Microsoft: “ಭಾರತದಲ್ಲಿ 75,000 ಮಹಿಳೆಯರಿಗೆ ಮೈಕ್ರೋಸಾಫ್ಟ್ ತರಬೇತಿ”
ಬೆಂಗಳೂರಿನಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಘೋಷಣೆ
Team Udayavani, Feb 8, 2024, 8:35 PM IST
ಬೆಂಗಳೂರು: ಮೈಕ್ರೋಸಾಫ್ಟ್ನ “ಕೋಡ್ ವಿದೌಟ್ ಬ್ಯಾರಿಯರ್” ಯೋಜನೆಯನ್ನು ಭಾರತಕ್ಕೂ ವಿಸ್ತರಿಸಲಾಗುವುದು. ಈ ಯೋಜನೆಯಡಿ 2024ರಲ್ಲಿ 75,000 ಮಹಿಳಾ ಡೆವಲಪರ್‌ಗಳಿಗೆ ತಾಂತ್ರಿಕ ತರಬೇತಿ ನೀಡಲಾಗುವುದು ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಲ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ “ಮೈಕ್ರೋಸಾಫ್ಟ್ ಎಐ ಟೂರ್” ಕಾರ್ಯಕ್ರಮದಲ್ಲಿ 1,100 ಡೆವಲಪರ್‌ಗಳು ಮತ್ತು ತಾಂತ್ರಿಕ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, “ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (ಎಐ) ಆವಿಷ್ಕಾರವನ್ನು ವೇಗಗೊಳಿಸಲು ಭಾರತೀಯ ಡೆವಲಪರ್‌ಗಳ ಕೊಡುಗೆ ಮಹತ್ತರವಾದದು’ ಎಂದು ಹೇಳಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಕ್ಲೌಡ್, ಎಐ ಮತ್ತು ಡಿಜಿಟಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ಲಿಂಗ ಅನುಪಾತವನ್ನು ತಗ್ಗಿಸಲು 2021ರಲ್ಲಿ ಮೈಕ್ರೋಸಾಫ್ಟ್ “ಕೋಡ್ ವಿದೌಟ್ ಬ್ಯಾರಿಯರ್” ಯೋಜನೆಯನ್ನು ಆರಂಭಿಸಿತು. ಇದರಡಿಯಲ್ಲಿ ಮಹಿಳಾ ಡೆವಲಪರ್‌ಗಳಿಗೆ ಕಂಪನಿಯು ತಾಂತ್ರಿಕ ಕೌಶಲ್ಯ ತರಬೇತಿಯನ್ನು ಒದಗಿಸುತ್ತದೆ. ಇದೇ ತಿಂಗಳು ಈ ಯೋಜನೆ ಭಾರತದಲ್ಲೂ ಆರಂಭವಾಗಲಿದ್ದು, ಈ ವರ್ಷ 75,000 ಭಾರತೀಯ ಮಹಿಳಾ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ತಾಂತ್ರಿಕ ತರಬೇತಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.