Isreal- Hamas: ಮಧ್ಯಪ್ರಾಚ್ಯ ಸಂಘರ್ಷ: ಆತಂಕದಲ್ಲಿ ವಿಶ್ವ ರಾಷ್ಟ್ರಗಳು


Team Udayavani, Oct 16, 2023, 11:16 PM IST

isreal – palestine flags

ಇಸ್ರೇಲ್‌-ಹಮಾಸ್‌ ಸಮರ ಈಗ ಒಂದರ್ಥದಲ್ಲಿ ಏಕಪಕ್ಷೀಯವಾಗಿ ಸಾಗಿದೆ. ಹತ್ತು ದಿನಗಳ ಹಿಂದೆ ಹಮಾಸ್‌ ಉಗ್ರರು ಇಸ್ರೇಲ್‌ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಏಕಾಏಕಿ 5,000ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿ ಈ ಯುದ್ಧಕ್ಕೆ ನಾಂದಿ ಹಾಡಿದ್ದರು. ಹಮಾಸ್‌ ಉಗ್ರರ ಈ ದಾಳಿಯಿಂದ ಕ್ಷಣಕಾಲ ತತ್ತರಿಸಿದ್ದ ಇಸ್ರೇಲ್‌, ದೇಶದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಿ, ಪ್ಯಾಲೆಸ್ತೀನ್‌ ವಿರುದ್ಧ ನೇರ ಯುದ್ಧವನ್ನು ಸಾರಿತು. ಅದರಂತೆ ಇಸ್ರೇಲ್‌, ಪ್ಯಾಲೆಸ್ತೀನ್‌, ಗಾಜಾ ಪಟ್ಟಿಯ ಮೇಲೆ ಒಂದೇ ಸಮನೆ ವಾಯುದಾಳಿಗಳನ್ನು ನಡೆಸಿ ಹಮಾಸ್‌ ಉಗ್ರರ ದಮನ ಕಾರ್ಯದಲ್ಲಿ ನಿರತವಾಗಿದೆ. ಕಳೆದ ಮೂರು ದಿನಗಳಿಂದ ಇಸ್ರೇಲ್‌ ಸೇನೆ, ಗಾಜಾ ಪಟ್ಟಿಯಲ್ಲಿ ಭೂ ದಾಳಿಯನ್ನು ಕೈಗೆತ್ತಿಕೊಂಡಿದ್ದು ಇದೇ ವೇಳೆ ನೌಕಾ ದಾಳಿಯನ್ನೂ ನಡೆಸುವು ದಾಗಿಯೂ ಘೋಷಿಸಿದೆ.

ಇಸ್ರೇಲ್‌ ಸೇನೆ ನಡೆಸುತ್ತಿರುವ ಸತತ ದಾಳಿಗೆ ಹಮಾಸ್‌ ಉಗ್ರರ ತಲೆ ಉರುಳುತ್ತಲೇ ಸಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಯೋಧರು, ನಾಗರಿಕರು ಸಾವನ್ನಪ್ಪಿದ್ದಾರೆ. ಹಮಾಸ್‌ ಉಗ್ರರ ಅತಿರೇಕಕ್ಕೆ ಉಭಯ ದೇಶಗಳ ಅಮಾಯಕ ನಾಗರಿಕರು, ಯೋಧರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಗಗನಚುಂಬಿ ಕಟ್ಟಡಗಳು ಧರಾಶಾಯಿಯಾಗಿವೆ. ನಿರಂತರವಾಗಿ ನಡೆಯು ತ್ತಿರುವ ರಾಕೆಟ್‌, ಕ್ಷಿಪಣಿ ದಾಳಿಗಳಿಂದಾಗಿ ಯುದ್ಧ ಸಂತ್ರಸ್ತ ಪ್ರದೇಶಗಳ ಜನರು ಪ್ರತೀಕ್ಷಣವನ್ನೂ ಜೀವಭಯ ದಿಂದ ಕಳೆಯುತ್ತಿದ್ದಾರೆ. ಇಸ್ರೇಲ್‌ ಸರಕಾರ ಕಳೆದ ಹಲವಾರು ದಶಕಗಳಿಂದ ಪ್ಯಾಲೆಸ್ತೀನಿಯರ ಮೇಲೆ ನಡೆಸುತ್ತ ಬಂದಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಿರುವುದಾಗಿ ಹಮಾಸ್‌ ಉಗ್ರಗಾಮಿ ಸಂಘಟನೆಯ ನಾಯಕರು ಇಸ್ರೇಲ್‌ ಮೇಲಣ ದಾಳಿಯನ್ನು ಸಮರ್ಥಿಸಿ ಕೊಂಡಿದ್ದಾರೆ. ಆದರೆ ಇಸ್ರೇಲ್‌ ಅಧ್ಯಕ್ಷರು ಈ ಬಾರಿ ಹಮಾಸ್‌ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿಯೇ ಯುದ್ಧಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ.

