Mescom: ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ

ಪ್ರತೀ ಯೂನಿಟ್‌ಗೆ ಸರಾಸರಿ 0.59 ರೂ. ಹೆಚ್ಚಳಕ್ಕೆ ಕೆಇಆರ್‌ಸಿಗೆ ಪ್ರಸ್ತಾವನೆ

Team Udayavani, Jan 7, 2024, 11:36 PM IST

power lines

ಮಂಗಳೂರು: ಹೊಸ ವರ್ಷದ ಆರಂಭದಲ್ಲೇ ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂ ದರ ಏರಿಕೆಯ ಆಘಾತವಿಕ್ಕುವ ಸುಳಿವು ನೀಡಿದೆ. 2024-25ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 0.59 ರೂ. ದರ ಏರಿಕೆ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ.

ಪ್ರಸಕ್ತ ಚಾಲ್ತಿಯಲ್ಲಿ ರುವ ದರಗಳಿಂದ ಮೆಸ್ಕಾಂ ತನ್ನ ಆದಾಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದರ ಏರಿಕೆ ಅಗತ್ಯ ಎಂಬುದು ಮೆಸ್ಕಾಂ ಅಭಿಪ್ರಾಯ.
ಆದಾಯವನ್ನು ಮೀರಿದ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ದರ ಏರಿಕೆ ಯನ್ನು ನಿಲ್ಲಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈಗಿನ ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಈಗ ಪ್ರತೀ ಯೂನಿಟ್‌ಗೆ ಸರಾಸರಿ ಸರಬ ರಾಜು ವೆಚ್ಚ 8.91 ರೂ. ಇದ್ದು, ಪ್ರಸಕ್ತ ದರಗಳಿಂದ ಸರಾಸರಿ ವಸೂಲಾತಿ ಪ್ರತೀ ಯೂನಿಟ್‌ಗೆ 8.32 ರೂ. ಆಗಿದೆ. ಹೀಗಾಗಿ ಪ್ರತೀ ಯೂನಿಟ್‌ಗೆ ಆದಾಯ ಕೊರತೆ 0.59 ರೂ. ಎಂಬುದು ಮೆಸ್ಕಾಂ ವಾದ.

ವೆಚ್ಚವೇ ಹೊರೆ!
ಆರ್ಥಿಕ ವರ್ಷ 2024-2025ಕ್ಕೆ 4,929.98 ಕೋ.ರೂ. ಆದಾಯ ನಿರೀಕ್ಷಿಸ  ಲಾಗಿದ್ದು, ವೆಚ್ಚ ಮಾತ್ರ 5,281.93 ಕೋ.ರೂ. ಆಗಲಿದೆ. 351.96 ಕೋ.ರೂ. ಕೊರತೆ ಉಲ್ಲೇಖೀಸಿದ ಮೆಸ್ಕಾಂ 0.59 ರೂ. ಏರಿಕೆಗೆ ಒಲವು ತೋರಿದೆ.

ಪ್ರಸ್ತಾವನೆಯಲ್ಲೇನಿದೆ?
ಎಲ್‌ಟಿ-2ಎ ಗೃಹ ಬಳಕೆ ದೀಪ, ಸಂಯುಕ್ತ ದೀಪ/ಸಂಪೂರ್ಣ ವಿದ್ಯುತ್‌ ಗೃಹ, ವಾಣಿಜ್ಯೇತರ ದೀಪ, ತಾಪನ ಹಾಗೂ ಮೊಟಿವ್‌ ಪವರ್‌ ಸ್ಥಾಪನಗಳ 50 ಕಿ. ವ್ಯಾಟ್‌ವರೆಗೆ ಪ್ರತೀ ಕಿ. ವ್ಯಾಟ್‌ಗೆ ಈಗ 110 ರೂ. ಇರುವುದನ್ನು ಮುಂದೆ 115 ರೂ. ಏರಿಸಬೇಕು. 50 ಕಿ.ವ್ಯಾ. ಮೀರಿದ ಪ್ರತೀ ಹೆಚ್ಚುವರಿ ಕಿ. ವ್ಯಾಟ್‌ಗೆ 210 ರೂ. ಇರುವುದು 215 ರೂ.ಗೆ ಏರಿಸಬೇಕು. ಉಳಿದಂತೆ ವಾಣಿಜ್ಯ ಬಳಕೆ, ನೀರಾವರಿ ಪಂಪುಸೆಟ್‌ಗಳು, ರಬ್ಬರ್‌, ಕಾಫಿ, ಟೀ, ಅಡಿಕೆ ಬೆಳೆ, ಕೈಗಾರಿಕೆಗಳು ಸಹಿತ ವಿವಿಧ ಬಳಕೆಯ ದರ ಏರಿಕೆಗೆ ಪ್ರಸ್ತಾವನೆಯನ್ನು ಮೆಸ್ಕಾಂ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ.

ಭಾಗ್ಯಜ್ಯೋತಿಯೂ ತುಟ್ಟಿ!
ಎಲ್‌ಟಿ-1 ಭಾಗ್ಯಜ್ಯೋತಿ/ ಕುಟೀರ ಜ್ಯೋತಿಗೆ ಮಾಸಿಕ ಈಗ ಕನಿಷ್ಠ 100 ರೂ. ಇರುವುದನ್ನು 105 ರೂ.ಗೆ ಹಾಗೂ ಬಳಸಿದ ಪ್ರತೀ ಯೂನಿಟ್‌ಗೆ 8.61 ರೂ. ಇರುವು ದನ್ನು 8.91 ರೂ.ಏರಿಸುವ ಪ್ರಸ್ತಾವನೆ ಇದೆ.

2024-25ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 0.59 ರೂ. ದರ ಏರಿಕೆ ಪ್ರಸ್ತಾವನೆಯನ್ನು ಮೆಸ್ಕಾಂ ಸಲ್ಲಿಸಿದೆ. ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳ ಮೂಲಕ ವಿದ್ಯುತ್‌ ವಿತರಣ ಜಾಲದ ವ್ಯವಸ್ಥೆಯ ಅಭಿ ವೃದ್ಧಿಗೆ ಮೆಸ್ಕಾಂ ಆದ್ಯತೆ ನೀಡಿದೆ.
– ಡಿ. ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

5-vitla

Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.