ರನ್ ಮಳೆಗೆ ಸಾಕ್ಷಿಯಾಗುತ್ತಾ MI vs KKR ಪಂದ್ಯ; ಬೌಲಿಂಗ್ ಆಯ್ದ ತಂಡ ಗೆಲ್ಲುವ ಪೆವರೀಟ್ !
Team Udayavani, Sep 23, 2020, 7:11 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಐಪಿಎಲ್‌ನ 13ನೇ ಆವೃತ್ತಿಯ 5ನೇ ಪಂದ್ಯ ಇಂದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವೆ ಅಬುಧಾಬಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿದೆ.
ಮುಂಬೈ ಈ ಮೈದಾನದಲ್ಲಿ ಈ ವರೆಗೆ ಎರಡು ಪಂದ್ಯಗಳನ್ನು ಆಡಿದ್ದು ಎರಡರಲ್ಲೂ ಸೋತಿದೆ. ಇಲ್ಲಿ ತಂಡವು ಈ ಋತುವಿನ ಆರಂಭಿಕ ಪಂದ್ಯವನ್ನು ಆಡಿತ್ತು. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿರುದ್ಧ ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದಕ್ಕೂ ಮುನ್ನ 2014ರಲ್ಲಿ ಕೆಕೆಆರ್ ಅವರನ್ನು 41 ರನ್‌ಗಳಿಂದ ಸೋಲಿಸಿತು.
ಯುಎಇಯಲ್ಲಿ ಮುಂಬೈನ ದಾಖಲೆ ಅತ್ಯಂತ ಕಳಪೆಯಾಗಿದೆ. ಲೋಕಸಭಾ ಚುನಾವಣೆಯಿಂದಾಗಿ 2014 ರಲ್ಲಿ ಯುಎಇಯಲ್ಲಿ ಐಪಿಎಲ್ ಮೊದಲ 20 ಪಂದ್ಯಗಳು ನಡೆದವು. ಮುಂಬೈ ಇಲ್ಲಿ 5 ಪಂದ್ಯಗಳನ್ನು ಆಡಿ ಎಲ್ಲರಲ್ಲೂ ಸೋಲನುಭವಿಸಿದೆ. ಆದರೆ ಯುಎಇಯಲ್ಲಿ ಕೆಕೆಆರ್ 5 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದೆ ಮತ್ತು 3ರಲ್ಲಿ ಸೋತಿದೆ. ಕೆಕೆಆರ್ ಅಬುಧಾಬಿಯಲ್ಲಿ 3 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಜಯಗಳಿಸಿ 1ರಲ್ಲಿ ಸೋಲಿನ ಕಹಿ ಉಂಡಿದೆ.
ಮುಂಬೈ 4 ಬಾರಿ ಮತ್ತು ಕೊಲ್ಕತ್ತಾ 2 ಬಾರಿ ಚಾಂಪಿಯನ್
ಐಪಿಎಲ್ ಇತಿಹಾಸದಲ್ಲಿ ಮುಂಬೈ 4 ಬಾರಿ (2019, 2017, 2015, 2013) ಪ್ರಶಸ್ತಿಯನ್ನು ಗೆದ್ದಿದೆ. ಕಳೆದ ಬಾರಿ ಅವರು ಫೈನಲ್‌ನಲ್ಲಿ ಚೆನ್ನೈಯನ್ನು 1 ರನ್‌ಗಳಿಂದ ಮಣಿಸಿದ್ದರು. ಮುಂಬೈ ಇದುವರೆಗೆ 5 ಬಾರಿ ಫೈನಲ್‌ನಲ್ಲಿ ಆಡಿದೆ. ಕೋಲ್ಕತಾ ಇದುವರೆಗೆ ಎರಡು ಬಾರಿ (2014, 2012) ಫೈನಲ್ ಪಂದ್ಯವನ್ನು ಆಡಿದ್ದು, ಎರಡೂ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
The @KKRiders have won the toss and will field first against #MumbaiIndians #Dream11IPL #KKRvMI pic.twitter.com/WRmL5EM9SH
— IndianPremierLeague (@IPL) September 23, 2020
ಮುಂಬೈ ಗೆಲುವಿನ ದಾಖಲೆ ಹೆಚ್ಚು
ಐಪಿಎಲ್‌ನಲ್ಲಿ ಮುಂಬೈ ಶೇ. 57.44ರಷ್ಟು ಗೆಲುವಿನ ಪ್ರಮಾಣವನ್ನು ಹೊಂದಿದೆ. ಕೆಕೆಆರ್ ವಿರುದ್ಧದ ಲೀಗ್‌ನಲ್ಲಿ ನಡೆದ 188 ಪಂದ್ಯಗಳಲ್ಲಿ 109 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕಂಡಿದೆ. ಮುಂಬೈ ಇದುವರೆಗೆ 79 ಪಂದ್ಯಗಳಲ್ಲಿ ಸೋತಿದೆ. ಅದೇ ಸಮಯದಲ್ಲಿ ಕೆಕೆಆರ್ ಇದುವರೆಗೆ 178ರಲ್ಲಿ 92 ಪಂದ್ಯಗಳನ್ನು ಗೆದ್ದಿದೆ ಮತ್ತು 86 ಪಂದ್ಯಗಳಲ್ಲಿ ಸೋತಿದೆ. ಕೆಕೆಆರ್ ತಂಡವು ಶೇ. 52.52ರಷ್ಟು ಗೆಲ್ಲುವು ಸಾಧಿಸಿದೆ.
