ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

Team Udayavani, Jul 14, 2020, 2:51 PM IST

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ಮೈಕಲೇಂಜಲೋ, ಇಟಲಿಯಲ್ಲಿ ಹುಟ್ಟಿ ಬೆಳೆದ ಜಗದ್ವಿಖ್ಯಾತ ಕಲಾವಿದ. ತನ್ನ 24ನೇ ವಯಸ್ಸಿನಲ್ಲೇ ಪಿಯೆಟ (ಶೋಕ) ಎಂಬ ಅತ್ಯದ್ಭುತ ಕಲಾಕೃತಿಯನ್ನು
ರಚಿಸಿ ಮಹಾ ಕಲಾವಿದರಿಂದಲೇ ಬೆನ್ತಟ್ಟಿಸಿಕೊಂಡ ಗಟ್ಟಿಗ ಈತ. ಈತನ ಮೋಸೆಸ್‌ ಮತ್ತು ಡೇವಿಡ್ ‌ಕಲಾಕೃತಿಗಳನ್ನು ನೋಡಲು ಇಂದಿಗೂ ಪ್ರತಿ ವರ್ಷ ಸಾಲುಗಟ್ಟಿ ನಿಲ್ಲುವವರು ಲಕ್ಷಾಂತರ ಮಂದಿ. ರೋಮ್‌ ಮತ್ತು ಫ್ಲಾರೆನ್ಸ್ ನಗರಗಳಲ್ಲಿ ನೂರಾರು ಚಾಪೆಲ್, ಪ್ರಾರ್ಥನಾ ಮಂದಿರ, ಸ್ಮಾರಕಗಳನ್ನು ಕಟ್ಟಿದ, ಕಟ್ಟುವ ಉಸ್ತುವಾರಿ ನಿಭಾಯಿಸಿದ ಹಿರಿಮೆ ಮೈಕಲೇಂಜಲೋನದು.

ಆತ 88 ವರ್ಷ ಬದುಕಿದ. ವಾಸ್ತುವಿದ್ಯೆ (ಸಿವಿಲ್‌ ಎಂಜಿನಿಯರಿಂಗ್‌), ಮೂರ್ತಿಶಿಲ್ಪ, ಚಿತ್ರಕಲೆ ಮತ್ತು ಕಾವ್ಯ – ಈ ನಾಲ್ಕರಲ್ಲೂ ಸರಿಸಮನಾದ ಸಾಧನೆ, ಪ್ರೌಢಿಮೆ ಮೆರೆದು ಹೆಸರುಮಾಡಿದ್ದ. ಇಡೀ ರೋಮ್‌ ಸಾಮ್ರಾಜ್ಯದಲ್ಲೇ ಮನೆಮಾತಾಗಿದ್ದ. ಮೈಕಲೇಂಜ ಲೋಗೆ ಒಂದಲ್ಲ, ನಾಲ್ಕು ಆತ್ಮಗಳಿವೆ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದರು. ಜೀವಿತದ ಕೊನೆ ಸಮೀಪಿಸುವಷ್ಟರಲ್ಲಿ ಆತ ಎಷ್ಟು ಪ್ರಸಿದ್ಧನಾಗಿದ್ದನೆಂದರೆ, ಪ್ರತಿ ದಿನ ಅವನನ್ನು ಭೇಟಿಯಾಗಲು ವಿದ್ಯಾರ್ಥಿಗಳಿಂದ ಹಿಡಿದು ರಾಜಮಹಾರಾಜರವರೆಗೆ ಅನೇಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ಹಾಗೆ ಅವನ ಯೋಗಕ್ಷೇಮ ವಿಚಾರಿಸಲು ಬಂದಾತನೊಬ್ಬ ಹೇಳಿದನಂತೆ, ಅಜ್ಜಾ, ನೀನಿಲ್ಲದ ರೋಮ್‌ ನಗರವನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಮೈಕಲೇಂಜಲೋ ಮಲಗಿದ್ದಲ್ಲೇ ತನ್ನ ಮುಖವನ್ನು ತುಸು ಸರಿಸಿ ಕಿಟಕಿಯ ಮೂಲಕ ಹೊರಗೆ ದೃಷ್ಟಿಹಾಯಿಸಿದನಂತೆ. ಅಲ್ಲಿ ಆತ ಕೆತ್ತಿ ನಿಲ್ಲಿಸಿದ ಪ್ರಾರ್ಥನಾ ಮಂದಿರದ ದೊಡ್ಡ ಬುರುಜು ಕಾಣುತ್ತಿತ್ತು. ಅದನ್ನು ನೋಡಿ ನಕ್ಕು ಆತ ಹೇಳಿದ, ರೋಮ್‌ ನಗರದಲ್ಲಿ ನಾನು ಇಲ್ಲದೇ ಹೋದಾಗ ತಾನೆ? ಅಂಥ ದಿನ ಬಂದಾಗ ಯೋಚನೆ ಮಾಡಿದರಾಯಿತು ಬಿಡು!

ಟಾಪ್ ನ್ಯೂಸ್

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.