Meralda Jewels: ಮಂಗಳೂರಿನಲ್ಲಿ ನೂತನ ಮಳಿಗೆ ಶುಭಾರಂಭ
Team Udayavani, Oct 29, 2023, 11:09 PM IST
ಮಂಗಳೂರು: ಕೇರಳದ ಪ್ರಸಿದ್ಧ ಆಭರಣ ಮಳಿಗೆಯಾಗಿರುವ “ಮೆರಾಲ್ಡಾ ಜುವೆಲ್ಸ್’ನ ಕರ್ನಾಟಕದ ಮೊದಲ ಶೋರೂಂ ರವಿವಾರ ಮಂಗಳೂರಿನ ಬಲ್ಮಠದಲ್ಲಿ ಶುಭಾರಂಭಗೊಂಡಿತು.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಮಳಿಗೆಯನ್ನು ಉದ್ಘಾಟಿಸಿದರು. ಮಳಿಗೆಯ ಸಂಗ್ರಹದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು , ಶುಭ ಹಾರೈಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮುಖ್ಯ ಅತಿಥಿಯಾಗಿದ್ದರು.
ಮನೆಮಾತಾದ ಸಂಸ್ಥೆ
ಸಮಾರಂಭದ ಮುಖ್ಯ ಆಕರ್ಷಣೆ ನಟಿ ಅಥಿಯಾ ಶೆಟ್ಟಿ ಮಾತನಾಡಿ, ಆಭರಣ ಪ್ರಿಯ ಮಹಿಳೆಯರಿಗೆ ಮೆರಾಲ್ಡಾದಲ್ಲಿ ವಿಪುಲವಾದ ಸಂಗ್ರಹವಿದೆ. ಈಗಾಗಲೇ ಕೇರಳದಲ್ಲಿ ಸಂಸ್ಥೆ ಮನೆ ಮಾತಾಗಿದ್ದು, ಮಂಗಳೂರಿನಲ್ಲೂ ಮಹಿಳೆಯರನ್ನು ಆಕರ್ಷಿಸಲಿದೆ. ಕರ್ನಾಟಕದಲ್ಲಿಯೂ ಮೆರಾಲ್ಡಾ ಜುವೆಲ್ಸ್ ಯಶಸ್ವಿಯಾಗಲಿ ಎಂದರು. ಇದೇ ವೇಳೆ ಅವರು ಮೊದಲ ಗ್ರಾಹಕರಿಗೆ ಆಭರಣ ಹಸ್ತಾಂತರಿಸಿದರು.
ವಿಶಾಲವಾದ ಮಳಿಗೆ
ಬಲ್ಮಠದ ಮೆರಾಲ್ಡಾ ಮಳಿಗೆ ವಿಶಾಲವಾಗಿದ್ದು, ನಗರದ ಹೃದಯ ಭಾಗದಲ್ಲಿದೆ. ಹವಾನಿಯಂತ್ರಿತ ವ್ಯವಸ್ಥೆ ಗ್ರಾಹಕರಿಗೆ ಆರಾಮದಾಯಕ ಖರೀದಿಗೆ ಅವಕಾಶ ನೀಡಲಿದೆ. ವಾಹನಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವೂ ಇದೆ. ಆಭರಣ ಕ್ಷೇತ್ರದಲ್ಲಿ ನುರಿತ ಸಿಬಂದಿ ಸೇವೆ ಒದಗಿಸಲಿದ್ದಾರೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಮೆರಾಲ್ಡಾ ಗ್ರೂಪ್‌ನ ಚೇರ್ಮನ್ ಅಬ್ದುಲ್ ಜಲೀಲ್, ಕಾರ್ಯಕಾರಿ ನಿರ್ದೇಶಕರಾದ ಜೆಸೀಲ್ ಮೊಹಮ್ಮದ್ ಹಾಗೂ ಶಾನಿಲ್ ಮೊಹಮ್ಮದ್ ಭಾಗವಹಿಸಿದ್ದರು. ಶಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.
50,000 ರೂ. ಖರೀದಿಗೆ ಚಿನ್ನದ ನಾಣ್ಯ
ಕೇರಳದ ಕೊಚ್ಚಿ, ಕೋಯಿಕ್ಕೋಡ್, ಕಣ್ಣೂರಿನಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿರುವ “ಮೆರಾಲ್ಡಾ ಜುವೆಲ್ಸ್’ ಸಂಸ್ಥೆ ಮಂಗಳೂರಿನ ಮೂಲಕ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿದೆ. ಚಿನ್ನ, ವಜ್ರ, ಜೆಮ್‌ಸ್ಟೋನ್, ಪೊಲ್ಕಿ, ಪ್ಲಾಟಿನಂ ಆಭರಣಗಳ ವಿಪುಲ ಸಂಗ್ರಹವಿದ್ದು, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಒಪ್ಪುವ ಆಭರಣಗಳು, ನೆಕ್ಲೆಸ್, ಪೆಂಡೆಂಟ್, ಉಂಗುರ, ಕಿವಿಯೋಲೆ, ಬಳೆಗಳು, ನಿತ್ಯ ಬಳಕೆಯ ಆಭರಣಗಳು ಲಭ್ಯವಿವೆ. ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹ ಹೊಂದಿದೆ. ಮಂಗಳೂರಿನ ಚಿನ್ನಾಭರಣ ಪ್ರಿಯರನ್ನು ತನ್ನ ಅತ್ಯಾಕರ್ಷಕ ವಿನ್ಯಾಸ, ಶ್ರೀಮಂತ ಕಲಾತ್ಮಕತೆಯ ಆಭರಣಗಳ ಮೂಲಕ ಆಕರ್ಷಿಸಲು ಮೆರಾಲ್ಡಾ ಜುವೆಲ್ಸ್ ಸಿದ್ಧವಾಗಿದೆ. ಮಳಿಗೆಯ ಉದ್ಘಾಟನ ಕೊಡುಗೆಯಾಗಿ ಮುಂದಿನ ಎರಡು ವಾರ 50 ಸಾವಿರ ರೂ. ಖರೀದಿಗೆ ಚಿನ್ನದ ನಾಣ್ಯ ಉಡುಗೊರೆಯಾಗಿ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.