ಪಿಚ್ ಮತ್ತು ಹವಾಮಾನ ವರದಿ
ತಾಪಮಾನವು 29ರಿಂದ 38 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದು ಎನ್ನುತ್ತವೆ ಹವಾಮಾನ ವರದಿಗಳು. ಪಿಚ್ ಬ್ಯಾಟಿಂಗ್‌ಗೆ ಸಹಾಯ ಮಾಡುತ್ತದೆ. ಇಲ್ಲಿ ನಿಧಾನಗತಿಯ ವಿಕೆಟ್ ಆಗಿರುವುದು ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ಆದ್ಯತೆ ನೀಡುತ್ತದೆ. ಕಳೆದ 45 ಟಿ 20ಗಳಲ್ಲಿ ಇಲ್ಲಿ ಮೊದಲ ಬೌಲಿಂಗ್ ತಂಡ ಶೇ. 56.8ರಷ್ಟು ಪಂದ್ಯಗಳನ್ನು ಗೆದ್ದಿವೆ.
- ಒಟ್ಟು ಟಿ 20: 45
- ಈ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ತಂಡ ಗೆದ್ದ ಪಂದ್ಯ: 19
- ಮೊದಲ ಬೌಲಿಂಗ್ ತಂಡ ಗೆದ್ದ ಪಂದ್ಯ:26
- ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್: 137
- ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಮೊತ್ತ: 128
ಮುಖಾಮುಖಿ
ಕೆಕೆಆರ್ ಮತ್ತು ಮುಂಬೈ ವಿರುದ್ಧ ಕೇವಲ 25 ಪಂದ್ಯಗಳನ್ನು ಆಡಿದ್ದು, ಕಳೆದ 10 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಇದರಲ್ಲಿ, ಮುಂಬೈ ಅತಿ ಹೆಚ್ಚು 19 ಪಂದ್ಯಗಳನ್ನು ಗೆದ್ದರೆ, ಅದು 6ರಲ್ಲಿ ಸೋತಿದೆ. 1 ಪಂದ್ಯವು ಫಲಿತಾಂಶ ನೀಡಿರಲಿಲ್ಲ. ಕಳೆದ 10 ಪಂದ್ಯಗಳಲ್ಲಿ ಕೆಕೆಆರ್ ಕೇವಲ ಒಂದು ಬಾರಿ ಮಾತ್ರ ಮುಂಬೈಯನ್ನು ಸೋಲಿಸಲು ಸಾಧ್ಯವಾಗಿದೆ. ಮುಂಬೈ ತಂಡವು ಈ ಪಂದ್ಯವನ್ನು ಗೆದ್ದರೆ ಅದು ಒಂದು ತಂಡದ ವಿರುದ್ಧ 20+ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಲಿದೆ.
A look at the Playing XI for #KKRvMI #Dream11IPL pic.twitter.com/NJD1QQTqhM
— IndianPremierLeague (@IPL) September 23, 2020
ಕೆಕೆಆರ್‌ಗೆ ಕಾರ್ತಿಕ್, ರಸ್ಸೆಲ್ ಮತ್ತು ನರೇನ್ ಕೀ-ಆಟಗಾರರು
ಆಫ್-ಸ್ಪಿನ್ನರ್ ಮತ್ತು ಓಪನರ್ ಬ್ಯಾಟ್ಸ್‌ಮನ್ ಸುನಿಲ್ ನರೈನ್ ಅವರನ್ನು ಹೊರತುಪಡಿಸಿ ಕೋಲ್ಕತ್ತಾಗೆ ಆಂಡ್ರೆ ರಸ್ಸೆಲ್ ಅವರಿಂದ ಹೆಚ್ಚಿನ ನಿರೀಕ್ಷೆಗಳಿವೆ. ರಸ್ಸೆಲ್ ಹೆಚ್ಚು ಬೌಲಿಂಗ್ ಮಾಡದಿದ್ದರೂ. 2019ರ ಐಪಿಎಲ್‌ನಲ್ಲಿ ರಸೆಲ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಕ್ರೀಡಾಕೂಟದಲ್ಲಿ 52 ಸಿಕ್ಸರ್ ಬಾರಿಸಿದ್ದರು. ಐಪಿಎಲ್‌ನಲ್ಲಿ ರಸ್ಸೆಲ್ ಸ್ಟ್ರೈಕ್ ರೇಟ್ 186.41.
ಮುಂಬಯಿಗೆ ರೋಹಿತ್, ಪೊಲಾರ್ಡ್, ಪಾಂಡ್ಯಾ ಬಲ
ನಾಯಕ ರೋಹಿತ್ ಶರ್ಮಾ ಅವರಲ್ಲದೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಮುಂಬೈಗೆ ಶಕ್ತಿಯಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಸೌರಭ್ ತಿವಾರಿ ಮತ್ತೆ ಮಧ್ಯಮ ಕ್ರಮದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಬೌಲಿಂಗ್ ವಿಭಾಗವು ಬುಮ್ರಾ, ಟ್ರೆಂಟ್ ಬೋಲ್ಟ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಅವಲಂಬಿಸಿದೆ. ಮುಂಬಯಿ ಕಳೆದ ಪಂದ್ಯದ ಸೋಲಿನ ಕಹಿಯನ್ನು ಮರೆಯಲು ಈ ಪಂದ್ಯ ನೆರವಾಗುತ್ತದೆಯೇ ಎಂದು ಕಾದುನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.