ಇವೆಲ್ಲವೂ ಯುದ್ಧಪೀಡಿತ ಪ್ರದೇಶಗಳ ಸದ್ಯದ ಸ್ಥಿತಿಗತಿ ಮತ್ತು ಆ ದೇಶಗಳ ನಾಯಕರು ತಮ್ಮ ತಮ್ಮ ನಡೆಯನ್ನು ಸಮರ್ಥಿಸಿ ನೀಡುತ್ತಿರುವ ಹೇಳಿಕೆಗಳ ಒಂದು ಸ್ಥೂಲ ಚಿತ್ರಣ. ಆದರೆ ಈ ಯುದ್ಧದ ಪರಿಣಾಮ ಮಾತ್ರ ಇಡೀ ವಿಶ್ವದ ಮೇಲೆ ಬೀಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಹಮಾಸ್‌ ಉಗ್ರರು ತೆಪ್ಪಗಾಗಿ ಇಸ್ರೇಲ್‌ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸದೇ ಹೋದಲ್ಲಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳುವ ಸಾಧ್ಯತೆಗಳಿವೆ. ಈಗಾಗಲೇ ವಿಶ್ವದ ಬಲಾಡ್ಯ ರಾಷ್ಟ್ರಗಳು ಇಸ್ರೇಲ್‌ನ ಬೆನ್ನಿಗೆ ನಿಂತರೆ, ಇಸ್ರೇಲ್‌ ವಿರೋಧಿ ರಾಷ್ಟ್ರಗಳಾದ ಇರಾನ್‌, ಸಿರಿಯಾ, ಲೆಬನಾನ್‌ ಮತ್ತಿತರ ಬೆರಳೆಣಿಕೆಯ ರಾಷ್ಟ್ರಗಳು ಹಮಾಸ್‌ ಉಗ್ರರ ಪರವಾಗಿ ನಿಂತಿರುವುದೇ ಅಲ್ಲದೆ ಅವರಿಗೆ ಶಸ್ತ್ರಾಸ್ತ್ರಗಳ ಪೂರೈಕೆ, ಹಣಕಾಸಿನ ನೆರವು, ಆಶ್ರಯ ಮತ್ತಿತರ ಸಹಕಾರಗಳನ್ನು ನೀಡುತ್ತಿವೆ. ತನ್ಮೂಲಕ ಈ ರಾಷ್ಟ್ರಗಳು ಕೂಡ ಯುದ್ಧದಲ್ಲಿ ಪರೋಕ್ಷವಾಗಿ ತೊಡಗಿಸಿ ಕೊಂಡಿವೆ. ಸಹಜವಾಗಿಯೇ ಈ ರಾಷ್ಟ್ರಗಳು ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾಗಿವೆ.

ಒಂದು ವೇಳೆ ಈ ರಾಷ್ಟ್ರಗಳು ತಮ್ಮ ನಿಲುವನ್ನು ಬದಲಿಸಿ ತಟಸ್ಥವಾದಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗ ಬಹುದು. ಇದನ್ನು ಬಿಟ್ಟು ಈ ರಾಷ್ಟ್ರಗಳು ಹಮಾಸ್‌ ಉಗ್ರರಿಗೆ ತಮ್ಮ ನೆರವನ್ನು ಮುಂದುವರಿಸಿದ್ದೇ ಆದಲ್ಲಿ ಇಸ್ರೇಲ್‌ ಈ ರಾಷ್ಟ್ರಗಳನ್ನು ಅದರಲ್ಲೂ ಮುಖ್ಯವಾಗಿ ಇರಾನ್‌ ವಿರುದ್ಧ ನೇರ ಸಮರ ಸಾರಿದ್ದೇ ಆದಲ್ಲಿ ಈ ಯುದ್ಧದ ಪರಿಣಾಮ ಘನಘೋರ ವಾಗಿರಲಿದೆ.

