ಸ್ವತ್ಛವಾಗಿಟ್ಟಿರುವುದು ಸಾಧನೆ ಎನ್ನುವಂತಿದೆ. ಸ್ವತ್ಛತೆ, ಅಚ್ಚುಕಟ್ಟಾದ ನಿರ್ವಹಣೆ ಕಂಡು ಹೊರ ಭಾಗದಿಂದ ಬಂದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.