2019ರ ಅಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಾಮಿಕ, ಅನಂತರದ ಎರಡು ವರ್ಷಗಳಲ್ಲಿ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದಾಗ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಕುಸಿದುಬಿದ್ದದ್ದು ಈಗ ಇತಿಹಾಸ. ಆ ಬಳಿಕ ಒಂದಿಷ್ಟು ಚೇತರಿಕೆಯ ಲಕ್ಷಣ ಕಂಡುಬಂದರೂ ಧುತ್ತನೆ ಎಂದು ಬಂದೆರಗಿದ ರಷ್ಯಾ-ಉಕ್ರೇನ್‌ ಯುದ್ಧ ವಿಶ್ವ ರಾಷ್ಟ್ರಗಳನ್ನು ಕಂಗೆಡಿಸಿತು. ಈ ಯುದ್ಧ, ನೇರ ಪರಿಣಾಮ ಬೀರಿದ್ದು ಆಹಾರಧಾನ್ಯಗಳ ಪೂರೈಕೆ ಸರಪಳಿ ಮೇಲೆ. ಇದು ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಆಹಾರ ಧಾನ್ಯಗಳ ಅಭಾವ ತಲೆದೋರುವಂತೆ ಮಾಡಿತು. ಕೆಲವು ಸಣ್ಣ ಮತ್ತು ಬಡ ರಾಷ್ಟ್ರಗಳು ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿ ಇಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು. ಇವೆಲ್ಲದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಲೇ ಸಾಗಿದ್ದು, ವಿಶ್ವದ ಬಲಿಷ್ಠ ರಾಷ್ಟ್ರಗಳಾದಿಯಾಗಿ ಬಹುತೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವಂತಾಗಿದೆ. ಈ ಆರ್ಥಿಕ ಹಿಂಜರಿತದಿಂದ ಹೊರಬರಲು ವಿಶ್ವ ರಾಷ್ಟ್ರಗಳು ಹರಸಾಹಸ ಪಡುತ್ತಿರುವಾಗಲೇ ಈಗ ಇಸ್ರೇಲ್‌-ಹಮಾಸ್‌ ಸಮರ ಆರಂಭಗೊಂಡಿರುವುದು ಈ ರಾಷ್ಟ್ರಗಳನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯ ಮೇಲೆ ಈ ಸಮರ ಪರೋಕ್ಷ ಪರಿಣಾಮ ಬೀರಿದೆ. ಕಚ್ಚಾತೈಲದ ಬೆಲೆ ಶೇ. 6-8ರಷ್ಟು ಏರಿಕೆಯನ್ನು ಕಂಡಿದೆ. ಯುದ್ಧದ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 82 ಡಾಲರ್‌ಗಳ ಆಸುಪಾಸಿನಲ್ಲಿದ್ದರೆ ಈಗ 90 ಡಾಲರ್‌ಗಳ ಗಡಿ ದಾಟಿದೆ. ಷೇರು ಮಾರುಕಟ್ಟೆ, ಆಹಾರಧಾನ್ಯಗಳು, ಕೈಗಾರಿಕ ಉತ್ಪಾದನೆ, ಚಿನಿವಾರ ಮಾರುಕಟ್ಟೆ… ಹೀಗೆ ಎಲ್ಲೆಡೆಯೂ ಒಂದು ತೆರನಾದ ಅನಿಶ್ಚತತೆಯ ವಾತಾವರಣ ನೆಲೆಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ದರ ತುಸು ಹಿನ್ನಡೆಯನ್ನು ಕಂಡಿದೆ. ಯುದ್ಧದಂತಹ ವಿದ್ಯಮಾನಗಳು ಸಂಭವಿಸಿದಾಗ ಇಂತಹ ಸಣ್ಣ ಪ್ರಮಾಣದ ಕಂಪನಗಳು ಸಹಜ. ಆದರೆ ಇಸ್ರೇಲ್‌ನ ಮುಂದಿನ ನಡೆ ಏನು? ಎಂಬುದರ ಮೇಲೆ ನಿಂತಿದೆ ಇಡೀ ಜಾಗತಿಕ ಆರ್ಥಿಕತೆಯ ಭವಿಷ್ಯ.

ಇಸ್ರೇಲ್‌ ಈ ಯುದ್ಧವನ್ನು ಉಗ್ರರ ದಮನಕ್ಕೆ ಮಾತ್ರವೇ ಸೀಮಿತಗೊಳಿಸಲಿದೆಯೇ ಅಥವಾ ಹಮಾಸ್‌ ಉಗ್ರರಿಗೆ ನೆರವು ನೀಡುತ್ತಿರುವ ಇರಾನ್‌, ಲೆಬನಾನ್‌, ಸಿರಿಯಾ ವಿರುದ್ಧವೂ ದಾಳಿಯನ್ನು ನಡೆಸಲು ಮುಂದಾಗಲಿದೆಯೇ- ಇದು ಸದ್ಯ ವಿಶ್ವ ರಾಷ್ಟ್ರಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆ. ಕಾರಣ ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಇರಾನ್‌ ಮುಂಚೂಣಿ ಯಲ್ಲಿದ್ದು ಇದು ಜಾಗತಿಕ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಪೂರೈಸುತ್ತಿದೆ. ಒಂದು ವೇಳೆ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಈ ಯುದ್ಧದಲ್ಲಿ ಸಿರಿಯಾ, ಇರಾನ್‌, ಲೆಬನಾನ್‌ ನೇರವಾಗಿ ಪಾಲ್ಗೊಂಡಲ್ಲಿ ಅಥವಾ ಇಸ್ರೇಲ್‌ ಈ ರಾಷ್ಟ್ರಗಳ ವಿರುದ್ಧವೂ ಸಮರ ಸಾರಿದಲ್ಲಿ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಭಾರೀ ಏರಿಕೆಯನ್ನು ಕಾಣಲಿದ್ದು ತೈಲ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಷ್ಟು ಮಾತ್ರವಲ್ಲದೆ ಕಚ್ಚಾತೈಲ, ಆಹಾರ ಧಾನ್ಯಗಳ ಸಹಿತ ಸರಕು ಸಾಗಣೆಗಳ ಪ್ರಮುಖ ಜಲಮಾರ್ಗಗಳ ಮೇಲೂ ಪರಿಣಾಮ ಬೀರಲಿದ್ದು ಒಟ್ಟಾರೆ ಪೂರೈಕೆ ಜಾಲವೇ ಅತಂತ್ರವಾಗಲಿದೆ. ಹೀಗಾದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕತೆ ಗಂಭೀರ ಪರಿಣಾಮ ಎದುರಿಸಲಿದೆ. ಈ ಹಿಂದಿನ ನಿದರ್ಶನಗಳಲ್ಲಿ ಇಂತಹ ಕಠಿನತಮ ಸ್ಥಿತಿಗೆ ವಿಶ್ವರಾಷ್ಟ್ರಗಳು ಸಾಕ್ಷಿಯಾಗಿದ್ದನ್ನು ಮರೆಯುವಂತಿಲ್ಲ.

ಹೀಗಾಗಿಯೇ ಜಾಗತಿಕ ರಾಷ್ಟ್ರಗಳು ಈ ಯುದ್ಧ ಆದಷ್ಟು ಬೇಗ ಅಂತ್ಯ ಕಾಣಲಿ ಎಂದು ಆಶಿಸುತ್ತಿವೆ. ಇವೆಲ್ಲವೂ ವಾಣಿಜ್ಯ-ವ್ಯವಹಾರ-ಆರ್ಥಿಕತೆಯ ಕಥೆಗಳಾದರೆ ಮನಕುಲದ ನಾಶಕ್ಕೆ ಕಾರಣ ವಾಗು ತ್ತಿರುವ ಈ ಯುದ್ಧವೆಂಬ ಮಹಾಮಾರಿಗೆ ಮದ್ದು ಅರೆಯುವವರಾರು ಎಂದು ನಾಗರಿಕ ಸಮಾಜ ತಲೆಕೆಡಿಸಿಕೊಳ್ಳುತ್ತಿದೆ.

 ಹರೀಶ್‌ ಕೆ.

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.